ನ್ಯೂಡೆಲ್ಲಿ: ಕಳೆದ ತಿಂಗಳು 59 ಚೀನಾದ ಆಪ್‌ಗಳನ್ನು ನಿಷೇಧಿಸಿದ ನಂತರ, ಈಗ ಭಾರತದಲ್ಲಿ ಮತ್ತೆ ಇನ್ನೂ 47 ಚೀನಿ ಮೂಲದ ಆ್ಯಪ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ.
47 ನಿಷೇಧಿತ ಚೀನಿ ಅಪ್ಲಿಕೇಶನ್‌ಗಳು ಈ ಹಿಂದೆ ನಿಷೇಧಿಸಲಾದ ಅಪ್ಲಿಕೇಶನ್‌ಗಳ ತದ್ರೂಪುಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮೂಲಗಳು ವಿಜಯಪಥಕ್ಕೆ ತಿಳಿಸಿವೆ. ಚೀನಾದ 47 ಆಪ್‌ಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.
ಯಾವುದೇ ಬಳಕೆದಾರರ ಗೌಪ್ಯತೆ ಅಥವಾ ರಾಷ್ಟ್ರೀಯ ಭದ್ರತಾ ಉಲ್ಲಂಘನೆಗಳ ಬಗ್ಗೆ ಪರಿಶೀಲಿಸುವ 250 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳ ಪಟ್ಟಿಯನ್ನು ಭಾರತ ಸಿದ್ಧಪಡಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಸರ್ಕಾರದ ಮೂಲಗಳ ಪ್ರಕಾರ, ರಾಷ್ಟ್ರೀಯ ಭದ್ರತೆ ಮತ್ತು ಬಳಕೆದಾರರ ಗೌಪ್ಯತೆಯ ಯಾವುದೇ ಉಲ್ಲಂಘನೆಯಾಗುವುದನ್ನು ತಡೆಯುವ ದೃಷ್ಟಿಯಿಂದ ಕೇಂದ್ರ ಸರ್ಕಾರ 250 ಕ್ಕೂ ಹೆಚ್ಚು ಚೀನಿ ಆಪ್‌ಗಳ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡಿದೆ.
ಕೆಲವು ಉನ್ನತ ಗೇಮ್‌ನ ಚೀನಿ ಆಪ್‌ಗಳನ್ನು ಸಹ ಹೊಸ ಪಟ್ಟಿಯಲ್ಲಿ ನಿಷೇಧಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಪರಿಶೀಲಿಸಲಾಗುತ್ತಿರುವ ಈ ಚೀನಿ ಆಪ್‌ಗಳು ಚೀನಾದ ಏಜೆನ್ಸಿಗಳೊಂದಿಗೆ ಡೇಟಾವನ್ನು ಹಂಚಿಕೊಳ್ಳುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಭಾರತೀಯ ಮತ್ತು ಚೀನಾದ ಯೋಧರ ನಡುವೆ ಹಿಂಸಾತ್ಮಕ, ಮಾರಣಾಂತಿಕ ಘಟನೆಗಳ ನಂತರ ಲಡಾಖ್ ಗಡಿ ಉದ್ವಿಗ್ನತೆ ಮುಂದುವರಿದಿರುವ ಕಾರಣ, ಟಿಕ್‌ಟಾಕ್ ಸೇರಿದಂತೆ 59 ಚೀಬಿ ಅಪ್ಲಿಕೇಶನ್‌ಗಳನ್ನುಈಗಾಗಲೇ ನಿಷೇಧಿಸಲಾಗಿದೆ. ಆ ನಂತರ ಅದೇ ಮಾರ್ಗದಲ್ಲಿ ಇಂದಿನ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ. ಈ ಆಪ್‌ಗಳು ಭಾರತದ ಸಾರ್ವಭೌಮತ್ವ, ಸಮಗ್ರತೆ ಮತ್ತು ರಕ್ಷಣೆಗೆ ಪೂರ್ವಾಗ್ರಹ ಪೀಡಿತ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ ಎಂದು ಸರ್ಕಾರ ಹೇಳಿದೆ.