ಮಧ್ಯಪ್ರದೇಶ: ಸೆಲ್ಫಿ ತೆಗೆದುಕೊಳ್ಳಲು ನದಿಯ ಮಧ್ಯಭಾಗಕ್ಕೆ ಹೋದಾಗ ಏಕಾಏಕಿ ನೀರು ಹೆಚ್ಚಾದ್ದರಿಂದ ಯುವತಿಯರಿಬ್ಬರು ಭಯಭೀತರಾದ ಘಟನೆ ಚಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ.
ಆ ಯುವತಿಯರು ನದಿಯ ಮಧ್ಯಭಾಗದ ಬಂಡೆಯೊಂದ ಮೇಲೆ ನಿತ್ತಿದ್ದು, ಸುತ್ತಲು ನೀರು ತಂಬಿಕೊಂಡಿದ್ದರಿಂದ ದಿಕ್ಕುದೋಚದಂತ್ತಾಗಿ ಕಣ್ಣು ಮುಚ್ಚಿಕೊಂಡು ನಿಣತ್ತಿದ್ದರು.
ಜುನಾರ್ಡೋದಿಂದ ಆರು ಯುವತಿಯರ ತಂಡ ಚಿಂದ್ವಾರ ಜಿಲ್ಲೆಯಲ್ಲಿರುವ ಪೆಂಚ್‌ನದಿ ಸಮೀಪಕ್ಕೆ ಪ್ರವಾಸ ಹೊರಟ್ಟಿದ್ದರು. ಅವರಲ್ಲಿ ಮೇಘಾ ಜಾವ್ರೆ ಮತ್ತು ವಂದನಾ ತ್ರಿಪಾಠಿ ಎಂಬುವರು ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದರು. ಈ ವೇಳೆ ಏಕಾಏಕಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದ ಮತ್ತೆ ದಡಕ್ಕೆ ಬರಲು ಸಾಧ್ಯವಾಗದೆ ನದಿಯಲ್ಲಿದ್ದ ಬಂಡೆಯೊಂದರ ಮೇಲೆಯೇ ನಿಂತುಕೊಂಡಿದ್ದಾರೆ ಜತೆಗೆ ಭಯದಿಂದ ಚೀರಾಡಿದ್ದಾರೆ.
ಅವರ ಚೀರಾಟವನ್ನು ಕೇಳಿಸಿಕೊಂಡ ನದಿದಡದಲ್ಲಿದ್ದ ಇನ್ನುಳಿದ ನಾಲ್ವರು ಯುವತಿಯರು ಬೆಚ್ಚಿಬಿದ್ದು ಪೊಲೀಸರಿಗೆ ಕರಮಾಡಿದ್ದಾರೆ. ಅಮೀಪದಲ್ಲೇ ಇದ್ದ ಪೊಲೀಸರು ಕೂಡಲೇ ಕಾರ್ಯಾಚರಣೆಗಿಳಿದಿದ್ದರು. ನಂತರ ಬಂದ ಇನ್ನಷ್ಟು ಪೊಲೀಸ್ ಸೇರಿ ಒಟ್ಟು 12 ಮಂದಿ ಪೊಲೀಸ್ ಸಿಬ್ಬಂದಿ, ಜಿಲ್ಲಾಡಳಿತ ಮತ್ತು ಸ್ಥಳೀಯರ ಹರಸಾಹಸ ಮಾಡಿ ಯುವತಿಯರನ್ನು ರಕ್ಷಿಸಿದ್ದಾರೆ.
ಇದು ಮಳೆಗಾಲದ ಸಮಯವಾಗಿರುವುದರಿಂದ ನದಿಯಲ್ಲಿ ಯಾವಾಗ ನೀರು ಹೆಚ್ಚಾಗುತ್ತದೋ ಎಂಬುವುದು ತಿಳಿಯುವುದಿಲ್ಲ. ಆದ್ದರಿಂದ ಈ ರೀತಿಯ ಸಾಹಸಗಳನ್ನು ಮಾಡಲು ಯಾರು ಮುಂದಾಗಬಾರದು ಎಂದು ಪೊಲೀಸ್ ಮತ್ತು ಜಿಲ್ಲಾಡಳಿತ ಎಚ್ಚರಿಕೆಯ ಸೂಚನೆ ನೀಡಿದೆ.