ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಇತ್ತೀಚೆಗೆ ನಡೆದ ಮೈಸೂರು ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಜಾತ್ಯತೀತ ದಳದೊಂದಿಗೆ ಮೈತ್ರಿ ಮಾಡಿಕೊಂಡ ಪರಿಸ್ಥಿತಿ ಬೆಳವಣಿಗೆಗಳ ಕುರಿತಾದ ವಾಸ್ತವ ವರದಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವನಾರಾಯಣ ಮತ್ತು ತನ್ವೀರ್ ಸೇಠ್ ಪ್ರತ್ಯೇಕವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಿದ್ದಾರೆ.
ಪಾಲಿಕೆ ಚುನಾವಣಾ ವೀಕ್ಷಕರಾಗಿ ಇದ್ದ ಕಾರ್ಯಧ್ಯಕ್ಷ ದ್ರುವನಾರಾಯಣ ಚುನಾವಣೆ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ನಡೆದ ಎಲ್ಲಾ ಬೆಳವಣಿಗೆಗಳ ವಾಸ್ತವತೆಯನ್ನು ಸಲ್ಲಿಸಿದ್ದಾರೆ. ಸುಮಾರು ನಾಲ್ಕು ಪುಟಗಳ ವರದಿ ಇದಾಗಿದೆ.
ಆ ಸಮಯದಲ್ಲಿ ಏನೇನು ಬೆಳವಣಿಗಳು ಆದವು ಎಂಬ ಬಗ್ಗೆ ವಾಸ್ತವ ಸ್ಥಿತಿ ಇದೆ ಎಂಬ ಬಗ್ಗೆ ತಿಳಿಸಿದ್ದೇವೆ. ಇದು ಪಕ್ಷದ ಆಂತರಿಕ ವರದಿ ಎಂದು ಧ್ರುವನಾರಾಯಣ್ ತಿಳಿಸಿದ್ದಾರೆ. ಇನ್ನು ತನ್ವೀರ್ ಸೇಠ್ ಕೂಡ 5 ಪುಟಗಳ ವರದಿಯನ್ನು ಡಿಕೆ ಶಿವಕುಮಾರ್ ಅವರಿಗೆ ಸಲ್ಲಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವನಾರಾಯಣ ಮತ್ತು ತನ್ವೀರ್ ಸೇಠ ಇಬ್ಬರೂ ಸರಣಿ ಸಭೆ ನಡೆಸಿದರು ಮತ್ತು ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ ಅವರ ಅಭಿಪ್ರಾಯ ಪಡೆದು. ನಾವು ನಿರ್ಧಾರ ಕೈಗೊಂಡಿದ್ದೆವು. ಅವರು ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದರು. ನಾಗರಿಕ ಸಂಸ್ಥೆಯಲ್ಲಿ ಅಧಿಕಾರ ಹಿಡಿಯುವ ಬಿಜೆಪಿ ತಂತ್ರವನ್ನು ತಡೆಯಲು ಕಾಂಗ್ರೆಸ್ ಕಾರ್ಪೋರೇಟರ್ ಗಳು ಹಾಗೂ ಮುಖಂಡರು ಸ್ಥಳದಲ್ಲಿ ತೆಗೆದುಕೊಂಡ ನಿರ್ಧಾರ ಇದಾಗಿದ್ದರಿಂದ ಇದು ವೈಯಕ್ತಿಕವಾಗಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.