ಕೃಷಿನಮ್ಮಜಿಲ್ಲೆನಮ್ಮರಾಜ್ಯ

ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿರ್ದೇಶನದಂತೆ ಸುಟ್ಟುಹೋಗಿದ್ದ ಭೂ ದಾಖಲೆ ಮರುಸೃಷ್ಟಿಗೆ ಡಿಸಿ ಆದೇಶ

ಸವಣೂರ ತಹಸೀಲ್ದಾರ್‌ ಕಚೇರಿಯ ಅಭಿಲೇಖಾಲಯದಲ್ಲಿ ಸುಟ್ಟುಹೋಗಿದ್ದ ಭೂ ದಾಖಲೆಗಳು

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಹಾವೇರಿ: ಪ್ರತಿಭಟನೆ ವೇಳೆ ಸವಣೂರ ತಹಸೀಲ್ದಾರ್‌ ಕಚೇರಿ ಅಭಿಲೇಖಾಲಯದಲ್ಲಿ ಸುಟ್ಟುಹೋಗಿದ್ದ ರೈತರ ಭೂ ದಾಖಲೆಗಳನ್ನು ನಿಯಮಾನುಸಾರ ಏಕವ್ಯಕ್ತಿಯ ಕೋರಿಕೆಯ ಮೇರೆಗೆ ಲಭ್ಯವಿರುವ ದಾಖಲೆಗಳನ್ನು ಪಡೆದು ಹೊಸ ಭೂದಾಖಲೆಗಳನ್ನು ಸೃಜನೆಮಾಡಲು ತಹಶೀಲ್ದಾರಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದ್ದಾರೆ.

ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದಂತೆ ತಹಸೀಲ್ದಾರ್‌ಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಸುಟ್ಟು ಹೋದ ರೈತರ ದಾಖಲೆಗಳನ್ನು ನಿಯಮಗಳು ಹಾಗೂ ಮಾರ್ಗಸೂಚಿಯ ಅನುಸಾರ ಸಂತ್ರಸ್ತ ಸಾರ್ವಜನಿಕರು ಹಾಗೂ ರೈತರಿಂದ ಮನವಿ ಸ್ವೀಕರಿಸಿ

ಅವರ ಬಳಿ ಇರುವ ಭೂಮಿಯ ಯಾವುದಾದರೂ ದಾಖಲೆಗಳನ್ನು ಪಡೆದು ಅವರ ಭೂಮಿಗೆ ಸಂಬಂಧಿಸಿದಂತೆ ಭೂ ದಾಖಲೆ ಮರು ಸೃಷ್ಟಿಸಲು ತ್ವರಿತವಾಗಿ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್‌ಗೆ ಅಧಿಕಾರ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸವಣೂರ ಪಟ್ಟಣದ ಕುಡಿಯುವ ನೀರಿನ ಪೂರೈಕೆಗೆ ಹಮ್ಮಿಕೊಂಡ ಪ್ರತಿಭನೆ ವೇಳೆಯಲ್ಲಿ ನಡೆದ ದೊಂಬಿಯಲ್ಲಿ 29 ಏಪ್ರಿಲ್ 2000 ರಂದು ಸವಣೂರ ತಹಸೀಲ್ದಾರ್‌ ಕಚೇರಿ ಅಭಿಲೇಖಾಲಯದಲ್ಲಿ ಇರಿಸಿದ್ದ ರೈತರ ಭೂ ದಾಖಲೆಗಳು ಸುಟ್ಟುಹೋಗಿದ್ದವು.

ಇದರಿಂದಾಗಿ ರೈತರು, ಸಾರ್ವಜನಿಕರು ಭೂ ಮಂಜೂರಾತಿ, ಭೂ ಸುಧಾರಣೆ, ಇನಾಂ ಮಂಜೂರಾತಿ ಹಾಗೂ ನಮೂನೆ 50, 53ರಲ್ಲಿ ಈಗಾಗಲೇ ಮಂಜೂರಿಸಿದ ಜಮೀನುಗಳ ಉತಾರದಲ್ಲಿ ನಮೂದಿಸಲಾದ ಸರ್ಕಾರ ಹಾಗೂ 15 ವರ್ಷ ಪರಾಧೀನ ಮಾಡಬಾರದು ಎಂಬ ಷರತ್ತುಗಳನ್ನು ಕಡಿಮೆ ಮಾಡಲು ಸಲ್ಲಿಸಿದ ಅರ್ಜಿಗಳ ಇತ್ಯರ್ಥಪಡಿಸಲು ಸಾಧ್ಯವಾಗಿರಲಿಲ್ಲ.

ರೈತರಿಗೆ ತೀವ್ರ ಅನಾನುಕೂಲವಾಗಿತ್ತು. ಈ ಕುರಿತಂತೆ ಸರ್ಕಾರ ಸಾರ್ವಜನಿಕರು, ಜನಪ್ರತಿನಿಧಿಗಳು ಹಲವು ಭಾರಿ ಮನವಿಮಾಡಿಕೊಂಡಿದ್ದರು, ಸುದೀರ್ಘವಾದ ಈ ಸಮಸ್ಯೆಗೆ ಮಾನ್ಯ ಗೃಹ ಸಚಿವರು ಪರಿಹಾರ ಕಂಡುಕೊಂಡು ತ್ವರಿತವಾಗಿ ಸಮಸ್ಯೆ ಇತ್ಯರ್ಥಪಡಿಸಿ ರೈತರಿಗೆ ಅನುಕೂಲಮಾಡಿಕೊಡಲು ಸೂಚಿಸಿದ ಹಿನ್ನೆಲೆಯಲ್ಲಿ ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸುಟ್ಟ ಹೋದ ಭೂ ದಾಖಲೆಗಳನ್ನು ಮರು ಸೃಷ್ಠಿಸುವಂತೆ ಸೂಚನೆ ನೀಡಿದ್ದಾರೆ.

ಗ್ರಾಮಲೆಕ್ಕಾಧಿಕಾರಿಗಳಲ್ಲಿರುವ ಗ್ರಾಮ ದಪ್ತರ್ ಹಾಗೂ ಸಾರ್ವಜನಿಕರಲ್ಲಿ ಲಭ್ಯವಿರುವ ದಾಖಲೆಗಳೊಂದಿಗೆ ಜಮೀನುಗಳ ಏಕವ್ಯಕ್ತಿ ಕೋರಿಕೆಯ ಮೇರೆಗೆ ದಾಖಲಿರುವ ಮರು ಸೃಷ್ಠಿಸುವ ಕುರಿತು ಈಗಾಗಲೇ ಸೂಚನೆಗಳನ್ನು ಸಹ ನೀಡಲಾಗಿದೆ. ಅದರಂತೆ ವಿಶೇಷ ಸಂದರ್ಭದಲ್ಲಿ ಏಕವ್ಯಕ್ತಿ ಕೋರಿಕೆಯ ಪ್ರಕರಣದಲ್ಲಿ ಸರ್ಕಾರದ ಸುತ್ತೋಲೆ ಸುತ್ತೋಲೆ ಸಂಖ್ಯೆ ಕಂ.ಇ.283/ಭೂದಾಸ/2010 ದಿನಾಂಕ 23-11-2010ರಂತೆ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆಯಬೇಕಾಗಿತ್ತು.

ಗೈರುವಿಲೇ ಕಡತಗಳ ಪುನರ್ ನಿರ್ಮಾಣದ ಹಂತದಲ್ಲಿ ಮಂಜೂರಿಯ ನೈಜತೆ ಸಾಬೀತು ಪಡಿಸುವ ಎರಡು ವಹಿಗಳ ಲಭ್ಯವಿಲ್ಲದೇ ಅವುಗಳಲ್ಲಿ ಯಾವುದಾದರೂ ಒಂದು ವಹಿ ಲಭ್ಯವಿದ್ದ ಸಂದರ್ಭದಲ್ಲಿ ಹಾಗೂ ಸದರಿ ಮಂಜೂರಿ ನೈಜತೆ ಕುರಿತಂತೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರಕಲಂ 136(3) ಅಡಿ ಪ್ರಕರಣ ದಾಖಲಾಗಿ ಜಿಲ್ಲಾಧಿಕಾರಿಗಳ/ ವಿಶೇಷ ಜಿಲ್ಲಾಧಿಕಾರಿಗಳ ನಾಯಾಲಯದಲ್ಲಿ ವಿಚಾರಣೆ ನಡೆದು ಮಂಜೂರಿ ನೈಜತೆಯಿಂದ ಕೂಡಿದೆ ಎಂದು ಕಲಂ 136(3) ರಡಿ ದಾಖಲಾದ ಪ್ರಕರಣ ಕೈಬಿಟ್ಟು ಸದರಿ ಮಂಜೂರಿಗೆ ಸಂಬಂಧಿಸಿದ ಆರ್.ಟಿ.ಸಿ.ದಾರರ ಖಾತೆಯನ್ನು ಮುಂದುವರೆಸಲು ಹಾಗೂ ಪೋಡಿ ದುರಸ್ತಿ ಮಾಡಬೇಕೆಂದು ಆದೇಶವಾದ ಪ್ರಕರಣಗಳಲ್ಲಿ ಲಭ್ಯವಿರುವ ಒಂದು ವಹಿ ಅಥವಾ ಇತರೆ ಪೂರಕ ಕಂದಾಯ ದಾಖಲೆಗಳ ಆಧಾರದಿಂದ ಮಂಜೂರಿ ನೈಜತೆ ಖಾತ್ರಿಪಡಿಸಿಕೊಂಡು ಗೈರುವಿಲೇ ಕಡತ ಪುನರ್ ನಿರ್ಮಾಣದ ಬಗ್ಗೆ ತೀರ್ಮಾನಿಸುವುದು.

ವಹಿಗಳಲ್ಲಿ ಯಾವುದಾದರೊಂದು ವಹಿ ಲಭ್ಯವಿದ್ದು, ಮೂಲ ಮಂಜೂರಿ ಕಡತ ಲಭ್ಯವಿಲ್ಲದೇ ಗೈರುವಿಲೇ ಕಡತ ತಯಾರಿಸುವ ಸಂದರ್ಭದಲ್ಲಿ ಘನ ನ್ಯಾಯಾಲಯಗಳಿಂದ ಪೋಡಿ ದುರಸ್ತಿ ಬಗ್ಗೆ, ಆದೇಶವಾಗದೇ ಇದ್ದಲ್ಲಿ ಪ್ರಕರಣಗಳಲ್ಲೂ ಇತರೆ ಪೂರಕ ಕಂದಾಯ ದಾಖಲೆಗಳ ಆಧಾರದಿಂದ ಮಂಜೂರಿ ನೇಜತೆ ಖಾತ್ರಿಪಡಿಸಿಕೊಂಡು ಗೈರುವಿಲೇ ಕಡತ ಪುನರ್ ನಿರ್ಮಾಣದ ಬಗ್ಗೆ ತೀರ್ಮಾನಿಸುವುದು.

ಮೂಲ ಮಂಜೂರಿ ವಹಿ ಹಾಗೂ ಸಾಗುವಳಿ ಚೀಟಿ ವಿತರಣಾ ವಹಿಸಗಳು ಸಂಬಂಧಿಸಿದ ತಹಶೀಲ್ದಾರ ಕಚೇರಿಗಳಲ್ಲಿ ಲಭ್ಯವಿಲ್ಲದೇ ಶಿಥಿಲವಾಗಿದ್ದಲ್ಲಿ ಸದರಿ ಜಮೀನು ಮಂಜೂರಾದ ಕಾಲದಿಂದಲೂ ಹಕ್ಕು ದಾಖಲೆಗಳಲ್ಲಿ ಅಂದರೆ ಕೇತುವಾರು ವಹಿ ಐ.ಎಲ್. ವಹಿ ಸೆಟ್ಲಮೆಂಟ್ ವಹಿ ಆರ್.ಆರ್. ವಹಿ, ಮ್ಯುಟೇಷನ್ ವಹಿ ಹಾಗೂ ಆರ್.ಟಿ.ಸಿ.ಗಳಲ್ಲಿನಿರಂತರವಾಗಿ ಹಕ್ಕು ದಾಖಲಾಗಿರುವ ಬಗ್ಗೆ ಯಾವುದು ಲಭ್ಯವಿದೆಯೋ ಆ ದಾಖಲೆಯನ್ನು ಆಧರಿಸಿ ಮಂಜೂರು ನೈಜತೆ ಖಾತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯು ಗೈರುವಿಲೇ ಕಡತ ತಯಾರಿಸುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬಹುದಾಗಿರುತ್ತದೆ.

ಇನಾಂ ರದ್ದಿಯಾತಿ ವಿಶೇಷ ಜಿಲ್ಲಾಧಿಕಾರಿಗಳಿಂದ ಮಂಜೂರಾದ ಮಂಜೂರಿ ಕಡತ ತಹಶೀಲ್ದಾರ್ ಕಚೇರಿಯಲ್ಲಿ ಲಭ್ಯವಿದ್ದು, ಅದರಲ್ಲಿ ಯಾವುದಾದರೊಂದು ದಾಖಲಾತಿ ಲಭ್ಯವಿಲ್ಲದೇ ಇದ್ದಲ್ಲಿ ಸದರಿ ಪ್ರಕರಣಗಳನ್ನು ಗೈರುವಿಲೇ ಪ್ರಕರಣವೆಂದು ಪರಿಗಣಿಸಲು ಬರುವುದಿಲ್ಲ. ಸದರಿ ಮಂಜೂರಾತಿ ಕುರಿತು ಲಭ್ಯವಿರುವ ಇತರೆ ಪರ್ಯಾಯ ಕಂದಾಯ ಇಲಾಖೆಗಳ ಆಧಾರದಿಂದ ನೈಜನತೆಯನ್ನು ಖಾತ್ರಿಪಡಿಸಿಕೊಂಡು ಅಥವಾ ಈ ಬಗ್ಗೆ ಜಿಲ್ಲಾಧಿಕಾರಿಗಳು/ ವಿಶೇಷ ಜಿಲ್ಲಾಧಿಕಾರಿಗಳು, ಕರ್ನಾಟಕ ಭೂ ಕಂದಾಯ ಕಾಯ್ದೆ. 1964 ಕಲಂ 136(3)ರ ಅಡಿ ನೈಜತೆ ಖಾತ್ರಿಪಡಿಸಿಕೊಂಡ ಆದೇಶಕ್ಕನುಗುಣವಾಗಿ ಇನಾಂ ಮಂಜೂರಿ ಕಡತಗಳಲ್ಲಿ ಲಭ್ಯವಿರುವ ದಾಖಲೆಗಳ ಆಧಾರದಿಂದ ಪೋಡಿ ದುರಸ್ತಿ ಬಗ್ಗೆ ಕ್ರಮ ಜರುಗಿಸುವುದು.

ಇನಾಂ ರದ್ದಿಯಾತಿ ವಿಶೇಷ ಜಿಲ್ಲಾಧಿಕಾರಿಗಳಿಂದ ಮಂಜೂರಾದ ಮಂಜೂರಿ ಕಡತ ತಹಸೀಲ್ದಾರ್‌ ಕಚೇರಿಯಲ್ಲಿ ಲಭ್ಯವಿಲದಿದ್ದಲ್ಲಿ ಸದರಿ ಮಂಜೂರಿಯ ನೇಜತೆಯನ್ನು ಸಾಬೀತು ಪಡಿಸುವ ನಮೂನೆ 8ರ ವಹಿಯಲ್ಲಿ ನಮೂದುಗಳ ಆಧಾರದಿಂದ ಗೈರವಿಲೇ ಕಡತ ತಯಾರಿಸುವ ಬಗ್ಗೆ ಕ್ರಮ ಜರುಗಿಸುವುದು..

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್