ಪಿರಿಯಾಪಟ್ಟಣ: ತಾಲೂಕಿನ ಬೆಕ್ಕರೆ ಗ್ರಾಮದ ದೊಡ್ಡಕೆರೆ ಏರಿ ಶನಿವಾರ ತಡರಾತ್ರಿ ಬಿದ್ದ ಭಾರಿ ಮಳೆಯಿಂದಾಗಿ ಒಡೆದ ಪರಿಣಾಮ ಅಕ್ಕಪಕ್ಕದ ತೋಟ ಜಮೀನುಗಳಿಗೆ ನುಗ್ಗಿದ್ದು, ಅಪಾರ ಪ್ರಮಾಣ ಬೆಳೆಹಾನಿಯಾಗಿದೆ.
ಇತ್ತೀಚೆಗಷ್ಟೇ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆರೆ ಹೂಳೆತ್ತಿಸಿ ಅಭಿವೃದ್ಧಿಪಡಿಸಲಾಗಿತ್ತು. ನರೇಗಾ ಯೋಜನೆಯಡಿ ಸಹ ಕೆರೆ ಏರಿ ಅಭಿವೃದ್ಧಿಪಡಿಸಲಾಗಿತ್ತು.
ಪ್ರಸಕ್ತ ವರ್ಷದಲ್ಲಿ ಬಿದ್ದ ಮಳೆಗೆ ಹಲವು ವರ್ಷಗಳಿಂದ ಭರ್ತಿಯಾಗದ ಕೆರೆ ಈ ಬಾರಿ ಭರ್ತಿಯಾಗಿ ರೈತರಲ್ಲಿ ಮಂದಹಾಸ ಮೂಡಿಸಿತ್ತು.
ಆದರೆ ಇತ್ತ ಏರಿ ಒಡೆದು ಅದೇ ರೈತರು ಬೆಳೆ ಕಳೆದುಕೊಂಡು ಸಂಕಷ್ಟ ಎದುರಿಸುವಂತಾಗಿದೆ.