ಮೈಸೂರು/ಮಂಡ್ಯ: ರಾಜ್ಯದ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ರಾಜ್ಯದ ನದಿ, ಅಣೆಕಟ್ಟು, ಜಲಾಶಯಗಳು ತುಂಬುತ್ತಿವೆ.
ಅದರಲ್ಲೂ ರಾಜ್ಯದ ಮಂಡ್ಯ ಮತ್ತು ತಮಿಳುನಾಡಿನ ಅನ್ನದಾತರ ಜೀವನದಿ ಕಾವೇರಿಯ ಕೆಆರ್‌ಎಸ್ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾಗಿದ್ದು, ಇತ್ತ ಕಬಿನಿಯಲ್ಲೂ ನೀರಿನ ಮಟ್ಟ ನಿರಂತರವಾಗಿ ಏರುತ್ತಲೇ ಇದೆ.
ಕಬಿನಿ ಡ್ಯಾಂನ ಗರಿಷ್ಠ ಮಟ್ಟ 84 ಅಡಿಯಿದ್ದು, ಸದ್ಯ ಈಗ 82.65 ಮಟ್ಟ ಏರಿಕೆ ಕಂಡಿದೆ. 14,657 ಕ್ಯೂಸೆಕ್ ಒಳಹರಿವು ಇದೆ. 20000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಇಂದಿನ ಕಬಿನಿ ಡ್ಯಾಂ ನೀರಿನ ಮಟ್ಟ: ಗರಿಷ್ಠ ಮಟ್ಟ – 84 ಅಡಿ. ಇಂದಿನ ಮಟ್ಟ – 82.65. ಗರಿಷ್ಠ ಸಾಮರ್ಥ್ಯ – 19.52 TMC. ಇಂದಿನ ಸಾಮರ್ಥ್ಯ – 18.52 TMC. ಒಳಹರಿವು : 14657. ಹೊರಹರಿವು : 20000
ಕೆಆರ್‌ಎಸ್ ಅಣಕಟ್ಟೆಗೆ ಒಳಹರಿವಿನಲ್ಲಿ ಭಾರೀ ಹೆಚ್ಚಳ: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕೆಆರ್‌ಎಸ್ ಅಣಕಟ್ಟೆಗೆ ಒಳಹರಿವಿನಲ್ಲಿ ಭಾರೀ ಹೆಚ್ಚಳವಾಗಿದೆ.
ನಿನ್ನೆಯಿಂದ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಮಳೆಯ ಹಿನ್ನೆಲೆ ಕೆಆರ್‌ಎಸ್ ಡ್ಯಾಂಗೆ ನೀರು ಹರಿದು ಬರುತ್ತಿದೆ. 10,121 ಕ್ಯೂಸೆಕ್‌ಗೆ ಒಳಹರಿವು ಏರಿಕೆ ಕಂಡಿದೆ.
ನಿನ್ನೆ 2898 ಕ್ಯೂಸೆಕ್ ಒಳಹರಿವಿತ್ತು. ಆದರಿಂದು 10,121 ಕ್ಯೂಸೆಕ್‌ಗೆ ಏರಿಕೆ ಕಂಡಿದೆ. ಹೀಗಾಗಿ ಕೆಆರ್‌ಎಸ್ ನೀರಿನ ಮಟ್ಟ 105.40 ಅಡಿಗೆ ತಲುಪಿದೆ. ಡ್ಯಾಂ 124.80 ಅಡಿ ಗರಿಷ್ಠ ಮಟ್ಟ ಹೊಂದಿದೆ.
49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 27.347 ಟಿಎಂಸಿ ನೀರು ಸಂಗ್ರಹವಾಗಿದೆ. ನಾಲೆ ಹಾಗೂ ಕುಡಿಯುವ ನೀರಿಗಾಗಿ 2260 ಕ್ಯೂಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ.
ಇಂದಿನ ಕೆಆರ್‌ಎಸ್ ನೀರಿನ ಮಟ್ಟ: ಗರಿಷ್ಠ ಮಟ್ಟ – 124.80 ಅಡಿ. ಇಂದಿನ ಮಟ್ಟ – 105.40 ಅಡಿ. ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ. ಇಂದಿನ ಸಾಮರ್ಥ್ಯ – 27.347 ಟಿಎಂಸಿ. ಒಳ ಹರಿವು – 10,121 ಕ್ಯೂಸೆಕ್. ಹೊರ ಹರಿವು – 2,260 ಕ್ಯೂಸೆಕ್