ಮೈಸೂರು: ಜಿಲ್ಲಾ ನ್ಯಾಯಾಲಯದ ನ್ಯಾಯವಾದಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಎರಡು ದಿನ ಕೋರ್ಟ್ಅನ್ನು ಸೀಲ್ಡೌನ್ ಮಾಡಲಾಗಿದೆ.
ಇಂದು ನ್ಯಾಯಾಲಯಕ್ಕೆ ಔಷಧ ಸಿಂಪಡಿಸಲು ಸಿದ್ಧತೆ ನಡೆದಿದೆ. ವಕೀಲರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಹೀಗಾಗಿ ನ್ಯಾಯಾಲಯವನ್ನು ಸೀಲ್ಡೌನ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ದಿನ ನ್ಯಾಯಾಲಯದ ಕಲಾಪಗಳು ಮತ್ತು ಕಚೇರಿಯ ಕೆಲಸಗಳು ಇರುವುದಿಲ್ಲ.
ಇನ್ನು ಕೊರೊನಾ ಪಾಸಿಟಿವ್ ಇರುವ ವಕೀಲರು ನ್ಯಾಯಾಲಯದಲ್ಲಿ ಓಡಾಡಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಔಷಧ ಸಿಂಪಡಣೆ ಮಾಡಲಾಗುತ್ತಿದೆ. ಜತೆಗೆ ವಕೀಲರೊಂದಿಗೆ ಪ್ರಥಮ ಸಂಪರ್ಕಕ್ಕೆ ಬಂದಿದ್ದ ವಕೀಲರು ಮತ್ತು ಕಕ್ಷಿದಾರರನ್ನು ಹೋಂ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಮಾಹಿತಿ ಕಲೆಹಾಕುತ್ತಿದೆ.
Nyayalayadallu korona