ಬೆಂಗಳೂರು: ಸಹಕಾರ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೋಮ್ ಕ್ವಾರೆಂಟೀನ್ಗೆ ಒಳಗಾಗಿದ್ದಾರೆ.
ತಮ್ಮ ಕಚೇರಿಯ ಆಪ್ತ ಸಿಬ್ಬಂದಿ ಒಬ್ಬರಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆ ಇಂದಿನಿಂದ ಏಳು ದಿನಗಳು ಸಚಿವರು ಹೋಮ್ ಕ್ವಾರಂಟೈನ್ ಆಗಲಿದ್ದಾರೆ ಎಂದು ಅವರ ವಿಶೇಷ ಕರ್ತವ್ಯ ಅಧಿಕಾರಿ ತಿಳಿಸಿದ್ದಾರೆ.
ಇಂದು ತಮಗೆ ನಿಗದಿಯಾಗಿದ್ದ ಎಲ್ಲಾ ಕಾರ್ಯ ಕಲಾಪಗಳನ್ನು ಸಚಿವರು ರದ್ದು ಮಾಡಿದ್ದಾರೆ. ಇನ್ನು ವಿಕಾಸಸೌಧದಲ್ಲಿನ ನೆಲಮಹಡಿಯಲ್ಲಿರುವ ಸಚಿವರ ಕೊಠಡಿಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಹೀಗಾಗಿ ಇನ್ನು ಏಳು ದಿನಗಳು ಸಚಿವರು ತಮ್ಮ ಮನೆಯಿಂದ ತಮಗೆ ಸಂಬಂಧಪಟ್ಟು ಮುಖ್ಯ ಕೆಲಸವನ್ನು ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
Baari kelsa madiddare bidi rest takollalli