NEWSನಮ್ಮರಾಜ್ಯಸಿನಿಪಥ

ಸ್ಯಾಂಡಲ್‌ವುಡ್‌ಗೆ‌ ಹ್ಯಾಟ್ರಿಕ್‌ ಹೀರೋ ಸಾರಥಿ  

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಅಂಬರೀಷ್‌ ನಿಧನದ ಬಳಿಕ ಕನ್ನಡ ಚಿತ್ರರಂಗದ ನಾಯಕತ್ವದಲ್ಲಿ ಉಂಟಾಗಿದ್ದ ಖಾಲಿ ಜಾಗವನ್ನು ನಟ ಶಿವರಾಜ್ ಕುಮಾರ್ ತುಂಬಲು ಮುಂದಾಗಿದ್ದಾರೆ. ಚಿತ್ರರಂಗದ ನಾಯಕತ್ವದ ವಿಚಾರ ಹಲವು ಸಮಯದಿಂದ ಚರ್ಚೆಯಲ್ಲಿದೆ. ಚಿತ್ರರಂಗದ ಒಳಗಿನ ಮತ್ತು ಹೊರಗಿನ ಬಿಕ್ಕಟ್ಟುಗಳಿಗೆ ಎಲ್ಲರನ್ನೂ ಒಂದೆಡೆ ಸೇರಿಸಿ ಒಗ್ಗಟ್ಟಿನ ಮಂತ್ರ ಜಪಿಸಿ, ಪ್ರತಿಯೊಬ್ಬರೂ ಒಪ್ಪುವಂತಹ ತೀರ್ಮಾನ ತೆಗೆದುಕೊಳ್ಳಲು ನಾಯಕನ ಅಗತ್ಯವಿದೆ.

ಹೀಗಾಗಿ ಅಂಬರೀಷ್ ನಿಧನರಾಗಿ ಒಂದೂವರೆ ವರ್ಷದ ಬಳಿಕ ಹ್ಯಾಟ್ರಿಕ್  ಹೀರೋ ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ನಾಯಕತ್ವ ವಹಿಸಿಕೊಳ್ಳಲು ಎಲದಲರೂ ಒಗ್ಗಟ್ಟಿನಿಂದ ತೀರ್ಮಾನಿಸಿದ್ದಾರೆ.

ಹೌದು ಶುಕ್ರವಾರ ಕೋವಿಡ್ 19  ನಿಂದಾಗಿ ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ವಿಷಯ ಸೇರಿ ಎಲ್ಲ ವಿಭಾಗಗಳ ಪುನಶ್ಚೇತನದ ಬಗ್ಗೆ ಚರ್ಚಿಸಲು ಮಧ್ಯಾಹ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಸಭೆ  ನಡೆಸಲಾಯಿತು.

ಈ ವೇಳೆ ಕಲಾವಿದರ ಸಂಘ, ಚಲನಚಿತ್ರ ವಾಣಿಜ್ಯ  ಮಂಡಳಿ, ನಿರ್ಮಾಪಕರ ಸಂಘದ ಮುಖಂಡರು ಭಾಗವಹಿಸಿದ್ದರು. ಕನ್ನಡ ಚಿತ್ರರಂಗದ ಸಂಕಷ್ಟಗಳನ್ನು ಸರ್ಕಾರದ ಮುಂದಿಡಲು, ಸಮಸ್ಯೆಗಳನ್ನು ಬಗೆಹರಿಸಲು ನಾಯಕತ್ವದ ಅಗತ್ಯವಿದ್ದು, ಶಿವರಾಜ್ ಕುಮಾರ್ ನಾಯಕತ್ವ ವಹಿಕೊಳ್ಳುವುದಕ್ಕೆ ಒಕ್ಕೋರಿನಲ್ಲಿನಿಂದ ಸಭೆ ಸಮ್ಮತಿಸಿತ್ತು.

ಕನ್ನಡ ಚಿತ್ರರಂಗದ ನಾಯಕತ್ವ ವಹಿಸಿಕೊಂಡ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವರಾಜ್ ಕುಮಾರ್, ಇಡೀ ಜಗತ್ತು ಕೋವಿಡ್ 19 ಬಿಕ್ಕಟ್ಟಿನಿಂದ ಕೂಡಿರುವಾಗ  ಕನ್ನಡ ಚಿತ್ರರಂಗ ಕೂಡ ಅದಕ್ಕೆ ಹೊರತಾಗಿಲ್ಲ. ಇಂತಹ ಕಷ್ಟದ  ಪರಿಸ್ಥಿತಿಯಲ್ಲಿ ಚಿತ್ರರಂಗದ ಎಲ್ಲ  ವಿಭಾಗದವರೂ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ನಾಯಕತ್ವವನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ಶಿವಣ್ಣ ಹೇಳಿದರು.

ಐದು ತಿಂಗಳಿಂದ ಎಲ್ಲರೂ ಸಮಸ್ಯೆ ಸುಳಿಗೆ ಸಿಲುಕಿಕೊಂಡಿದ್ದಾರೆ. ಅದನ್ನುನಿವಾರಿಸುವ ನಿಟ್ಟಿನಲ್ಲಿ ಎಲ್ಲಾ ಕಲಾವಿದರು ಜೊತೆಯಲ್ಲಿ ಹೋಗುತ್ತೇವೆ. ಎಲ್ಲರೂ, ಇಂಡಸ್ಟ್ರಿಯ ಬೆಳವಣಿಗೆಗೆ ಶ್ರಮಿಸುತ್ತೇವೆ. ನನ್ನ ಮಾತಿಗೆ ಎಲ್ಲರೂ ಗೌರವ ನೀಡುತ್ತಾರೆಂದು ಭಾವಿಸುವೆ. ಮುಂದೆ ನಿಂತು ಸಮಸ್ಯೆಗಳನ್ನು ಎದುರಿಸಲು ಪ್ರಯತ್ನಿಸುವೆ. ಸಿನಿಮಾ ಇಂಡಸ್ಟ್ರಿ ಯಲ್ಲಿ ಎಲ್ಲರೂ ಒಂದೇ. ಆದಷ್ಟು ಶೀಘ್ರದಲ್ಲೇ ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಿದರು.

ಸದ್ಯ ಕೊರೊನಾ ದೊಡ್ಡ ವಿಚಾರ ಅಲ್ಲ, ಸರ್ಕಾರದ ಜತೆಗೆ ನಾವು ಹೋಗಬೇಕು. ಎಲ್ಲಾ ವಿಭಾಗಗಳಿಂದ ಒಗ್ಗಟ್ಟಾಗಿ ಬಂದಿರೋದು ಖುಷಿ ತಂದಿದೆ. ಇಂಡಸ್ಟ್ರಿಯ ಸಮಸ್ಯೆಗಳನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ. ಸಾವಿರ ಜನರನ್ನು ಹಿಂದೆ ಇಟ್ಟುಕೊಂಡರಷ್ಟೇ ನಾಯಕ ಆಗಲ್ಲ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ಆಗಲೇ ನಾಯಕ ಆಗೋದು.

ನನ್ನನ್ನು ಕಂಡರೆ ಎಲ್ಲರೂ ಇಷ್ಟಪಡ್ತಾರೆ.ಇನ್ಮುಂದೆ ನಾವೆಲ್ಲರೂ ಒಗ್ಗಟ್ಟಾಗಿ ಹೋಗೋಣ. ಮಾದರಿ  ಇಂಡಸ್ಟ್ರಿಯಾಗಿ ಬೆಳೆಸೋಣ ಎಂದು ನಟ ಶಿವರಾಜ್​ ಕುಮಾರ್ ಹೇಳಿದರು.

ಈ ಮುಂಚೆಯಿಂದಲೂ ರಾಜ್ ಕುಮಾರ್ ಅವರ ಮನೆಯಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಈಗ ಚಿತ್ರೋದ್ಯಮಕ್ಕೆ ನಾಯಕನ ಅಗತ್ಯವಿದೆ. ಹೀಗಾಗಿ ಶಿವರಾಜ್ ಕುಮಾರ್ ಅವರನ್ನು ನಾಯಕತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದೇವೆ. ಚಿತ್ರರಂಗದಲ್ಲಿ ಇದಕ್ಕೆ ಸ್ವಲ್ಪವೂ ವಿರೋಧವಿಲ್ಲದೆ, ನೂರಕ್ಕೆ ಇನ್ನೂರರಷ್ಟು ಮಂದಿ ಅನುಮೋದನೆ ನೀಡಿದ್ದಾರೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.

ಶಿವರಾಜ್ ಕುಮಾರ್ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಸಾಧು ಕೋಕಿಲಾ, ಜಯಣ್ಣ, ಸೂರಪ್ಪ ಬಾಬು, ಗುರು ಕಿರಣ್, ಕೆ. ಮಂಜು, ಭೋಗೇಂದ್ರ, ಉಮೇಶ್ ಬಣಕಾರ್, ಭಾ.ಮಾ. ಹರೀಶ್, ಪ್ರವೀಣ್ ಕುಮಾರ್, ರಾಮು, ಚಿನ್ನೇಗೌಡ, ಜೆ.ಜೆ. ಕೃಷ್ಣ, ಕೆ.ಪಿ. ಶ್ರೀಕಾಂತ್ ಮುಂತಾದವರು ಪಾಲ್ಗೊಂಡಿದ್ದರು.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್