ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರು LMS ತಂತ್ರಾಂಶದಲ್ಲಿ ಅನುಭವಿಸುತ್ತಿದ್ದ ಸಮಸ್ಯೆಗಳನ್ನು ಮನಗಂಡು ಕೆಲ ಬದಲಾವಣೆಯನ್ನು ಮಾಡಲಾಗಿದೆ ಎಂದು ಸಂಸ್ಥೆಯ ಉಪ ಮುಖ್ಯ ಗಣಕ ವ್ಯವಸ್ಥಾಪಕರು ತಿಳಿಸಿದ್ದಾರೆ.
ಬದಲಾವಣೆ ಆಗಿರುವ ಬಗ್ಗೆ ಇಂದು ಇಂದು ಸಂಸ್ಥೆಯ ಎಲ್ಲ ಹಿರಿಯ/ ವಿಭಾಗೀಯ ನಿಯಂತ್ರಣಾಧಿಕಾರಿಗಳು, ವ್ಯವಸ್ಥಾಪಕ ನಿರ್ದೇಶಕರ ಆಪ್ತ ಕಾರ್ಯದರ್ಶಿಗಳಿಗೆ ಮಾಹಿತಿಗಾಗಿ ಹಾಗೂ ಈ ವಿಷಯವನ್ನು ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಈ ಕುರಿತು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಪ್ರತಿಯನ್ನು ಕಳುಹಿಸಿದ್ದು, LMS ತಂತ್ರಾಂಶದ ಬಗ್ಗೆ ಕಳೆದ 22/10/2024 ರಂದು ನಡೆದ ಸಭೆಯ ಉಲ್ಲೇಖಿತ ನಡಾವಳಿ ಅನುಸಾರ ಈ ಕೆಳಗಿನ ಅಂಶಗಳ ಬಗ್ಗೆ, ತಂತ್ರಾಂಶದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
1) ಚಾಲನಾ ಸಿಬ್ಬಂದಿಗಳು ರಜೆ ರದ್ದತಿಯನ್ನು ಒಂದು ತಿಂಗಳಲ್ಲಿ ಒಂದು ಬಾರಿ ಮಾತ್ರ ಮಾಡಲು ಅವಕಾಶ ಕಲ್ಪಿಸಲಾಗಿದೆ. 2) Festival Quota ವನ್ನು 3% ಕ್ಕೆ ಇಳಿಸಲು ವಿಭಾಗೀಯ ಸಂಚಾರ ಅಧಿಕಾರಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ. 3) ಸಿಬ್ಬಂದಿಗಳು ಪಾಸರ್‌ವರ್ಡ್‌ಗಳನ್ನು ಬದಲಾವಣೆ ಮಾಡಲು forgot password ಆಯ್ಕೆ ನೀಡಲಾಗಿದೆ.
4) ಘಟಕದಲ್ಲಿ ಹಾಜರಾತಿಯನ್ನು ಅಪಡೇಟ್ ಮಾಡದಿದ್ದಲ್ಲಿ ಅದನ್ನು ಪರಿಶೀಲಿಸಲು ವಿಭಾಗೀಯ ನಿಯಂತ್ರಣಾಧಿಕಾರಿ, ವಿಭಾಗೀಯ ಸಂಚಾರ ಅಧಿಕಾರಿ, ಆಡಳಿತಾಧಿಕಾರಿ ಮತ್ತು ಘಟಕ ವ್ಯವಸ್ಥಾಪಕರ ಲಾಗಿನ್‌ನಲ್ಲಿ ಅವಕಾಶ ಕಲ್ಪಿಸಲಾಗಿದ್ದು ಈ ಕುರಿತಂತೆ ಸಂದೇಶ ರವಾನೆಯಾಗುವ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸರಿಯಾಗಿ ನಾವು ರಜೆ ತೆಗೆದುಕೊಳ್ಳುವುದಕ್ಕೆ LMSನಲ್ಲಿ ಆಗದೆ ಲಂಚ ಕೊಡುವ ಪರಿಸ್ಥಿತಿ ಇದೆ ಎಂದು ನೌಕರರು ಹಲವಾರು ಬಾರಿ ತಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಲಿಖಿತವಾಗಿ ತಿಳಿಸಿದ್ದರು. ಆದರೂ ಬದಲಾವಣೆ ಆಗಿರಲಿಲ್ಲ.
ಈ ಸಂಬಂಧ ಕಳೆದ 22/10/2024 ರಂದು ನಡೆದ ಸಭೆಯಲ್ಲಿಯೂ ಭಾರಿ ಚರ್ಚೆಯಾಗಿತ್ತು. ಆ ವೇಳೆ ನೌಕರರಿಗೆ ಆಗುತ್ತಿರುವ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆದರೂ ಅದು ಮೂರು ತಿಂಗಳ ಬಳಿಕ ಸಮಸ್ಯೆ ಬಗೆಹರಿದಂತಾಗಿದೆ.