ಬೆಂಗಳೂರು: ಕರ್ನಾಟಕದಲ್ಲಿ ಇಂದು ಕೊರೊನಾ ವೈರಸ್ ಸ್ಫೋಟಗೊಂಡಿದ್ದು, ಇಂದು ಒಂದೇದಿನ ಅದು ಮಧ್ಯಾಹ್ನದ ವೇಳೆಗೆ 105 ಸೋಂಕು ಪ್ರಕರಣ ಪತ್ತೆಯಾಗಿದ್ದು, ರಾಜ್ಯದ ಜನರಲ್ಲಿ ಆತಂಕವನ್ನು ಇಮ್ಮಡಿಗೊಳಿಸಿದೆ. ಇನ್ನು ರಾಜ್ಯದಲ್ಲಿ ಈವರೆಗೆ 1710ಕ್ಕೆ ಸೋಂಕಿತ ಸಂಖ್ಯೆ ಏರಿಕೆಯಾಗಿದೆ. ಜತೆಗೆ ಸಾವಿನ ಸಂಖ್ಯೆ 42ಕ್ಕೆ ಏರಿಕೆ ಆಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಚಿಕ್ಕಬಳ್ಳಾಪುರದಲ್ಲಿ 45, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ 4, ಹಾಸನದಲ್ಲಿ 18, ಮಂಡ್ಯ 3, ಶಿವಮೊಗ್ಗದಲ್ಲಿ 3, ದಾವಣಗೆರೆ 3, ಬೆಂಗಳೂರಿನಲ್ಲಿ 9, ಬೀದರ್ 6, ತುಮಕೂರು 8, ಬೆಳಗಾವಿಯಲ್ಲಿ 2, ಚಿಕ್ಕಮಗಳೂರು 5, ಹಾವೇರಿ 3, ವಿಜಯಪುರ 2, ದಕ್ಷಿಣ ಕನ್ನಡ 1, ಚಿತ್ರದುರ್ಗ 1, ಧಾರವಾಡ 2, ಉತ್ತರ ಕನ್ನಡ ಜಿಲ್ಲೆಯಲ್ಲಿ 2, ಬಾಗಲಕೋಟೆ 1 ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ರಣಕೇಕೆ ಮುಂದುವರಿದೆ ಎಂದೇ ಹೇಳಬಹುದಾಗಿದೆ.
ದೇಶದಲ್ಲಿ 118,501 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 118,501ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 3,585 ಮಂದಿ ಮೃತಪಟ್ಟಿದ್ದಾರೆ. 48,553 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 5,199,016 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 334,698 ಜನರು ಮೃತಪಟ್ಟಿದ್ದಾರೆ. 2,085,024 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ. view by country
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail