NEWSಉದ್ಯೋಗನಮ್ಮರಾಜ್ಯರಾಜಕೀಯ

ಸಾರಿಗೆ ನೌಕರರಿಗೆ 1ವರ್ಷ ವೇತನ, ಭತ್ಯ ರಹಿತ ರಜೆ ನೀಡಲು ಮುಂದಾಗುತ್ತಿರುವ ನಾಲ್ಕೂ ನಿಗಮಗಳು

ನೌಕರರಿಗೆ ಮರಣಶಾಸನವಾಗುವ ರೀತಿ ಷರತ್ತು ವಿಧಿಸಿರುವ ಸಂಸ್ಥೆ l ಸಂಘಟನೆಗಳ ಆರೋಪ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಷ್ಟದ ಸುಳಿಯಲ್ಲಿರುವ ಸಾರಿಗೆ ಸಂಸ್ಥೆಗಳು ಅಧಿಕಾರಿ ಮತ್ತು ನೌಕರರಿಗೆ ವೇತನ ರಹಿತ ಒಂದು ವರ್ಷದ ರಜೆ ನೀಡಲು ಚಿಂತನೆ ನಡೆಸಿವೆ.

ಕೊರೊನಾ ಹರಡುತ್ತಿರುವುದರಿಂದ ಬಸ್ ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿಲ್ಲ, ನೌಕರರ ಆರೋಗ್ಯ ಮತ್ತು ನಿಗಮಗಳ ಆರ್ಥಿಕ ದೃಷ್ಟಿಯಿಂದ ಷರತ್ತುಗಳೊಂದಿಗೆ ಒಂದು ವರ್ಷದ ವಿಶೇಷ ರಜೆ ಮಂಜೂರು ಮಾಡಲು ಆಲೋಚನೆ ನಡೆಸಿವೆ.

ಕೊರೊನಾಗಿಂತ ಮುಂಚೆ ನಾಲ್ಕು ನಿಗಮಗಳ ಬಸ್​ಗಳಲ್ಲಿ ನಿತ್ಯ ಅಂದಾಜು1 ಕೋಟಿ ಜನರು ಪ್ರಯಾಣಿಸುತ್ತಿದ್ದರು. ಆದರೀಗ ಆ ಸಂಖ್ಯೆ 10 ಲಕ್ಷಕ್ಕಿಂತ ಕಡಿಮೆಯಾಗಿದೆ. ಹೀಗಾಗಿ ನಿಗಮಗಳು 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಆರ್ಥಿಕ ನಷ್ಟ ಅನುಭವಿಸುತ್ತಿದೆ.

ಈ ನಡುವೆ ಕೊರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದ್ದು, ಸಿಬ್ಬಂದಿ ಭಯದಲ್ಲೇ ಕರ್ತವ್ಯ ನಿರ್ವಹಿಸುವಂತಾಗಿದೆ.  ಹೀಗಾಗಿ, ಅಗತ್ಯವಿರುವವರಿಗೆ ವೇತನ ಮತ್ತು ಭತ್ಯೆ ರಹಿತ ರಜೆ ನೀಡಲು ಸಾಧ್ಯವೇ ಎಂಬ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಬಿಎಂಟಿಸಿ, ಎನ್​ಡಬ್ಲ್ಯುಕೆಆರ್​ಟಿಸಿ, ಎನ್​ಇಕೆಆರ್​ಟಿಇಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಪತ್ರ ಬರೆದಿದ್ದಾರೆ.

ಆದರೆ, ಕೆಎಸ್​ಆರ್​ಟಿಸಿ ಸಿದ್ಧಪಡಿಸಿರುವ ಈ ಪ್ರಸ್ತಾವನೆಗೆ ನೌಕರರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಇದು ಅನುಷ್ಠಾನ ಆದಲ್ಲಿ ಸಾರಿಗೆ ಸಂಸ್ಥೆಯಲ್ಲಿನ 1.30 ಲಕ್ಷ ನೌಕರರಿಗೆ ಮರಣಶಾಸನವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿವೆ.

ನೌಕರರಿಗೆ ಒಂದು ವರ್ಷ ವೇತನ ಹಾಗೂ ಭತ್ಯೆ ರಹಿತ ರಜೆ ನೀಡುವ ಪ್ರಸ್ತಾವನೆ ಅಮಾನವೀಯ ಹಾಗೂ ಅಸಾಂವಿಧಾನಿಕ. ಕೂಡಲೇ ಈ ಪ್ರಸ್ತಾವನೆ ಹಿಂಪಡೆಯದಿದ್ದರೆ ಹೋರಾಟ ನಡೆಸಲಾಗುವುದು ಎಂದು ಕೆಎಸ್​ಆರ್​ಟಿಸಿ ಸ್ಟಾಫ್ ಆ್ಯಂಡ್​ ವರ್ಕರ್​ ಯೂನಿಯನ್​ ಅಧ್ಯಕ್ಷ ಎಚ್​.ವಿ.ಅನಂತಸುಬ್ಬರಾವ್​ ಎಚ್ಚರಿಸಿದ್ದಾರೆ.

ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೆಎಸ್​ಆರ್​ಟಿಸಿ ಎಂಡಿ ಶಿವಯೋಗಿ ಸಿ.ಕಳಸದ, ಈ ಪತ್ರವನ್ನು ಸಾರಿಗೆ ನಿಗಮಗಳಲ್ಲಿ ಅಭಿಪ್ರಾಯ, ಸಲಹೆ ಕೋರಿ ರವಾನಿಸಲಾಗಿದೆ. ಈ ಪತ್ರ ಇನ್ನೂ ಅಭಿಪ್ರಾಯ ಕೋರುವ ಹಂತದಲ್ಲಿದೆ. ಇದರಲ್ಲಿ ಯಾವುದೇ ಒತ್ತಡ ಅಥವಾ ನಿರ್ಬಂಧ ಇಲ್ಲ. ಈ ಹಿಂದೆಯೂ ಸಾರಿಗೆ ನಿಗಮಗಳಲ್ಲಿ ನೌಕರರು ಹೆಚ್ಚಿನ ವ್ಯಾಸಂಗ, ಆರೋಗ್ಯ ಹಾಗೂ ಇತರೆ ತುರ್ತು ಪರಿಸ್ಥಿತಿಯಲ್ಲಿ ಎರಡು ವರ್ಷಗಳ ಕಾಲ ವೇತನ ರಹಿತ ರಜೆ ಪಡೆಯಲು ಅವಕಾಶವಿತ್ತು. ಅದರನ್ವಯ ಕೆಲವು ಅಧಿಕಾರಿಗಳು ಹೆಚ್ಚಿನ ವಿದ್ಯಾರ್ಹತೆಗೆ ತೆರಳಿ ಮತ್ತೆ ವಾಪಸ್ ಬಂದಿರುತ್ತಾರೆ. ಕೆಲವರು ಕೆಎಎಸ್​ಗೆ ಆಯ್ಕೆಯಾಗಿದ್ದಾರೆ. ಇದೀಗ ಆ ಸೌಲಭ್ಯವನ್ನು ಮುಂದುವರಿಸುವ ಸಂಬಂಧ ಅಭಿಪ್ರಾಯ ಕೋರಿ ಪತ್ರ ರವಾನಿಸಲಾಗಿದೆ ಕಳಸದ ತಿಳಿಸಿದ್ದಾರೆ.

ನೌಕರರಿಗೆ ಯಮಪಾಸವಾಗುವ ಷರತ್ತು
ರಜೆ ಪಡೆಯುವ ಸಿಬ್ಬಂದಿ ಕಾಯಂ ನೌಕರರಾಗಿರಬೇಕು, ರಜೆ ಅವಧಿಯನ್ನು ಸ್ಪಷ್ಟವಾಗಿ ನಮೂದಿಸಬೇಕು. ವಿಶೇಷ ರಜೆ, ಬೇರೆ ರಜೆಗಳೊಂದಿಗೆ ಸೇರ್ಪಡೆಗೊಳಿಸಬಾರದು… ಹೀಗೆ ಹಲವು ನಿಬಂಧನೆಗಳನ್ನು ಹೇರಲಾಗುತ್ತದೆ. ರಜೆ ಅವಧಿಯಲ್ಲಿ ಯಾವುದಾದರೂ ಕಾನೂನು ತೊಡಕಿಗೆ ಸಿಲುಕಿದರೆ, ಅದಕ್ಕೆ ನಿಗಮಗಳು ಹೊಣೆಯಾಗುವುದಿಲ್ಲ. ಈ ಕುರಿತಂತೆ ರಜೆ ಪಡೆಯುವ ನೌಕರ ನಷ್ಟ ಪರಿಹಾರ ( Indemnity ) ಬಾಂಡ್​ ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಒಂದೊಮ್ಮೆ ರಜೆ ಅವಧಿ ಪೂರ್ಣಗೊಳ್ಳದಿದ್ದರೂ, ವಾಪಸ್​ ಕೆಲಸಕ್ಕೆ ಬರುತ್ತೇನೆಂದರೆ ನಿಗಮದ ಹಿರಿಯ ಅಧಿಕಾರಿಗಳು ತಿಳಿಸುವವರೆಗೂ ಕಾಯಬೇಕು. ಷರತ್ತನ್ನು ಉಲ್ಲಂಘಿಸಿದರೂ ಸೇವೆಯಿಂದ ವಜಾ ಮಾಡುವ ಅಧಿಕಾರ ಅಧಿಕಾರಿಗಳಿಗೆ ಇರಲಿದೆ. ಅಲ್ಲದೆ, ರಜೆ ಅವಧಿಯಲ್ಲಿ ನಿಗಮದಿಂದ ಯಾವುದೇ ರೀತಿಯ ಆರ್ಥಿಕ ನೆರವನ್ನು ನೌಕರರಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ರೀತಿಯ ನಿಬಂಧನೆಗಳಿಂದ ನೌಕರರನ್ನು ತುಳಿಯುವ ಕೆಲಸಕ್ಕೆ ಕೊರೊನಾ ಹೆಸರಿನಲ್ಲಿ ಸಂಸ್ಥೆ ಮತ್ತು ಸಂಸ್ಥೆಯ ಹಿರಿಯ ಅಧಿಕಾರಿಗಳು ಹೊರಟಿದ್ದಾರೆ ಎಂಬ ಅನುಮಾನ ಈಗ ನೌಕರರನ್ನು ಕಾಡುತ್ತಿದೆ.

ಒಂದು ವೇಳೆ ಇವರು ನೌಕರರ ಆರೋಗ್ಯ ಮತ್ತು ಹಿತದೃಷ್ಟಿಯಿದ್ದರೆ ಪೂರ್ಣ ಪ್ರಮಾಣದ ವೇತನ ನೀಡದಿದ್ದರೂ ಸಾಧ್ಯವಾದಷ್ಟು  ವೇತನ ನೀಡುವ ವ್ಯವಸ್ಥೆ ಮಾಡಿ ರಜೆ ನೀಡಬಹುದಲ್ಲವೇ ಎಂಬ ಚರ್ಚೆಗಳು ನಡೆಯುತ್ತಿವೆ.

ಇನ್ನು ಸಾರಿಗೆ ಸಂಸ್ಥೆ ಎಂದರೆ ಸೇವೆ ಎಂಬ ಮನೋಭಾವನೆ ಇದೆ. ಆದರೆ ಅದು ಇತ್ತೀಚಿನ ವರ್ಷಗಳಲ್ಲಿ ಬದಲಾಗಿದ್ದು ಸಾರಿಗೆ ಎಂದರೆ ಅದೊಂದು ಸರ್ಕಾರದ ಖಜಾನೆಯನ್ನು ತುಂಬಿಸುವ ಸಂಸ್ಥೆ ಎಂಬ ಹಣೆಪಟ್ಟಿಯನ್ನು ಆಳುವ ರಾಜಕೀಯ ಪಕ್ಷಗಳು ಕಟ್ಟಿಕೊಡುತ್ತಿವೆ. ಇದನ್ನು ನೋಡಿದರೆ ಹಿಂದೆ ಇದ್ದ ಬ್ರಿಟಿಷರ ಆಳ್ವಿಕೆಯು ನೆನಪಿಗೆ ಬರುತ್ತಿದೆ.

ಸಾರಿಗೆ ನೌಕರರಿಗೂ ಸಂಸಾರವಿದೆ. ಅವರ ತಿಂಗಳ ವೇತನವನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕುಟುಂಬಗಳಿವೆ ಎಂಬುದನ್ನು ಸಂಸ್ಥೆಯ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಮರೆತಂತೆ ಕಾಣುತ್ತಿದೆ. ಇಂಥ ಪತ್ರಗಳನ್ನು ಬರೆಯುವ ಮುನ್ನ ನಾವು ಮನೆಯಲ್ಲೇ ಇದ್ದು ವರ್ಷ ವೇತನ ಪಡೆಯದಿದ್ದರೆ, ನಮ್ಮ ಸಂಸಾರ ನೌಕೆ ಸಾಗುವುದೇ ಎಂಬುದನ್ನು ಅಧಿಕಾರಿಗಳು ತಿಳಿದುಕೊಳ್ಳಬೇಕಿತ್ತು. ಇಲ್ಲಿ ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ ಅದನ್ನು ಮರೆತು ನೌಕರರ ಬಗ್ಗೆ ಅಸಡ್ಡೆ ತೋರುವ ರೀತಿಯಲ್ಲಿ ಸಂಸ್ಥೆ ಮತ್ತು ಅಧಿಕಾರಿಗಳು ನಡೆದುಕೊಳ್ಳಬಾರದು.

Leave a Reply

error: Content is protected !!
LATEST
KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ