ಮಂಗಳೂರು: ಅಂತಾರಾಜ್ಯ ಚಡ್ಡಿಗ್ಯಾಂಗ್‌ನ ನಾಲ್ವರನ್ನು ಬಂಧಿಸಲು ನಿಖರ ಮಾಹಿತಿ ನೀಡಿದ KSRTC ಮಂಗಳೂರು 3 ನೇ ಘಟಕದ ಸಿಬ್ಬಂದಿಗಳಿಗೆ ಪೊಲೀಸ್ ಇಲಾಖೆ, ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಮಂಗಳೂರು 3 ನೇ ಘಟಕದ ಚಾಲಕ ಬಸವರಾಜ್ ಅಳ್ಳಪ್ಪ (ಬಿಲ್ಲೆ 652) ಹಾಗೂ ಚಾಲಕ ಕಂ ನಿರ್ವಾಹಕ ಹನುಮಂತ ಅಟಗಲ್ಲು (ಬಿಲ್ಲೆ 3746) ಹಾಗೂ ಖಾಸಾಗಿ ಚಾಲಕ (W124) ಮಹೇಶ್ ಹಾಗೂ ನಿರ್ವಹಕ ಸೀನಪ್ಪ (ಬಿಲ್ಲೆ 4358) ಅವರಿಗೆ ಎಲ್ಲರ ಪರವಾಗಿ ಘಟದ ವ್ಯವಸ್ಥಾಪಕರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ಘಟನೆ : ಜುಲೈ 9ರಂದು ಅಂದರೆ ಮಂಗಳವಾರವಾ ನಿನ್ನೆ ಬೆಳಗಿನ ಜಾವ ಇದೆ ಚಡ್ಡಿಗ್ಯಾಂಗ್ ದರೋಡೆ ಕೋರರು ಮಂಗಳೂರಿನ ಒಂದು ಮನೆಯಲ್ಲಿ ದರೋಡೆ ಮಾಡಿ ವೃದ್ಧ ದಂಪತಿ ಮೇಲೆ ಹಲ್ಲೆ ಮಾಡಿ ಬಳಿಕ ಆ ಮನೆಯವರ ಕಾರಿನಲ್ಲೇ ಮೂಲ್ಕಿಗೆ ತೆರಳಿ ಅನಂತರ KSRTC ಬಸ್ಸು ಹತ್ತಿದ್ದರು.
ಈ ಮಾಹಿತಿ ಅನ್ವಯ ಪೊಲೀಸರು KSRTC ಮಂಗಳೂರು 3 ನೇ ಘಟಕಕ್ಕೆ ಬಂದು ವಿಚಾರಿಸಿ ವಿಡಿಯೋ ತೋರಿಸಿದಾಗ ಚಾಲಕ ಬಸವರಾಜ್ ಬಸ್ಸಿನ ವಿಡಿಯೋ ನೋಡಿ ಇದು ನಮ್ಮ ಘಟಕದ ಕಬ್ಬರಗಿ ಮಂಗಳೂರು ನಡುವೆ ಸಂಚರಿಸುವ ಬಸ್ ಎಂದು ತಿಳಿಸಿದರು.
ಆ ಬಸ್ ಚಾಲಕ ಕಂ ನಿರ್ವಾಕರಾದ ಹನುಮಂತ ಅಟಗಲ್ಲು ಅವರನ್ನು ವಿಚಾರಿಸಿದಾಗ ಹೌದ್ ಅವರು 4 ಜನ ಅಪರಿಚಿತರು ಮೂಲ್ಕಿ ಬಸ್ಟ್ಯಾಂಡ್‌ನಲ್ಲಿ ನಮ್ಮ ಬಸ್ ಹತ್ತಿದ್ದು ಆಮೇಲೆ ಮಂಗಳೂರಿನಲ್ಲಿ ಇಳಿದು ನಮ್ಮದೇ ಅಂದರೆ ಮಂಗಳೂರು 3 ನೇ ಘಟಕದ ಬೆಳಗ್ಗೆ 5.30 ಹೊರಡುವ ಮಂಗಳೂರು ಬೆಂಗಳೂರು ಸಾರಿಗೆ ಬಸ್‌ನಲ್ಲಿ ಪ್ರಯಾಣಿಸಿದ್ದರು ಎಂದು ನಿಖರ ಮಾಹಿತಿ ನೀಡಿದರು.
ತದನಂತರ ತೀವ್ರ ಶೋಧಕ್ಕೆ ಇಳಿದ ಪೊಲೀಸರು ಬೆಂಗಳೂರು ಚಾಲಕರ ಮತ್ತು ನಿರ್ವಾಹಕರನ್ನು ವಿಚಾರಿಸಿದಾಗ ದರೋಡೆಕೋರ ಚಂಡಿಗ್ಯಾಂಗ್ ಇರುವಿಕೆ ಬಗ್ಗೆ ಖಚಿತ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧಾರದ ಮೇರೆಗೆ ಸಕಲೇಶಪುರ ಪೊಲೀಸರು ಈ ಚಡ್ಡಿಗ್ಯಾಂಗ್ ದರೋಡೆ ಕೋರರನ್ನು ಬಂಧಿಸಲು ಯಶಸ್ವಿಯಾದರು.
ಇತ್ತ ಚಂಡಿಗ್ಯಾಂಗ್ ಬಂಧಿಸಲು ಕೂಡಲೇ ಜಾಗ್ರತರಾದ ಪೊಲೀಸರ ಕಾರ್ಯಕ್ಕೆ ಎಲ್ಲರ ಕಡೆಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಈ ನಡುವೆ ಚಂಡಿಗ್ಯಾಂಗ್ ಹಿಡಿಯಲು ಪೊಲೀಸರಿಗೆ ಸಾಥ್ ನೀಡಿದ KSRTC ಸಿಬ್ಬಂದಿಗಳಿಗೆ ಪೊಲೀಸ್ ಅಧಿಕಾರಿಗಳು ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.