ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೀ ಹಾಸನ ಅಷ್ಟೇ ಅಲ್ಲ ಇನ್ನೂ ಎಲ್ಲೆಲ್ಲಿ ಪೆನ್ಡ್ರೈವ್ ಹಂಚಿದ್ದಾರೆ ಗೊತ್ತಾ? ನಾನು ಯಾರಿಗೂ ರಕ್ಷಣೆ ಕೊಡಲ್ಲ ಎಂದು ಪ್ರೂಫ್ ಸಮೇತ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪೆನ್‌ಡ್ರೈವ್ ಬಿಟ್ಟ ಕಿರಾತಕರ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಟಿ ನಡೆಸಿದ ಕುಮಾರಸ್ವಾಮಿ, ವೈರಲ್ ಆಗಿರುವ ವಿಡಿಯೋದಲ್ಲಿ ಯಾರೇ ಇದ್ರೂ ಕ್ರಮ. ನಮ್ಮ ಕುಟುಂಬದವರು ಇದ್ದರೂ ರಕ್ಷಣೆ ಮಾಡಲ್ಲ. ಇನ್ನು ರಾಜ್ಯದಲ್ಲಿ ಇತ್ತೀಚೆಗೆ ಅತ್ಯಂತ ಕೆಟ್ಟ ರೀತಿಯ ಬೆಳವಣಿಗೆ ನಡೆದಿದೆ. ಸಮಾಜದಲ್ಲಿ ಉತ್ತಮ ಬದುಕು ಕಾಣಬೇಕು. ಅಂತಹ ಬದುಕಿಗೆ ಯಾವ ರೀತಿ ಧಕ್ಕೆ ಉಂಟಾಗಿದೆ. ಇದು ನೋವಿನ ಸಂಗತಿಯಾಗಿದೆ ಎಂದರು.
ಇನ್ನು ಏ.21 ರಂದು ಪೆನ್‍ಡ್ರೈವ್ ಅನ್ನು ಇಡೀ ರಾಜ್ಯಾದ್ಯಂತ ಬಿಡುಗಡೆ ಮಾಡಿದ್ರು. ಪೊಲೀಸ್ ಅಧಿಕಾರಿಗಳನ್ನು ಇಟ್ಟು ಹಂಚಿದ್ದಾರೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಸೇರಿ ಹಲವು ಕಡೆ ಹಂಚಿಕೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಪೂರ್ಣ ಚಂದ್ರ ಅಂತ ಪ್ರಜ್ವಲ್ ಏಜೆಂಟ್ ಇದ್ದರು. ಅವರು ಈ ಸಂಬಂಧ ಏಪ್ರಿಲ್ 22 ರಂದು ಹಾಸನ ಡಿಸಿಗೆ ದೂರು ಕೊಟ್ರು. ಚುನಾವಣೆ ಅಧಿಕಾರಿಗಳೂ ದೂರು ಕೊಟ್ಟಿದ್ದಾರೆ. 21 ರಂದು ರಾತ್ರಿ ಪ್ರಜ್ವಲ್ ವಿಡಿಯೋ ಬಿಡುಗಡೆ ಕ್ಷಣಗಣನೆ ಅಂತ ಲಿಂಕ್ ಕೊಟ್ಟಿದ್ದಾರೆ. ವಿಡಿಯೋದಲ್ಲಿ ಯಾರೇ ಇದ್ದರೂ ರಕ್ಷಣೆ ಕೊಡಲ್ಲ. ನಮ್ಮ ಕುಟುಂಬದವರೇ ಆದರು ರಕ್ಷಣೆ ಮಾಡಲ್ಲ ಎಂದು ಖಡಕ್ ಆಗಿ ತಿಳಿಸಿದ್ದಾರೆ.
ನೆಲದ ಕಾನೂನು ಪ್ರಕಾರ ಶಿಕ್ಷೆ ಆಗಲಿ. ನಮ್ಮ ನಾಡಿನ ತಾಯಂದಿರ ಮುಂದೆ ಹೇಳ್ತೀನಿ. ಯಾವ ವ್ಯಕ್ತಿಯನ್ನೂ ನಾನು ರಕ್ಷಣೆ ಮಾಡಲ್ಲ. ವಿಡಿಯೋ ಬಿಡುಗಡೆ ಮಾಡ್ತೀನಿ ಅಂತ ನವೀನ್ ಗೌಡ ರಾತ್ರಿ 8ಕ್ಕೆ ಹೇಳಿದ್ದಾನೆ. ಪ್ರಜ್ವಲ್ ಏಜೆಂಟ್ ದೂರು ಕೊಟ್ಟ ಮೇಲೆ ಎಫ್‍ಐಆರ್ ದಾಖಲಾಗಿದೆ. ನವೀನ್, ಕಾರ್ತಿಕ್, ಚೇತನ್, ಪುಟ್ಟರಾಜು ಮೇಲೆ ದೂರು ಕೊಟ್ಟರು. ಎಫ್‌ಐಆರ್ ಹಾಕಿದ್ರೂ ಈ ಕ್ಷಣದವರೆಗೆ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಏ.24ರಂದು ಚುನಾವಣಾ ಆಯೋಗದವರು ಹಿಂಬರಹವನ್ನು ಕೊಟ್ಟಿದ್ದಾರೆ. ಏಜೆಂಟ್ ದೂರು ಕೊಟ್ಟ ಮೇಲೆ ಸರ್ಕಾರದ ಗಮನಕ್ಕೆ ಹೋಯ್ತು. ಇದಾದ ಮೇಲೆ ಹಾಸನದಲ್ಲಿ 25 ಸಾವಿರಕ್ಕೂ ಹೆಚ್ಚು ಪೆನ್ ಡ್ರೈವ್ ಹಂಚಿಕೆಯಾಗಿದೆ. ಪ್ರಜ್ವಲ್ ಏಜೆಂಟ್ ದೂರು ಕೊಟ್ಟ ಮೇಲೆ ಯಾವುದೇ ಕ್ರಮ ಆಗಿಲ್ಲ. ಇಂತಹ ದೊಡ್ಡ ಪ್ರಕರಣದ ಬಗ್ಗೆ ಈ ಕ್ಷಣದವರೆಗೆ 5 ಜನರ ಮೇಲೆ ಆಕ್ಷನ್ ತಗೊಂಡಿಲ್ಲ. ಸಣ್ಣ ಪುಟ್ಟ ಕೇಸ್‌ಗೆ ದೊಡ್ಡ ವಿಷಯ ಮಾಡೋರು ಈ ಕೇಸ್‌ನಲ್ಲಿ ಕ್ರಮ ಮಾಡಿಲ್ಲ. ಪೆನ್ ಡ್ರೈವ್‌ನಲ್ಲಿ ಯಾರ‍್ಯಾರ ಪಾತ್ರ ಇದೆ ಎಂಬ ಸತ್ಯ ಹೊರಗೆ ಬರಬೇಕು ಎಂದು ಕಿಡಿಕಾರಿದರು.
ಪದೇಪದೆ ನನ್ನ ಬಗ್ಗೆ ಸಿಎಂ ಮಾತಾಡಿದ್ರು. ಡಿ.ಕೆ.ಶಿವಕುಮಾರ್ ಏಕವಚನದಲ್ಲಿ ನನ್ನ ಬಗ್ಗೆ ಮಾತಾಡಿದ್ರು. ಮಹಿಳೆಯರು ಹೋರಾಟ ಮಾಡಿ ಅಂತ ಕರೆ ಕೊಟ್ರು. ಇದೆಲ್ಲ ಆದ ಮೇಲೆ ಏ.26 ಚುನಾವಣೆ ಆಗೋವರೆಗೆ ನಮ್ಮ ಏಜೆಂಟ್ ಕೊಟ್ಟ ದೂರಿನ ಮೇಲೆ ಯಾವುದೇ ಕ್ರಮ ಆಗಿಲ್ಲ. ಏ.25 ರಂದು ಮಹಿಳಾ ಆಯೋಗದ ಅಧ್ಯಕ್ಷೆ ವಿಶೇಷ ತಂಡ ರಚನೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದಾರೆ ಎಂದರು.
ಚಿತ್ರೀಕರಣ ಮಾಡಿದ ವ್ಯಕ್ತಿ ಮತ್ತು ಪೆನ್ ಡ್ರೈವ್ ಬಿಡುಗಡೆ ಮಾಡಿದವರ ಮೇಲೆ ಕ್ರಮ ಆಗಬೇಕು ಅಂತ ಪತ್ರ ಬರೆದರು. ಈ ಪತ್ರದಲ್ಲಿ ರೇವಣ್ಣ, ಪ್ರಜ್ವಲ್ ರೇವಣ್ಣ ಹೆಸರು ಇಲ್ಲ. ಆದರೂ ಸಿಎಂ, ಪ್ರಜ್ವಲ್ ರೇವಣ್ಣ ಅಂತ ಟ್ವೀಟ್ ಮಾಡ್ತಾರೆ. ಏ.27 ರಂದು ಸಿಎಂ ಎಸ್‍ಐಟಿ ರಚನೆ ಮಾಡಿದ್ರು.
28 ರಂದು ಬೆಂಗಳೂರಿನಲ್ಲಿ ಕುಳಿತುಕೊಂಡು ಡಿಜಿಟಲ್ ಮೂಲಕ ಇಲ್ಲಿ ಟೈಪ್ ಮಾಡಿ ಎರಡು ಹೆಣ್ಣು ಮಕ್ಕಳ ಹೆಸರಲ್ಲಿ ಹೊಳೆನರಸೀಪುರ ಸ್ಟೇಷನ್‌ಗೆ ಕಳಿಸಿದ್ರು. ಎಸ್‍ಐಟಿ ಕೊಟ್ಟಾಗ ಪಾರದರ್ಶಕವಾಗಿ ನಡೆಯುತ್ತೆ ಅಂತಾ. ಆದರೆ ಆಮೇಲೆ ಗೊತ್ತಾಯ್ತು. ಎಸ್‍ಐಟಿ ಅಂದ್ರೆ ಸಿದ್ದರಾಮಯ್ಯ ಇನ್ವೆಸ್ಟಿಕೇಷನ್ ಟೀಂ ಹಾಗೂ ಡಿ.ಕೆ.ಶಿವಕುಮಾರ್ ಇನ್ವೆಸ್ಟಿಂಗ್ ಟೀಂ ಆಗಿದೆ. ಇದು ನಿಜವಾದ ಎಸ್‍ಐಟಿ ಎಂದು ಎಚ್‍ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಹೆಣ್ಣು ಮಕ್ಕಳ ರಕ್ಷಣೆ ಬೇಕಾಗಿಲ್ಲ: ನಿತ್ಯ ಇವರು ಮಾತುಕತೆ ಮಾಡಿದ್ದಾರೆ. ಇವರು ಮಾತಾಡ್ತಿರೋ ಕಾಲ್ ರೆಕಾರ್ಡ್ ಎಲ್ಲ ಹೊರ ಬರಬೇಕು. ಈಗಲೂ ಹೇಳ್ತೀನಿ ಪ್ರಜ್ವಲ್ ವಿಷಯಕ್ಕೆ ಅಡಚಣೆ ಮಾಡಲ್ಲ. ಪ್ರಜ್ವಲ್‌ನ ನಾನು ವಹಿಸಿಕೊಳ್ಳಲ್ಲ. ಈ ಬಗ್ಗೆ ತನಿಖೆ ಆಗಲಿ.
ಆದರೆ ತನಿಖೆ ಹೇಗೆ ಹೋಗ್ತಿದೆ ಅಂದರೆ ಏ.28ಕ್ಕೆ ಹೊಳೆನರಸೀಪುರದಲ್ಲಿ ಕೇಸ್ ಆಗುತ್ತೆ. ಅಲ್ಲಿ ಬೇಲ್ ಆಗೋ ಸೆಕ್ಷನ್ ಹಾಕಿದ್ದಾರೆ. ಬೇಲ್ ಸೆಕ್ಷನ್ ಅಂತ ಬಂತು ಆಗ ಇನ್ನೊಂದು ದೂರು ಮಾಡಿಸಿದ್ದೀರಿ. ಜಿಲ್ಲಾ ಪಂಚಾಯಿತಿ ಸದಸ್ಯೆಗೆ ಗನ್ ಪಾಯಿಂಟ್ ಇಟ್ಟು ಬೆದರಿಕೆ ಅಂತ ದೂರು ಕೊಟ್ರಿ. ಈ ವಿಷಯಗಳು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು ಯಾರು?. ತನಿಖೆ ವೇಳೆ ಮಾಹಿತಿ ಸೋರಿಕೆ ಆಗಬಾರದು. ಈ ಸರ್ಕಾರಕ್ಕೆ ಬೇಕಿರೋದು ಹೆಣ್ಣುಮಕ್ಕಳ ರಕ್ಷಣೆ ಅಲ್ಲ. ಯಾರನ್ನು ತೇಜೋವಧೆ ಮಾಡೋಕೆ ಇದು ಬಳಸಿಕೊಂಡಿದ್ದಾರೆ ಎಂದು ಗರಂ ಆದರು.
ಮೇ 2 ರಂದು ದೂರು ಹಾಕಿದ್ದೀರಿ. ದೂರು ಕೊಟ್ಟ ಹೆಣ್ಣು ಮಗಳು ಏ. 28 ಕ್ಕೆ ಬೇಲೂರಿನಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಆರೋಪ ಪ್ರಜ್ವಲ್ ಪಕ್ಕದಲ್ಲಿ ಇರೋ ಹೆಣ್ಣು ಮಗಳು ಯಾರು? ಮೊದಲ ಪೆನ್ ಡ್ರೈವ್‌ನಲ್ಲಿ ಬಿಡುಗಡೆಯಾದ ಮಹಿಳೆ 21ಕ್ಕೆ ಪ್ರಜ್ವಲ್ ಜತೆ ಪ್ರಚಾರ ಮಾಡಿದರು. 22ಕ್ಕೆ ಅವಳ ವಿಡಿಯೋ ಲಿರೀಸ್ ಮಾಡಿದಿರಿ. ಈಗ ಗನ್ ಪಾಯಿಂಟ್ ಅಂತ ಇನ್ನೊಂದು ದೂರು. ಇದು ನಿಮ್ಮ ದೂರು. ಶಿವಕುಮಾರ್ ಅವರೇ, ಸಿಎಂ ಅವರೇ ಇದು ನಿಮ್ಮ ತನಿಖೆ ಎಂದು ಎಚ್‍ಡಿಕೆ ವಾಗ್ದಾಳಿ ನಡೆಸಿದರು.
ಯಾರು ರೇವಣ್ಣ ಮೇಲೆ ನೇರವಾಗಿ ದೂರು ಕೊಟ್ಟಿಲ್ಲ. ಅಮೇಲೆ ಕಿಡ್ನಾಪ್ ಅಂತ ಸೃಷ್ಟಿ ಮಾಡಿದರು. ಕಿಡ್ನ್ಯಾಪ್ ಆದ ಹೆಣ್ಣುಮಗಳನ್ನ ಎಲ್ಲಿಂದ ಕರೆದುಕೊಂಡು ಬಂದಿರಿ. ತೋಟದ ಮನೆ ಅಂತಾರೆ. ತೋಟದ ಮನೆ ಮಹಜರ್ ಮಾಡಿದ್ರಾ?. ಆಕೆ ಹೇಳಿಕೆ ಕೊಡಲಿಲ್ಲವಾ..?, ನ್ಯಾಯಾಧೀಶರ ಮುಂದೆ ಆಕೆಯನ್ನು ಏಕೆ ಪ್ರೊಡ್ಯೂಸ್ ಮಾಡಿಲ್ಲ. ಯಾರನ್ನು ಕರೆದುಕೊಂಡು ಒತ್ತಡ ಹಾಕಿಸಿದ್ದೀರಾ ಎಂದು ಪ್ರಶ್ನಿಸಿದರು.
ಏ.30ರಂದು ಕಾರ್ತಿಕ್ ಪ್ರೆಸ್ ಮುಂದೆ ಬರದೇ ವಿಡಿಯೋ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ರಿ. ಪೆನ್ ಡ್ರೈವ್ ಸೂತ್ರಧಾರಿ ಕಾರ್ತಿಕ್ ಗೌಡ. ಅವನು ಎಲ್ಲಿ ಇದ್ದಾನೆ ಅಂತ ಎಸ್‍ಐಟಿ ಹುಡುಕಿಲ್ಲ. ಸರ್ಕಾರಕ್ಕೆ ಕೇಳುತ್ತೀನಿ ಈ ಕೇಸ್ ರೇವಣ್ಣ, ಪ್ರಜ್ವಲ್ ಮೇಲೆ ಮಾತ್ರ ಮಾಡ್ತಿರೋದೋ ಅಥವಾ ಮಹಿಳಾ ಆಯೋಗ ಪತ್ರ ಬರೆದ ರಾಜಕಾರಣಿ ಮೇಲೋ ಅಥವಾ ಪೆನ್ ಡ್ರೈವ್ ಬಿಡುಗಡೆ ಮಾಡಿರೋರ ಮೇಲೆ ತನಿಖೆ ಆಗುತ್ತೋ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಅಲ್ಲದೇ 21 ರಂದು ವಿಡಿಯೋ ಬಿಡುಗಡೆ ಮಾಡ್ತೀನಿ ಎಂದ ನವೀನ್ ಗೌಡನನ್ನು ಯಾಕೆ ಈವರೆಗೂ ಬಂಧನ ಮಾಡಿಲ್ಲ. 14 ದಿನ ಆಗಿದೆ. ಪೆನ್ ಡ್ರೈವ್ ಅನ್ನ ಬಿಡುಗಡೆ ಮಾಡಿದ್ದೇನೆ ಅಂತಾನೆ ಎಂದು ನವೀನ್ ಗೌಡ ಆಡಿಯೋವನ್ನು ಕುಮಾರಸ್ವಾಮಿ ರಿಲೀಸ್ ಮಾಡಿದರು.