NEWSನಮ್ಮರಾಜ್ಯ

ಮೈಸೂರು ಜಿಲ್ಲೆಯ ಹಳ್ಳಿ ಹಳ್ಳಿಯನ್ನು ವಕ್ಕರಿಸುತ್ತಿದೆ ಕೊರೊನಾ

ಎಚ್ಚರ ತಪ್ಪಿದರೆ ನಿಮ್ಮನ್ನೂ ಆವರಿಸಲಿದೆ ವಿಶ್ವಮಾರಿ l  ಗರ್ಭಿಣಿಯರ ಬಗ್ಗೆ ಕಾಳಜಿ ಅಗತ್ಯ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ವಿಶ್ವಮಾರಿ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು, ಹಳ್ಳಿಹಳ್ಳಿಗಳನ್ನು ತಲುಪಿ ಗ್ರಾಮೀಣರನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ಬೆಂಗಳೂರಿನ ಹೇಗೆ ಶರವೇಗದಲ್ಲಿ ಹರಡುತ್ತಿದೆಯೋ ಅದೇ ರೀತಿ ಮೈಸೂರಿನ ಮೂಲೆ ಮೂಲೆಯನ್ನು ಬಿಡದೆ ಅಷ್ಟೇ ಶರವೇಗೆದಲ್ಲಿ ಗ್ರಾಮೀಣ ಪ್ರದೇವನ್ನು ಆವರಿಸಿಕೊಳ್ಳುತ್ತಿದೆ. ಇದರಿಂದ ಜಿಲ್ಲೆಯ ಜನರು ಸ್ವಯಂ ಲಾಕ್‌ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಜಿಲ್ಲೆಯ ಬಹುತೇಕ ಗ್ರಾಮಗಳ ಮುಖಂಡರು (ಯಜಮಾನರು) ತಮ್ಮ ಗ್ರಾಮಕ್ಕೆ ಹೊರಗಡೆಯಿಂದ ಬರುವವರನ್ನು ಬಿಟ್ಟುಕೊಳ್ಳುತ್ತಿಲ್ಲ ಮತ್ತೆ ಗ್ರಾಮದಿಂದ ಹೊರ ಗ್ರಾಮಗಳಿಗೆ ಅಥವಾ ಅನ್ಯ ನಗರಕ್ಕೆ ಹೋಗುವುದಕ್ಕೆ ಕಡಿವಾಣ ಹಾಕಿದ್ದಾರೆ.

ಗ್ರಾಮದ ಮುಖಂಡರು ಹಾಕಿರುವ ನಿಬಂಧನೆಯನ್ನು ಮೀರಿ ಹೊರಗಡೆ ಹೋದರೆ ಅಥವಾ ಗ್ರಾಮಕ್ಕೆ ಬಂದರೆ ಅಂಥವರಿಗೆ 5000 ರೂ. ದಂಡ ವಿಧಿಸಲಾಗುವುದು ಎಂದು ಗ್ರಾಮದ ಬೀದಿ ಬೀದಿಗಳಲ್ಲೂ ಡಂಗೂರ ಸಾರಿಸಿದ್ದಾರೆ. ಇದರಿಂದ ಗ್ರಾಮದಲ್ಲಿ ಹೆಚ್ಚಾಗುತ್ತಿರುವ ಈ ಮಹಾಮಾರಿಯನ್ನು ತಡೆಯಲು ಮುಂದಾಗಿದ್ದಾರೆ.

ಗರ್ಭಿಣಿಯರನ್ನು ಕಾಡುತ್ತಿದೆ
ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ತನ್ನ ರುದ್ರನರ್ತನವನ್ನು ಮುಂದುವರಿಸಿರುವ ಈ ಮಾರಿ ಗರ್ಭಿಣಿಯರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಆದ್ದರಿಂದ ಚಿಕಿತ್ಸೆ ಅಥವಾ ತಪಾಸಣೆಗೆ ಎಂದು ಆಸ್ಪತ್ರೆಗೆ ತೆರಳುವ ಮುನ್ನ ಗರ್ಭಿಣಿಯರು ಮುಂಜಾಗ್ರತೆ ವಹಿಸುವುದು ಪ್ರಮುಖವಾಗಿದೆ. ಇದರಿಂದ ಕೊರೊನಾ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಇದೆ. ಅವರನ್ನು ನೋಡಿಕೊಳ್ಳುವ ಹೊಣೆ ಕುಟುಂಬದವರಿಗೂ ಇರುವುದರಿಂದ ಈ ಸೋಂಕು ತಡೆಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ.

ಇನ್ನು ಗ್ರಾಮದಲ್ಲಿ ಹೇರಿರುವ ನಿರ್ಬಂಧವನ್ನು ಗ್ರಾಮಸ್ಥರು ತಪ್ಪದೆ ಪಾಲಿಸಿದರೆ ಕೊರೊನಾ ಸೋಂಕನ್ನು ಹೊಡೆದೋಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ನಾವು ಸರ್ಕಾರ ಈ ಬಗ್ಗೆ ಎಚ್ಚರ ವಹಿಸಬೇಕು ನಾವೇಕೆ ತೆಗೆದುಕೊಳ್ಳಬೇಕು ಎಂಬ ಭಾವನೆ ಇದ್ದರಿ ಇಂದೇ ಬಿಟ್ಟುಬಿಡಿ ಏಕೆಂದರೆ ಸರ್ಕಾರಗಳು ಆದಾಯದ ಮೂಲವನ್ನು ಹುಡುಕುತ್ತಿವೆಯೇ ಹೊರತು ಜನರ ಆರೋಗ್ಯದ ಕಾಳಜಿಯನ್ನಲ್ಲ. ಹೀಗಾಗಿ ಪ್ರತಿಯೊಬ್ಬರೂ ಸರ್ಕಾರ ನೋಡಿಕೊಳ್ಳುವುದು ಎಂಬುದನ್ನು ಬಿಟ್ಟು ನಿಮ್ಮ ಆರೋಗ್ಯವನ್ನು ನೀವೆ ಕಾಪಾಡಿಕೊಳ್ಳಬೇಕು.

ಜಿಲ್ಲೆಯ ಒಟ್ಟು 690 ಮಂದಿಗೆ ಸೋಂಕು
ಇನ್ನು ಜಿಲ್ಲೆಯಲ್ಲಿ ಶುಕ್ರವಾರ 51 ಜನರಿಗೆ ಕೊರೊನಾ ವಕ್ಕರಿಸಿದ್ದು, ಒಟ್ಟಾರೆ 690 ಮಂದಿ ಈವರೆಗೆ ಸೋಂಕಿಗೆ ಒಳಗಾಗಿದ್ದಾರೆ. ಇವರಲ್ಲಿ 363 ಜನ ಗುಣಮುಖರಾಗಿ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು 307 ಜನ ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 20 ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು