ಬೆಂಗಳೂರು: ಕೊರೊನಾ ಸೋಂಕು ಯಾರನ್ನು ಬಿಡುತ್ತಿಲ್ಲ. ಈ ಸಮಯದಲ್ಲಿ ಬಿಬಿಎಂಪಿ ಅಧಿಕಾರಿಗಳು ನಮಗೆ ಸೂಕ್ತ ಸಮಯಕ್ಕೆ ಕರೆದುಕೊಂಡು ಹೋಗುತ್ತಿಲ್ಲ ಎಂದು ಸೋಂಕಿಗೆ ಒಳಗಾದ ಸಾಮಾನ್ಯ ಜನರು ಹಿಡಿ ಶಾಪಹಾಕುತ್ತಿದ್ದಾರೆ. ಈನಡುವೆ ಸ್ವತಃ ಬಿಬಿಎಂಪಿ ಅಧಿಕಾರಿಗಳಿಗೆ ಕೊರೊನಾ ತಗುಲಿದರೆ ಅವರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತದೆ ಎಂದು ಹಲವರು ಅಂದು ಕ೦ಡಿದ್ದಾರೆ.
ಆದರೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವು ಸರ್ಕಾರ ಯಾವುದೇ ಅಧಿಕಾರಿಯಾಗಲಿ ಸಾಮಾನ್ಯ ಜನರಿಗಾಗಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ತಪಾಣೆ ಮಾಡಿಸುವ ಗೋಜಲಿಗೆ ಹೋಗುತ್ತಿಲ್ಲ. ಅಂದರೆ, ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ಮತ್ತು ಸಚಿವರು ಸಂಪಪೂರ್ಣ ವಿಫಲಾಗಿದ್ದಾರೆ ಎಂಬುವುದು ಇದರಿಂದ ತಿಳಿಯುತ್ತದೆ.
ಹೌದು ಬಿಬಿಎಂಪಿ ಜೆ.ಪಿ. ನಗರ ವಾರ್ಡ್ನ ಸಹಾಯಕ ಕಂದಾಯ ಅಧಿಕಾರಿ ಶರಣಮ್ಮ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಅವರಿಗೆ ಸಾಮಾನ್ಯ ಜನರಿಗೆ ಆದ ಅನುಭವವೇ ಆಗಿದೆ. ಅವರು ಕೂಡ ಹಲವಾರು ಆಸ್ತಪತ್ರೆಗಳನ್ನು ಅಲೆದಾಡಿದರೂ ಉನ್ನತ ಮಟ್ಟದ ಆಧಿಕಾರಿಗಳು ಅವರನ್ನು ದಾಖಲಿಸಿಕೊಳ್ಳಿ ಎಂದು ಆಸ್ಪತ್ರೆಯ ಪ್ರಮುಖರಿಗೆ ತಿಳಿಸಿದರು ಕ್ಯಾರೆ ಎಂದಿಲ್ಲ. ಇದರಿಂದ ಶರಣಮ್ಮ ಅವರು ಅನುಭವಿಸಿ ಕಷ್ಟವನ್ನು ವಿಡಿಯೋದಲ್ಲಿ ತೋಡಿಕೊಂಡಿದ್ದಾರೆ.
ಅವರು ವಿಡಿಯೋದಲ್ಲಿ ಹೇಳಿರುವುದು
ನಮಸ್ಕಾರ, ನಾನು ಎಆರ್ಒ ಶರಣಮ್ಮ. ನನಗೆ ವಾರದ ಹಿಂದೆ ಚಳಿ ಜ್ವರ ಬಂದಿತ್ತು. ಐದು ದಿನಗಳಿಂದ ನಾನು ಆಸ್ಪತ್ರೆಯಿಂದ ಆಸ್ಪತ್ರೆಗೆ ಹೋದರೆ ಅಲ್ಲಿ ಆರೋಗ್ಯ ತಪಾಸಣೆ ನಡೆಸಲಿಲ್ಲ. ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ಹಿಂದಕ್ಕೆ ಕಳುಹಿಸಿದರು. ಹೀಗೆ ಐದು ದಿನಗಳಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗಳನ್ನು ಸುತ್ತುತ್ತಲೇ ಪೂರ್ತಿ ನಿಶಕ್ತಳಾಗಿದ್ದೇನೆ. ಬಳಿಕ ರಾಮಯ್ಯ ಆಸ್ಪತ್ರೆಗೆ ಹೋದೆ ಅಲ್ಲೂ ಇದೇ ಉತ್ತರ. ನಾವು ನೋಡೋದೇ ಇಲ್ಲ ನಮ್ಮಲ್ಲಿ ಹಾಸಿಗೆ ಇಲ್ಲ. ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದರು.
ನಂತರ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದೆ. ಕುಳಿತುಕೊಳ್ಳುವುದಕ್ಕೂ ಆಗುತ್ತಿಲ್ಲ, ನಿಲ್ಲುವುದಕ್ಕೂ ಆಗುತ್ತಿಲ್ಲ, ಮಲಗುವುದಕ್ಕೂ ಆಗುತ್ತಿಲ್ಲ, ಉಸಿರಾಟ ಸಮಸ್ಯೆ ಇದೆ ಎಂದು ತಿಳಿಸಿದೆ. ನಾನು ಎಲ್ಲ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದ ಅವರು ಆಸ್ಟರ್ ಆಸ್ಪತ್ರೆಗೆ ಹೋಗುವಂತೆ ಹೇಳಿದರು. ಅಲ್ಲಿ ಅರ್ಧ ದಿನ ಕಾದೆ ಅಲ್ಲೂ ಅದೇ ಉತ್ತರ ನಮ್ಮ ಹತ್ತಿರ ಹಾಸಿಗೆ ಲಭ್ಯ ಇಲ್ಲ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ಕಳುಹಿಸಿಕೊಟ್ಟರು. ಏನಾದರೂ ವ್ಯವಸ್ಥೆ ಮಾಡಿ ಎಂದು ಅಂಗಲಾಚಿದೆ ಆದರೂ ನನ್ನನ್ನು ಒಳಗೆ ಬಿಟ್ಟುಕೊಂಡಿಲ್ಲ. ಐದು ದಿನ ಓಡಾಡಿ ಪೂರ್ತಿ ಶಕ್ತಿಹೀನಳಾಗಿದ್ದೇನೆ.
ನನ್ನ ಪರಿಸ್ಥಿತಿಯನ್ನು ನಮ್ಮ ವಲಯ ಕಂದಾಯ ಉಪ ಆಯುಕ್ತರ ಗಮನಕ್ಕೂ ತಂದೆ ಉಸಿರಾಟಕ್ಕೂ ತೊಂದರೆಯಾಗುತ್ತಿದೆ ಸಹಾಯ ಮಾಡಿ ಎಂದೆ. ಅವರು ಕಿಮ್ಸ್ ಆಸ್ಪತ್ರೆಗೆ ಹೋಗುವಂತೆ ಹೇಳಿದರು. ಅಲ್ಲಿ ಪರೀಕ್ಷೆ ಮಾಡಿಸಿದೆ. ನಿಶ್ಯಕ್ತಿಯಿಂದ ಕುಸಿದು ಕುಳಿತೆ. ಅಲ್ಲಿ ಅಮೃತ್ ರಾಜ್ ಸರ್ ಅವರಿಗೆ ಹೇಳಿದೆ. ಅವರು ವ್ಯವಸ್ಥೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು. ನನ್ನ ಆರೋಗ್ಯಕ್ಕೆ ಏನಾದರೂ ಆದರೆ ಯಾರು ಜವಾಬ್ದಾರರು ಎಂದು ಅಳಲು ಹೇಳಿಕೊಂಡೆ.
ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾನು ಒಂದೇ ಒಂದು ದಿನವೂ ರಜೆ ಪಡೆಯದೆ ದುಡಿದಿದ್ದೇನೆ. ಆದರೆ ಆರೋಗ್ಯ ಸಮಸ್ಯೆ ಎದುರಾದಾಗ ಯಾರೂ ನೆರವಾಗುತ್ತಿಲ್ಲ. ನಿಮ್ಮ ಮಾತಿಗೆ ಯಾರೂ ಬೆಲೆ ಕೊಡುತ್ತಿಲ್ಲ. ಇನ್ನು ನಮ್ಮಂಥವರ ಮಾತನ್ನು ಯಾರು ಕೇಳುತ್ತಾರೆ ಎಂದು ಪ್ರಶ್ನಿಸಿದೆ. ಅಮೃತ್ ರಾಜ್ ಅವರ ಮಾತಿಗೂ ವೈದ್ಯರು ಬೆಲೆ ಕೊಡಲಿಲ್ಲ. ಮತ್ತೆ ಆಸ್ಟರ್ ಆಸ್ಪತ್ರೆಗೆ ಹೋಗುವಂತೆ ಅವರು ಹೇಳಿದರು ಅಲ್ಲಿ ಮತ್ತೆ ಅದೇ ರಾಗ ಹೇಳಿದರು. ಅರ್ಧ ದಿನವಾದರೂ ಚಿಕಿತ್ಸೆ ನೀಡಿ ಎಂದು ಕೋರಿದೆ ನಿಮಗೆ ಕೋವಿಡ್ ಸೋಂಕು ದೃಢಪಟ್ಟಿದೆ ಬೇರೆ ಆಸ್ಪತ್ರೆಗೆ ಹೋಗಿ ಎಂದರು.
ಕೊನೆಗೆ ಬ್ಯಾಟರಾಯನಪುರದಲ್ಲಿ ಪಾರೋಲೈಫ್ ಆಸ್ಪತ್ರೆಯ ವೈದ್ಯೆ ಡಾ. ಕವಿತಾ ನೆರವಿಗೆ ಬಂದರು. ಸದ್ಯಕ್ಕೆ ಇಲ್ಲಿ ದಾಖಲಾಗಿದ್ದೇನೆ. ನನಗೆ ಮಾತನಾಡುವುದಕ್ಕೂ ಆಗುತ್ತಿಲ್ಲ. ಎಲ್ಲೂ ಹಾಸಿಗೆ ಇಲ್ಲ ಎಂದರೆ ನಾವೇನು ಮಾಡಬೇಕು. ಅಧಿಕಾರಿಗಳಾದ ನಮಗೆ ಈ ಥರ ಆದರೆ ನಾವು ಹೇಗೆ ಕೆಲಸ ಮಾಡಬೇಕು. ವೈಯಕ್ತಿಕವಾಗಿ ನಮಗೆ ಸಮಸ್ಯೆ ಎದುರಾದಾಗ ಯಾರೂ ನೆರವಾಗದಿದ್ದರೆ ಹೇಗೆ ದಯಮಾಡಿ ನೆರವಾಗಿ ಎಂದು ಎಆರ್ಒ ಸಿಎಂ ಅವರಲ್ಲೂ ಅಂಗಲಾಚಿದ್ದಾರೆ.
ನಮಗೂ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ
ಕೋವಿಡ್ ಸೋಂಕು ದೃಢಪಟ್ಟ ಪೊಲೀಸ್ ಸಿಬ್ಬಂದಿಯ ಚಿಕಿತ್ಸೆಗಾಗಿ ಸರ್ಕಾರ ಪ್ರತ್ಯೇಕ ಆಸ್ಪತ್ರೆಯನ್ನು ವ್ಯವಸ್ಥೆ ಮಾಡಿದೆ. ಅದೇ ರೀತಿ ಸೋಂಕು ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಬಿಬಿಎಂಪಿ ಸಿಬ್ಬಂದಿಗೆ ಸೋಂಕು ತಗುಲಿದರೆ ಅವರ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಸೋಂಕು ದೃಢಪಟ್ಟ ಅಧಿಕಾರಿಗಳ ಮತ್ತು ನೌಕರರ ಜತೆ ನೇರ ಸಂಪರ್ಕ ಹೊಂದಿರುವ ಸಂಬಂಧಿಕರನ್ನು ಕ್ವಾರಂಟೈನ್ ಮಾಡಲು ಪಂಚತಾರ ಹೋಟೆಲ್ ಮೀಸಲಿಡಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಒತ್ತಾಯಿಸಿದ್ದಾರೆ.
ಬಿಬಿಎಂಪಿ ಸಿಬ್ಬಂದಿಯ ಸಾಮೂಹಿಕ ರಜೆ ಎಚ್ಚರಿಕೆ
ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಮೂಹಿಕ ರಜೆ ಹಾಕಲಿದ್ದೇವೆ. ಇದರಿಂದ ಎಲ್ಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಲಿವೆ ಎಂದು ಅಮೃತ್ ರಾಜ್ ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿಯಲ್ಲಿ ಇದುವರೆಗೆ 150ಕ್ಕೂ ಅಧಿಕ ಸಿಬ್ಬಂದಿ ಕೊರೊನಾ ಸೋಂಕಿನಿಂದ ನರಳುತ್ತಿದ್ದಾರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದರಿಂದ ಆತಂಕಗೊಂಡಿದ್ದಾರೆ. ಆದರೂ ನಮ್ಮವರ ಆರೋಗ್ಯದ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ. ಹಲವು ಬಾರಿ ಸಂಘದ ವತಿಯಿಂದ ನಾವು ಮನವಿ ಸಲ್ಲಿಸಿದ್ದರೂ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಮೃತ್ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
Yake nimge matra pratyeka vyavsthe beka samanya janakke bedava