ಬೆಂಗಳೂರು: ವಿಶ್ವಮಾರಿ ಕೊರೊನಾ ರಾಜ್ಯದಲ್ಲಿ ಇಂದು ಕೂಡ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು, 87 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 3176 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನು ಈವರೆಗೆ ರಾಜ್ಯದಲ್ಲಿ ಒಟ್ಟು 47253 ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ಇಂದು 87 ಮಂದಿ ಸೇರಿ ಒಟ್ಟಾರೆ ಈವರೆಗೆ ರಾಜ್ಯದಲ್ಲಿ 934 ಮಂದಿ (ಅನ್ಯಕಾರಣಕ್ಕೆ 4 ಮಂದಿ ಸೇರಿ) ಮೃತಪಟ್ಟಿದ್ದಾರೆ. ಇನ್ನು ಆತಂಕಕಾರಿ ಮಾಹಿತಿ ಎಂದರೆ ರಾಜಧಾನಿ ಬೆಂಗಳೂರು ನಗರವೊಂದರಲ್ಲಿಯೇ 60 ಮಂದಿ ಸೋಂಕಿತರು ಇಂದು ಕೊನೆಯುಸಿರೆಳೆದಿದ್ದಾರೆ.
ಇಂದು 1975 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಅಂತೆಯೇ ಇಂದು ರಾಜ್ಯಾದ್ಯಂತ 1076 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಒಟ್ಟು ಗುಣಮುಖರಾದವರು 18466, ಸಕ್ರಿಯ 27853 ಪ್ರಕರಣಗಳಾಗಿವೆ.
ಇನ್ನು ಇಂದು ಬೆಂಗಳೂರು 1975, ಮೈಸೂರು 99, ಕಲಬುರಗಿ 67, ಧಾರವಾಡ 139, ಬಳ್ಳಾರಿ 136, ಕೊಪ್ಪಳ 14, ದಕ್ಷಿಣಕನ್ನಡ 76, ಬಾಗಲಕೋಟೆ 34, ಉಡುಪಿ 52, ಉತ್ತರಕನ್ನಡ 48, ಬೆಳಗಾವಿ 41, ವಿಜಯಪುರ 80, ತುಮಕೂರು 24, ಬೀದರ್ 35, ಮಂಡ್ಯ 31, ರಾಯಚೂರು 26, ದಾವಣಗೆರೆ 35, ಬೆಂಗಳೂರು ಗ್ರಾ 10, ಚಿಕ್ಕಬಳ್ಳಾಪುರ 32, ಕೋಲಾರ 15, ಶಿವಮೊಗ್ಗ 29, ಕೊಡಗು 23, ಚಿತ್ರದುರ್ಗ 12, ಗದಗ 39, ಚಾಮರಾಜನಗರ 08, ಹಾಸನ 25, ಚಿಕ್ಕಮಗಳೂರು 13, ಯಾದಗಿರಿ 49, ಹಾವೇರಿ 6, ರಾಮನಗರ 03 ಸೇರಿ ರಾಜ್ಯದಲ್ಲಿ 3176 ಮಂದಿ ಸೋಂಕಿಗೆ ಇಂದು ಒಳಗಾಗಿದ್ದಾರೆ.
ದೇಶದಲ್ಲಿ 959,993 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 959,993 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 24,865 ಮಂದಿ ಮೃತಪಟ್ಟಿದ್ದಾರೆ. 609,831 ಮಂದಿ ರೋಗಮುಕ್ತರಾಗಿದ್ದಾರೆ. 325,297 ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಪಂಚಾದ್ಯಂತ ಈವರೆಗೆ 13,543,014 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 583,293 ಜನರು ಮೃತಪಟ್ಟಿದ್ದಾರೆ. 7,911,124 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ. 5,048,597 ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
Banglore dine dine eruthale idde