ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸುವ ದೃಷ್ಟಿಯಿಂದ ಸರ್ಕಾರ ಮಾಡಿರುವ ಕ್ವಾರಂಟೈನ್ ಕೇಂದ್ರಗಳಲ್ಲಿ ಕ್ವಾರಂಟೈನ್ ಆಗಿರುವ ಜನರನ್ನು ನಾಯಿಗಿಂತ ಕಡೆಯಾಗಿ ಸರ್ಕಾರ ನೋಡಿಕೊಳ್ಳುತ್ತಿದೆ.
ಹೌದು, ಯಾದಗಿರಿ, ರಾಯಚೂರು, ಮಂಡ್ಯ, ನೆಲಮಂಗಲ ಸೇರಿದಂತೆ ರಾಜ್ಯದ ವಿವಿಧ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿ ಇರುವವರಿಗೆ ಸರಿಯಾದ ಆಹಾರ ನೀಡುತ್ತಿಲ್ಲ. ಸಮಯಕ್ಕೆ ಸರಿಯಾದ ಕಾಳಜಿ ವಹಿಸುತ್ತಿಲ್ಲ. ದನದ ದೊಡ್ಡಿಗೆ ದನಗಳನ್ನು ಹಾಕಿ ಬಿಟ್ಟಂತೆ ಮಾಡಿದ್ದು, ಇದರಿಂದ ಕ್ವಾರಂಟೈನ್‌ನಲ್ಲಿರುವವರು ಕೊರೊನಾ ಭಯದ ಬದಲು ಇವರು ಇಟ್ಟಿರುವ ಸ್ಥಳದಿಂದ ಕೊರೊನಾ ಜತೆಗೆ ಇನ್ನೂ ಹಲವಾರು ರೋಗಗಳು ಬರುವ ಆತಂಕದಲ್ಲಿಒ ಕಾಲಕಾಳೆಯುತ್ತಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇದರಿಂದ ಕ್ವಾರಂಟೈನ್ ಆಗಿರುವ ಜನರು ಪ್ರತಿಭಟನೆ ಮಾಡುತ್ತಿದ್ದು, ನಮ್ಮ ಮನೆಮಂದಿಯನ್ನು ಬಿಟ್ಟು ಇಲ್ಲಿಗೆ ಬಂದರೆ ನೀವು ನಮ್ಮನ್ನು ಪ್ರಾಣಿಗಳ ರೀತಿಯಲ್ಲಿ ನೋಡುತ್ತಿದ್ದೀರಿ ನಮಗೆ ಏನು ಇಲ್ಲದೇ ಇಲ್ಲಿಗೆ ಬಂದಿಲ್ಲ. ಕೊರೊನಾ ಸೋಂಕು ಇದ್ದರೆ ಅದಕ್ಕೆ ಇತರರು ಬಲಿಯಾಗಬಾರದು ಎಂಬ ದೃಷ್ಟಿಯಿಂದ ಬಂದಿದ್ದೇವೆ. ಆದರೆ ನೀವು ನಮಗೆ ಸರಿಯಾದ ಆಹಾರ ಕೊಡುತ್ತಿಲ್ಲ. ಜತೆಗೆ ಸರಿಯಾಗಿ ತಪಾಸಣೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮಗೆ ಉತ್ತಮ ಆಹಾರ ಕೊಡುತ್ತಿಲ್ಲ. ಅರ್ಧಂಬರ್ಧ ಬೇಸಿದ ಆಹಾರ ಕಲುಸಿತ ನೀರು, ಜತೆಗೆ ಸಾಮಾಜಿ ಅಂತರವಿಲ್ಲದೆ ಕುರಿದೊಡ್ಡಿಯಲ್ಲಿ ಕುರಿಗಳನ್ನು ತುಂಬಿದಂತೆ ನಮ್ಮನ್ನು ತುಂಬಿದ್ದೀರಿ ಎಂದು ಸರ್ಕಾರದ ನಡೆ ಮತ್ತು ಅಧಿಕಾರಿಗಳ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇಷ್ಟೆಲ್ಲ ಆದಮೇಲೆ ನೀವು ಕ್ವಾರಂಟೈನ್ ಮಾಡುತ್ತೇವೆ ಎಂದು ಏಕೆ ಹೇಳಬೇಕು. ಇದು ಒಂದು ಸರ್ಕಾರನ ರಾಜ್ಯದಲ್ಲಿ ಸರ್ಕಾರ ಇದೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಕ್ವಾರಂಟೈನ್ ಆಗಿರುವವರು ಗುಡುಗುತ್ತಿದ್ದಾರೆ.
ಇನ್ನಾದರೂ ಇಂಥ ಪ್ರಮಾದವನ್ನು ಸರ್ಕಾರ ಮತ್ತು ಅಧಿಕಾರಿಗಳು ಮಾಡದೆ ಕ್ವಾರಂಟೈನ್‌ನಲ್ಲಿ ಇರುವವರನ್ನು ಸರಿಯಗಿ ನೋಡಿಕೊಳ್ಳಬೇಕು. ಅವರಿಗೆ ಬಿಸಿನೀರನ್ನು ಒದಗಿಸಿ ಕೊಡಬೇಕು. ಆರೋಗ್ಯ ತಪಾಸಣೆಯನ್ನು ಮಾಡಿಸಿ ಆರೋಗ್ಯವಾಗಿದ್ದರೆ ಅವರ ಮನೆಗಳಿಗೆ ಕಳುಹಿಸಲು ಮುಂದಾಗಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail