ಉಡುಪಿ: ಜಿಲ್ಲೆಯ ಅಜೆಕಾರು ಪೊಲೀಸ್ ಠಾಣೆಯ ಎಎಸ್ಐಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ತೆಂಕನಿಡಿಯೂರು ಗ್ರಾಮದ ಗರಡಿಮಜಲು ಎಂಬಲ್ಲಿನ ಎರಡು ಪೊಲೀಸ್ ಕ್ವಾಟ್ರಸ್ಗಳನ್ನು ಸೀಲ್ ಡೌನ್ ಮಾಡಿ, ಆ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಮಾಡಲಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇಲ್ಲಿ ಎ, ಬಿ, ಸಿ ಎಂದು ಮೂರು ಕ್ವಾಟ್ರಸ್ ಬ್ಲಾಕ್ಗಳಿದ್ದು ಅವುಗಳಲ್ಲಿ ಬಿ ಮತ್ತು ಸಿ ಬ್ಲಾಕ್ ಗಳನ್ನು ಸೀಲ್ ಡೌನ್ ಮಾಡಲಾಗಿದೆ. ಇಲ್ಲಿ ಸುಮಾರು 12 ಮನೆಗಳಿದ್ದು, ಅದರಲ್ಲಿ ಏಳು ಮನೆಗಳಲ್ಲಿ ಜನವಸತಿ ಇದೆ ಎನ್ನಲಾಗಿದೆ. ಇವರೆಲ್ಲರೂ ಮುಂದಿನ 16 ದಿನಗಳು ಕ್ವಾರಂಟೈನ್ ನಲ್ಲಿ ಇರಬೇಕಿದೆ. ಸುತ್ತಲಿನ ಒಂದು ಕಿ.ಮೀ ಪ್ರದೇಶವನ್ನು ಬಫರ್ ಜೋನ್ ಎಂದು ಘೋಷಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 23 ಪ್ರಕರಣಗಳು ದೃಢಪಟ್ಟಿದ್ದು. ಅದರಲ್ಲಿ ಕಾರ್ಕಳ, ಅಜೆಕಾರು ಮತ್ತು ಬ್ರಹ್ಮಾವರ ಠಾಣೆಯ ತಲಾ ಒಬ್ಬ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail