NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ಸಂಸ್ಥೆ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯ ತುಘಲಕ್ ದರ್ಬಾರ್

ನಡತೆ ಮತ್ತು ಶಿಸ್ತು 1971 19(2) ಕಾಯ್ದೆ ದುರುಪಯೋಗ ಪಡಿಸಿಕೊಂಡು ನೌಕರರಿಗೆ ದಂಡ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ
  • ದಯವಿಟ್ಟು ಸಾರ್ವಜನಿಕರು ಗಮನಿಸಿ ನೊಂದ ಸಾರಿಗೆ ಕಾರ್ಮಿಕರಿಗೆಧ್ವನಿಯಾಗಿ ಮತ್ತು ಸಾರಿಗೆ ಕಾರ್ಮಿಕರ ಪಾಲಿನ ಆರಾಧ್ಯ ದೈವರಾಗಿ ಎಂದು ವಿನಂತಿಸಿಕೊಳ್ಳುತ್ತೇನೆ.
  • l ಶೌಕತ್ ಅಲಿ ಆಲೂರ್

ಕಲಬುರಗಿ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಭಾಗವಾನ್ ಅವರು  ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳನ್ನು ಗುರಿಯಾಗಿಸಿಕೊಂಡು ದಂಡ ವಿಧಿಸುತ್ತಿರುವ ಮೂಲಕ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ.

ಸರಕಾರ ಮತ್ತು ಸಾರಿಗೆ ನೌಕರರ ಮಧ್ಯೆ ಮುಷ್ಕರದ ನಂತರ ಸೌಹಾರ್ದ ವಾತಾವರಣ ನಿರ್ಮಾಣ ಗೊಂಡು ಸಂಸ್ಥೆಯ ಬಲವರ್ಧನೆಗೆ ಶ್ರಮಿಸುತ್ತಿರುವ ಸಚಿವ ಬಿ. ಶ್ರೀರಾಮುಲು ಪ್ರಯತ್ನಕ್ಕೆ ಇಂತಹ ಅಧಿಕಾರಿಗಳು ಅಡ್ಡಿಯಾಗುತ್ತಿದ್ದಾರೆ. ಇದನ್ನು ಸಚಿವರು ಗಂಭೀರವಾಗಿ ಪರಿಗಣಿಸಬೇಕು ಎನ್ನುವುದು ನಮ್ಮ ಮನವಿಯಾಗಿದೆ.

ಇನ್ನು ಕೆಲವು ಕಾರ್ಮಿಕ ವಿರೋಧಿ ಸಂಘಟನೆಗಳಿಗೆ ಇನಾಯತ್ ಭಗವಾನ್ ನೀರು ಹಾಕಿ ಬೆಳೆಸಿ ಕಾರ್ಮಿಕರ ಪರವಾದ ಕೂಟ ದಂತಹ ಸಂಘಟನೆಯ ಪದಾಧಿಕಾರಿಗಳಿಗೆ ಹಿಂಸೆ ನೀಡುತ್ತಿದ್ದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕೂಟ ಸಹ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ.

ಕೂಟದ ಪದಾಧಿಕಾರಿಗಳನ್ನು ಗುರಿಯಾಗಿಸಿಕೊಂಡು ಇನಾಯತ್ ಅವರು ದಂಡ ವಿಧಿಸುತ್ತಿರುವ ಮೂಲಕ ತುಘಲಕ್ ದರ್ಬಾರ್ ನಡೆಸುತ್ತಿರುವ ವಿಷಯ ಕುರಿತು ನಾಳೆ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರಲಾಗುವುದು. ಇಂತಹ ಷಢ್ಯಂತರಗಳಿಗೆ ಸಾರಿಗೆ ನೌಕರರು ಹೆದರದೇ ದಿಟ್ಟತನದ ಹೋರಾಟಕ್ಕೆ ಸಿದ್ದರಾಗೋಣಅಲ್ಲವೇ?

ಇನ್ನು ಹಲವು ನೌಕರರು ಅರ್ಧ ಸಂಬಳ ಅಂದರೆ ಇವರ ಮಾಸಿಕ ವೇತನ ಬಂದಿರುವುದು 4076 ಅವರಲ್ಲಿ ಸಂಸ್ಥೆ ಕೊಟ್ಟಿರುವುದು ಅರ್ಧ ಸಂಬಳ ಅಂದರೆ 2038 ರೂ. ನೌಕರನೊಬ್ಬನಿಗೆ ದಂಡ ಹಾಕಿರುವುದು 18200 ರೂ.

ಇದರಿಲ್ಲಿ 3640 ರೂ.ಗಳಂತೆ 5ಸಮ ಕಂತುಗಳಾಗಿ ಕಡಿತಗೊಳಿಸಲಾಗಿದೆ ಇದು ನ್ಯಾಯವೇ. ಸಾರಿಗೆ ನೌಕರರು ಕುಟುಂಬ ನಿರ್ವಹಣೆ ಮಾಡುವುದು ಹೇಗೆ? ಮಕ್ಕಳ ವಿದ್ಯಾಭ್ಯಾಸ ಹೇಗೆ ಮಾಡಿಸುವುದು? ಮನೆ ಬಾಡಿಗೆ ಕಟ್ಟೋದ್ಹೇಗೆ? ಹಬ್ಬ ಆಚರಣೆ ಮಾಡುವುದಾದರೂ ಹೇಗೆ?

ಜನಸಾಮಾನ್ಯರಾಗಲಿ ರಾಜ್ಯದ ಮೂಲೆ ಮೂಲೆಯಲ್ಲಿರುವ ಎಲ್ಲಾ ಮಾಧ್ಯಮ ಪ್ರತಿನಿಧಿಗಳು ಪ್ರತಿಯೊಬ್ಬರೂ ಯೋಚಿಸಬೇಕಾದ ಸಂದೇಶ ದಯವಿಟ್ಟು ಸಾರ್ವಜನಿಕರು ಗಮನಿಸಿ ನೊಂದ ಸಾರಿಗೆ ಕಾರ್ಮಿಕರಿಗೆಧ್ವನಿಯಾಗಿ ಮತ್ತು ಸಾರಿಗೆ ಕಾರ್ಮಿಕರ ಪಾಲಿನ ಆರಾಧ್ಯ ದೈವರಾಗಿ ಎಂದು ವಿನಂತಿಸಿಕೊಳ್ಳುತ್ತೇನೆ.

l ಶೌಕತ್ ಅಲಿ ಆಲೂರ್
ಗೌರವಾಧ್ಯಕ್ಷರು, ಕಕರಸಾನೌ ಕೂಟ ಕಲಬುರಗಿ

Leave a Reply

error: Content is protected !!
LATEST
BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ