ನ್ಯೂಡೆಲ್ಲಿ: ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಆಯೋಜಿಸಿದ್ದ ಸಂಕಲ್ಪ್ ಸೆ ಸಿದ್ಧಿ ಅಭಿಯಾನದಿಂದ ಭಾರತದಲ್ಲಿ ನಿಗದಿತ ಗುರಿಗಿಂತ 4 ವರ್ಷ ಮೊದಲೇ ಹುಲಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಈ ಮೂಲಕ ದೇಶದ ಹುಲಿ ಗಣತಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಕೇಂದ್ರ ಅರಣ್ಯ ಸಚಿವ ಪ್ರಕಾಶ್ ಜಾವೇಡ್ಕರ್.
ಭಾರತದ ಅರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ? ಎಂಬುದನ್ನು ಅರಿಯಲು 2018ರಲ್ಲಿ ಕೈಗೊಂಡಿದ್ದ ಕ್ಯಾಮರಾ-ಆಧಾರಿತ ಹುಲಿ ಗಣತಿಗೆ ಈಗ ವಿಶ್ವದಾಖಲೆಯ ಮನ್ನಣೆ ದೊರೆತಿದೆ. ಭಾರತದಲ್ಲಿ ನಡೆದ ಗಣತಿಯು ಜಗತ್ತಿನಲ್ಲೇ ಅತಿದೊಡ್ಡ ಕ್ಯಾಮರಾ-ಟ್ರ್ಯಾಪ್ ವನ್ಯಜೀವಿ ಸಮೀಕ್ಷೆ ಎಂದು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕದಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ.
26,760 ಕಡೆ ಕ್ಯಾಮರಾ
ದೇಶದ 26,760 ಪ್ರದೇಶಗಳಲ್ಲಿ ಕ್ಯಾಮರಾ ಟ್ರ್ಯಾಪ್ ಅಳವಡಿಸುವ ಮೂಲಕ ಗಣತಿ ಕೈಗೊಳ್ಳಲಾಗಿತ್ತು. ಕ್ಯಾಮರಾಗಳು ಒಟ್ಟಾರೆ 3.50 ಕೋಟಿ ಫೋಟೋಗಳನ್ನು ಸೆರೆಹಿಡಿದಿದ್ದವು. ಇದು ಜಗತ್ತಿನ ಬೇರೆಲ್ಲೂ ಈವರೆಗೆ ಕೈಗೊಳ್ಳದ ಅತೀ ದೊಡ್ಡ ವನ್ಯಜೀವಿ ಸಮೀಕ್ಷೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಅರ್ಜಿ ಸಲ್ಲಿಸಲಾಗಿತ್ತು ಎಂದು ಪ್ರಕಾಶ್ ಜಾವೇಡ್ಕರ್ ಅವರೇ ಈ ವಿಚಾರ ತಿಳಿಸಿದ್ದು ದೇಶದಲ್ಲಿ ನಿಗದಿತ ಗುರಿಗಿಂತ 4 ವರ್ಷಗಳ ಮುನ್ನವೇ ಹುಲಿಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಟ್ವಿಟ್ ಮಾಡಿದ್ದಾರೆ.