VIJAYAPATHA.IN > ವಿಜಯಪಥ > NEWS > Crime > NWKRTC: ಬಸ್- ಬೈಕ್ ನಡುವೆ ಭೀಕರ ಅಪಘಾತ – ಬೈಕ್ ಸವಾರರಿಬ್ಬರು ಮೃತ
ಕುಮಟಾ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರರಿಬ್ಬರು ಮೃತಪಟ್ಟಿರುವ ಘಟನೆ ಇಂದು ಮಧ್ಯಾಹ್ನ ಕುಮಟಾ ಬಳಿ ನಡೆದಿದೆ.
ಬೈಕ್ ಸವಾರರ ಬಗ್ಗೆ ಇನ್ನು ಮಾಹಿತಿ ತಿಳಿದು ಬಂದಿಲ್ಲ. ಕುಮಟಾ ರಸ್ತೆ ನೀರ್ನಳ್ಳಿ ಕ್ರಾಸ್ ಬಳಿ ಬಸ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ನಡೆದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಇನ್ನು ಬೈಕ್ ಸವಾರ ಮತ್ತು ಸಹ ಸವಾರರಿಬ್ಬರು ತೀವ್ರಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಅಪಘಾತ ಸಂಭವಿಸುವ ಒಂದು ಗಂಟೆ ಹಿಂದೆಯಷ್ಟೇ ಇದೇ ರಸ್ತೆಯಲ್ಲಿ ಬಸ್ ಹಾಗೂ ಮಿನಿ ಟ್ರಕ್ ನಡುವೆ ಅಪಘಾತ ನಡೆದಿತ್ತು.
Related
Pruthviraj
Leave a reply
You Might Also Like
ದಳಪತಿ ವಿಜಯ್ 69ನೇ ಚಿತ್ರದ ಫಸ್ಟ್ ಲುಕ್ ರಿಲೀಸ್
January 27, 2025
ಅನಧಿಕೃತ ಜಾಹೀರಾತು ಅಳವಡಿಸಿದವರ ವಿರುದ್ಧ FIR ದಾಖಲಿಸಿ: ತುಷಾರ್ ಗಿರಿನಾಥ್
January 27, 2025