NEWSದೇಶ-ವಿದೇಶವಿಜ್ಞಾನ

ಅಪತ್ಭಾಂಧವನಂತ್ತಿರುವ ಇಂಟರ್ ನೆಟ್ ಎಂಬ ಮಾಯಾಜಾಲ ಸ್ಲೋ ಆದಾಗ….

ವಿಜಯಪಥ ಸಮಗ್ರ ಸುದ್ದಿ

ಅಂತರ್ಜಾಲ (ಇಂಟರ್ ನೆಟ್) ಎಂಬುದು ಇಂದಿನ ದಿನಗಳಲ್ಲಿ ಬಹಳ ಅತ್ಯಗತ್ಯವಾದದ್ದು. ಯಾವುದೇ ರೀತಿಯ ಮಾಹಿತಿ  ಪಡೆಯಲೂ ಕೂಡ  ಇಂಟರ್ ನೆಟ್ ಅನ್ನು ಇಂದು ನಾವು ಪ್ರಬಲವಾಗಿಯೇ ಅವಲಂಬಿಸಿದ್ದೇವೆ.

ಕೊರೊನಾ ಸೋಂಕು ಹಬ್ಬುತ್ತಿರುವ ಈ ಕಾಲದಲ್ಲೂ ಅನೇಕರು ಮನೆಯಿಂದಲೇ ತಮ್ಮ ಕೆಲಸ ಕಾರ್ಯಗಳನ್ನು ನಿಭಾಯಿಸುತ್ತಿದ್ದಾರೆ. ಆ ಕೆಲಸಕ್ಕಾಗಿ ಮಾತ್ರವಲ್ಲದೆ ದೈನಂದಿನ ಸುದ್ದಿ ತಿಳಿಯಲು, ಸಾಮಾಜಿಕ ಜಾಲತಾಣಗಳ ಬಳಕೆಗೆ,  ಅಗತ್ಯ  ವಸ್ತುಗಳನ್ನು ಕೊಂಡುಕೊಳ್ಳಲು ಇಂಟರ್ ನೆಟ್ ಎಂಬುದು ಅಪತ್ಭಾಂಧವವಾಗಿದೆ. ಅದಾಗ್ಯೂ ಕೆಲವೊಮ್ಮೆ ಅಂತರ್ಜಾಲ ನಮಗೆ ಕೈಕೊಡುತ್ತದೆ. ಅದು ಕೂಡ ಅತೀ ಮುಖ್ಯ ಕೆಲಸಗಳಿರುವಾಗ.  ಹೀಗಾಗಿ ಇಂಟರ್ ನೆಟ್ ಸ್ಲೋ ಆದಾಗ ಅನುಸರಿಸಬೇಕಾದ ಮಾರ್ಗ ಮತ್ತು  ಉಪಾಯಗಳ ಕುರಿತು ತಿಳಿದುಕೊಳ್ಳಬೇಕಾಗಿದೆ.

ಇಂಟರ್ ನೆಟ್ ಸ್ಲೋ ಆದಾಗ  ನಾವು ಮೊದಲಿಗೆ speedtest.net ನಲ್ಲಿ  ಅಂತರ್ಜಾಲದ ವೇಗ ಎಷ್ಟಿದೆ ಎಂಬುದು ಅರಿತುಕೊಳ್ಳಬೇಕು. ಇಂಟರ್ ನೆಟ್ ತುಂಬಾ ಸ್ಲೋ ಇದ್ದಾಗ ಅಥವಾ ಪದೇಪದೆ ದೀರ್ಘ ಅವಧಿಯಲ್ಲಿ ಬಫರಿಂಗ್ ಆದಾಗ ನಮ್ಮ ಕೋಪ, ಉದ್ವೇಗ ಹೆಚ್ಚುವುದು ಸಾಮಾನ್ಯ. ಈ ಸಮಯದಲ್ಲಿ ವಿಡಿಯೋ ಕರೆ ಅಥವಾ ಆನ್‌ಲೈನ್ ಪೇಜ್‌ಗಳನ್ನು ಡೌನ್‌ಲೋಡ್ ಮಾಡಲು ಕೂಡ ಆಗುವುದಿಲ್ಲ.  ಅಂತಹ ಸಂದರ್ಭದಲ್ಲಿ ನಾವು ಈ ಕೆಳಗಿನಂತೆ  ಮಾಡೋಣ.

1) ನಮ್ಮ ವೈಫೈ ರೂಟರ್ ಅನ್ನು ಯಾವ ಸ್ಥಳದಲ್ಲಿ ಇಟ್ಟಿದ್ದೀವಿ ಅನ್ನುವುದು ಬಹಳ ಮುಖ್ಯ. ಅಂದರೇ ನಾವು ಕೆಲಸ ಮಾಡುವ ಸ್ಥಳದಲ್ಲಿಯೇ ರೂಟರ್ ಇರಬೇಕು. ಒಂದು ಕಡೆ, ರೂಟರ್ ಇನ್ನೊಂದೆಡೆ ಇದ್ದರೆ ಅಥವಾ ರೂಟರ್ ಗೆ ಅಡ್ಡಲಾಗಿ ಗೋಡೆ ಮತ್ತಿತರ ಅಡೆತಡೆಗಳಿದ್ದರೆ  ಸಿಗ್ನಲ್ ಕಡಿಮೆ ಪ್ರಮಾಣದಲ್ಲಿ ಸಿಗುವುದು. ಅದ್ದರಿಂದ ರೂಟರ್ ಅನ್ನು ನೀವು ಕೆಲಸ ಮಾಡುವ ಟೇಬಲ್ ಅಥವಾ ಸಿಗ್ನಲ್ ಉತ್ತಮವಾಗಿ ಸಿಗುವ ಕಡೆ ಇಡುವುದು ಸೂಕ್ತ.

2) ಸಾರ್ವಜನಿಕ ವೈಫೈ ಸಾಮಾನ್ಯವಾಗಿ ವೇಗ ಹೊಂದಿರುವುದಿಲ್ಲ.  ಮಾತ್ರವಲ್ಲದೆ ಒಂದಕ್ಕಿಂತ ಹೆಚ್ಚು ಡಿವೈಸ್ ಗಳಿಗೆ ವೈಫೈ ಸಂಪರ್ಕಗೊಂಡಿದ್ದರೇ ಇಂಟರ್ ನೆಟ್ ನಿಧಾನವಾಗುತ್ತದೆ.  ಮಾತ್ರವಲ್ಲದೆ ನಿಮ್ಮ ಪಿಸಿ ಅಥವಾ ಲ್ಯಾಪ್‌ ಟಾಪ್‌ನಲ್ಲಿ ನೆಟ್‌ಫ್ಲಿಕ್ಸ್ ಅಥವಾ ಯೂಟ್ಯೂಬ್‌ನಂತಹ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಸಾಕಷ್ಟು ಬ್ಯಾಂಡ್‌ವಿಡ್ತ್ ಅನ್ನು ಬಳಸುತ್ತವೆ. ಅತ್ಯಂತ ಮುಖ್ಯವಾದ ಕೆಲಸಗಳಿರುವಾಗ ಇವುಗಳನ್ನು  ಬಳಸಲೇಬಾರದು.

3) ನಮ್ಮ ವೈಫೈ ಪಾಸ್ ವರ್ಡ್ ಅಥವಾ ಹಾಟ್ ಸ್ಪಾಟ್  ಪಾಸ್‌ ವರ್ಡ್‌ಗಳನ್ನು ಅಗಿಂದ್ದಾಗೆ ಬದಲಾಯಿಸುತ್ತಿರಬೇಕು. ಇದರಿಂದ ಇತರೆ ಅನ್ಯ ಡಿವೈಸ್‌ಗಳಿಗೆ ಇಂಟರ್‌ನೆಟ್‌ ಕನೆಕ್ಟ್ ಆಗುವುದು ತಪ್ಪುತ್ತದೆ.  ಅತೀ ಕ್ಲಿಷ್ಟಕರ ಪಾಸ್‌ವರ್ಡ್‌ಗಳನ್ನು ಹೊಂದಿಸುವುದು ಇನ್ನು ಉತ್ತಮ.

4) ಮೋಡೆಮ್ ಅಥವಾ ರೂಟರ್‌ ಕನೆಕ್ಟರ್‌ ಗಳು ಸಡಿಲವಾಗಿದ್ದರೆ  ಇಂಟರ್‌ನೆಟ್ ನಿಧಾನವಾಗಲಿದೆ. ಇದರಿಂದಾಗಿ ನಮ್ಮ ಎಲ್ಲಾ ಕೇಬಲ್‌ಗಳು ಉತ್ತಮ ಸ್ಥಿತಿಯಲ್ಲಿವೆಯೇ ಮತ್ತು ಸರಿಯಾಗಿ ಸಂಪರ್ಕ ಹೊಂದಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಅವಶ್ಯಕ. ಅಗತ್ಯ ಸಂದರ್ಭದಲ್ಲಿ ಮಾತ್ರ ರೂಟರ್ ಅನ್ನು ಸ್ವಿಚ್ ಆನ್ ಮಾಡುವುದು ಒಳಿತು. ಕಂಪ್ಯೂಟರ್ ಮಾದರಿಯಲ್ಲೇ ರೂಟರ್ ಗಳಿಗೂ ಕೆಲ ಗಂಟೆಗಳ ಕಾಲ ಬ್ರೇಕ್ ನೀಡುವುದು ಉತ್ತಮ.

5) ಕೆಲವೊಮ್ಮೆ ಅತೀ ಮುಖ್ಯ ಕೆಲಸ ಮಾಡುತ್ತಿರುವಾಗ ಒಮ್ಮಿಂದೊಮ್ಮೆಲೆ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಇದು ಆ ಕ್ಷಣಕ್ಕೆ ಮಾನಸಿಕ ಹಿಂಸೆ ನೀಡುವುದು ಮಾತ್ರವಲ್ಲದೆ ಇಂಟರ್ ನೆಟ್ ನಿಧಾನವಾಗಲು ಕಾರಣವಾಗುತ್ತದೆ. ಆದ್ದರಿಂದ ಆ್ಯಡ್ ಬ್ಲಾಕಿಂಗ್ ಪ್ಲಗ್ಗೀನ್ ಅಳವಡಿಸಿಕೊಂಡು, ಅಟೋ ಪ್ಲೇ  ಆಗುವ ವಿಡಿಯೋ ಜಾಹೀರಾತುಗಳನ್ನು ತಡೆಗಟ್ಟಬಹುದು.

6) ಗೂಗಲ್ ಅಥವಾ ಇತರ ಬ್ರೌಸರ್ ನಲ್ಲಿ ಹಲವಾರು ಟ್ಯಾಬ್ ಗಳನ್ನು ಓಪನ್ ಮಾಡಿಡುವುದು ಕೂಡ ಇಂಟರ್ ನೆಟ್ ಸ್ಲೋ ಆಗಲು ಪ್ರಮುಖ ಕಾರಣ. ಆದ್ದರಿಂದ ಅಗತ್ಯವಿದ್ದಷ್ಟು ಮಾತ್ರ ಟ್ಯಾಬ್ ಗಳನ್ನು ಬಳಸಿ.

7) ಆ್ಯಂಟಿ ವೈರಸ್ ಅಥವಾ ಮಾಲ್ವೇರ್ ಸ್ಕ್ಯಾನರ್ ನಿಮ್ಮ ಕಂಪ್ಯೂಟರ್ ಗೆ ಅಳವಡಿಸಿಕೊಂಡಿರುವುದು ಅತ್ಯಗತ್ಯ. ಎಕೆಂದರೇ ಮಾಲ್ವೇರ್ ಗಳು ಮೊದಲು ದಾಳಿ ಮಾಡುವುದೇ ಇಂಟರ್ ನೆಟ್ ಸ್ಪೀಡಿನ ಮೇಲೆ. ಮಾಲ್ವೇರ್ ಸ್ಕ್ಯಾನರ್ ಅಳವಡಿಸುವುದರಿಂದ ಪದೇ ಪದೇ ‘ವಿಂಡೋಸ್ ನಾಟ್ ವರ್ಕಿಂಗ್‘  ಎಂದು ಕಾಣಿಸಿಕೊಳ್ಳುವುದು ತಪ್ಪುತ್ತದೆ.

8) ಕೆಲವೊಮ್ಮೆ ಇಂಟರ್ ನೆಟ್ ಪ್ರವೈಡರ್ ಗಳು ಸ್ಲೋ ಕನೆಕಕ್ಷನ್ ಅನ್ನು ನೀಡಿರುತ್ತಾರೆ. ಈ ಸಮಸ್ಯೆ ಧೀರ್ಘಕಾಲದವರೆಗೂ ಮುಂದುವರೆದರೆ ಬೇರೆ ನೆಟ್ ವರ್ಕ್ ಅಳವಡಿಸುವುದು ಸೂಕ್ತ.

9) ನಮ್ಮ ಕಂಪ್ಯೂಟರ್ ನಲ್ಲಿ ಯಾವುದೇ ಪ್ರೋಗ್ರಾಂ ಕೂಡ ಅಟೋ ಅಪ್ ಡೇಟ್ ಅಗುವಂತಿರಬಾರದು. ಇದರಿಂದ ಇಂಟರ್ ನೆಟ್ ಕನೆಕ್ಟ್ ಅದಾಗಲೆಲ್ಲ ಅಪ್ ಡೇ್ಟ್ ಆಗುವುದು ತಪ್ಪುತ್ತದೆ. ಅದರ ಜತೆಗೆ ಹೆಚ್ಚು ಹೆಚ್ಚು  ಸಾಫ್ಟ್ ವೇರ್ ಗಳನ್ನು ತೆರೆದಿಡುವುದು ಕೂಡ ಸೂಕ್ತವಲ್ಲ. ಒಂದು ವೇಳೆ ಇಂಟರ್ ನೆಟ್ ಸ್ಲೋ ಆದಾಗ ಟಾಸ್ಕ್ ಮೆನೇಜರ್ ಗೆ ತೆರಳಿ ( cntr+shift+Esc)  ಯಾವ ಸಾಫ್ಟ್ ವೇರ್ ಅತೀ ಹೆಚ್ಚು ಪವರ್ ಬಳಸುತ್ತಿದೆ ಎಂಬುದನ್ನು ಗಮನಿಸಬಹುದು.

l ನಿಮ್ಮಿಂದಲೇ ನಿಮಗಾಗಿ

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್