Please assign a menu to the primary menu location under menu

NEWSದೇಶ-ವಿದೇಶರಾಜಕೀಯ

ಇಂದು ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ: 102 ಕ್ಷೇತ್ರಗಳಲ್ಲಿ ಆರಂಭ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಮೊದಲ ಹಂತದ ಲೋಕಸಭೆ ಚುನಾವಣಾ ಮತದಾನ ಇಂದು (ಶುಕ್ರವಾರ ಏ.19)) ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹರಾಷ್ಟ್ರ, ತಮಿಳುನಾಡು ಸೇರಿದಂತೆ 21 ರಾಜ್ಯಗಳ 102 ಕ್ಷೇತ್ರಗಳಿಗೆ ನಡೆಯುತ್ತಿದ್ದು ಈವರೆಗೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಇಂದಿನ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಎಲ್ಲ ತಯಾರಿ ಮಾಡಿಕೊಂಡಿದೆ. 102 ಕ್ಷೇತ್ರಗಳಲ್ಲಿ 11 ಎಸ್ಟಿ, 18 ಎಸ್ಸಿ, 73 ಸಾಮಾನ್ಯ ಕ್ಷೇತ್ರಗಳು ಬರಲಿವೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆ ವರೆಗೂ ಮತದಾನ ನಡೆಯಲಿದೆ. ಈ ಮಧ್ಯೆ ವ್ಯವಸ್ಥಿತ ಚುನಾವಣೆಗಾಗಿ 1.87 ಲಕ್ಷ ಮತಗಟ್ಟೆಗಳ ನಿರ್ಮಾಣ ಮಾಡಿದ್ದು, 18 ಲಕ್ಷ ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ.

8.4 ಕೋಟಿ ಪುರುಷ, 8.23 ಕೋಟಿ ಮಹಿಳಾ ಮತ್ತು 11,371 ತೃತೀಯ ಲಿಂಗಿಗಳು ಸೇರಿ ಒಟ್ಟು 16.63 ಕೋಟಿ ಮತದಾರರು ಮೊದಲ ಹಂತದಲ್ಲಿ ಮತದಾನಕ್ಕೆ ಅರ್ಹರಾಗಿದ್ದಾರೆ. ಇದರಲ್ಲಿ 3.51 ಕೋಟಿ ಯುವ ಮತದಾರರಿದ್ದು 35.67 ಲಕ್ಷ ಯುವ ಸಮೂಹ ಮೊದಲ ಸಲ ವೋಟಿಂಗ್ ಮಾಡಿದರೆ 14.14 ಲಕ್ಷ 85+ ವಯಸ್ಸಿನ ಹಿರಿಯ ಮತದಾರರು ತಮ್ಮ ಚಲಾಯಿಸಲಿದ್ದಾರೆ.

ಮೊದಲ ಹಂತದಲ್ಲಿ 1491 ಪುರುಷ, 134 ಮಹಿಳಾ ಅಭ್ಯರ್ಥಿಗಳು ಸೇರಿ 1625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇನ್ನು ಚುನಾವಣಾ ಕಾರ್ಯಗಳಿಗೆ 41 ಹೆಲಿಕಾಪ್ಟರ್, 84 ವಿಶೇಷ ರೈಲು ಹಾಗೂ 1 ಲಕ್ಷ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಚುನಾವಣಾ ಅಕ್ರಮ ತಡೆಯಲು 127 ಸಾಮಾನ್ಯ, 67 ಪೊಲೀಸ್, 167 ಖರ್ಚು ವೆಚ್ಚ ಸೇರಿ ಒಟ್ಟು 361 ಮಂದಿ ಚುನಾವಣಾ ಮೇಲ್ವಿಚಾರಕರನ್ನ ಆಯೋಗ ನೇಮಕ ಮಾಡಿದೆ.

ಚುನಾವಣೆ ನಡೆಯುತ್ತಿರುವ ರಾಜ್ಯಗಳು: ತಮಿಳುನಾಡಿನ ಎಲ್ಲ 39, ಉತ್ತರಾಖಂಡದ ಎಲ್ಲ 5, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯದ ಎಲ್ಲ 2 ಸ್ಥಾನಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ.

ರಾಜಸ್ಥಾನದ 25 ಸ್ಥಾನಗಳಲ್ಲಿ 12, ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ 8, ಮಧ್ಯಪ್ರದೇಶದ 29 ಸ್ಥಾನಗಳಲ್ಲಿ 6, ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 5, ಅಸ್ಸಾಂ 14 ಸ್ಥಾನಗಳಲ್ಲಿ 5, ಬಿಹಾರದ 40 ಸ್ಥಾನಗಳಲ್ಲಿ 4, ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ 3, ಛತ್ತೀಸ್‌ಗಢದ 11 ಸ್ಥಾನಗಳಲ್ಲಿ 1 ಮತ್ತು ಪುದುಚೆರಿ, ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ತಮಿಳುನಾಡಿನತ್ತ ಜನರು: ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿರುವ ನೆರೆ ರಾಜ್ಯ ತಮಿಳುನಾಡಿನ ಜನರು ತಮ್ಮ ಹಕ್ಕು ಚಲಾಯಿಸಲು ತವರಿನೆಡೆಗೆ ಪ್ರಯಾಣ ಬೆಳೆಸಿದ್ದಾರೆ.

ಮೊದಲ ಹಂತದ ಚುನಾವಣೆಯ ಹೈವೋಲ್ಟೇಜ್ ಕ್ಷೇತ್ರಗಳು
ಬಿಕಾನೆರ್: (ರಾಜಸ್ಥಾನ )
ಅರ್ಜುನ್ ರಾಮ್ ಮೇಘವಾಲ್ (ಬಿಜೆಪಿ)
ಗೋವಿಂದ್ ರಾಮ್ ಮೇಘವಾಲ್ (ಕಾಂಗ್ರೆಸ್)

ಅಲ್ವಾರ್: (ರಾಜಸ್ಥಾನ)
ಭೂಪೇಂದರ್ ಯಾದವ್ (ಬಿಜೆಪಿ)
ಲಲಿತ್ ಯಾದವ್ (ಕಾಂಗ್ರೆಸ್)

ಛಿಂದ್ವಾರಾ: (ಮಧ್ಯ ಪ್ರದೇಶ)
ವಿವೇಕ್ ಬಂಟಿ ಸಾಹು (ಬಿಜೆಪಿ)
ನಕುಲ್ ಕಮಲ್ ನಾಥ್ (ಕಾಂಗ್ರೆಸ್)

ನಾಗ್ಪುರ: ನಿತಿನ್ ಗಡ್ಕರಿ (ಬಿಜೆಪಿ)
ವಿಕಾಸ್ ಪಾಂಡುರಂಗ ಠಾಕ್ರೆ (ಕಾಂಗ್ರೆಸ್)

ಅರುಣಾಚಲ ಪಶ್ಚಿಮ
ಕಿರಣ್ ರಿಜಿಜು (ಬಿಜೆಪಿ)
ನಬಮ್ ತುಕಿ (ಕಾಂಗ್ರೆಸ್)

ಕೊಯಮತ್ತೂರು: ಗಣಪತಿ ರಾಜ್ ಕುಮಾರ್ (ಡಿಎಂಕೆ)
ಸಿಂಗೈ ಜಿ ರಾಮಚಂದ್ರನ್ (ಎಐಎಡಿಎಂಕೆ)
ಕೆ ಅಣ್ಣಾಮಲೈ (ಬಿಜೆಪಿ)
ಪಿ.ಆರ್ ನಟರಾಜನ್ (ಸಿಪಿಎಂ)

ಚೆನ್ನೈ ದಕ್ಷಿಣ : ತಮಿಳಚ್ಚಿ ತಂಗಪಾಂಡಿಯನ್ (ಡಿಎಂಕೆ)
ಜೆ ಜಯವರ್ಧನ್ (ಎಐಎಡಿಎಂಕೆ)
ತಮಿಳಿಸಾಯಿ ಸೌಂದರ್ಯರಾಜನ್ (ಬಿಜೆಪಿ)

ನೀಲಗಿರಿ: ಎ ರಾಜಾ (ಡಿಎಂಕೆ)
ಡಿ ಲೋಕೇಶ್ ತಮಿಳ್ಸೆಲ್ವನ್ (ಎಐಎಡಿಎಂಕೆ)
ಎಲ್ ಮುರುಗನ್ (ಬಿಜೆಪಿ)

ಶಿವಗಂಗಾ: ಕಾರ್ತಿ ಪಿ ಚಿದಂಬರಂ (ಕಾಂಗ್ರೆಸ್)
ಕ್ಸೇವಿಯರ್‌ದಾಸ್ (ಎಐಎಡಿಎಂಕೆ)
ಡಿ ದೇವನಾಥನ್ ಯಾದವ್ (ಬಿಜೆಪಿ)

ಚೆನ್ನೈ ಸೆಂಟ್ರಲ್: ದಯಾನಿಧಿ ಮಾರನ್ (ಡಿಎಂಕೆ)
ಬಿ ಪಾರ್ಥಸಾರಥಿ (ಡಿಎಂಡಿಕೆ)
ವಿನೋಜ್ ಪಿ ಸೆಲ್ವಂ (ಬಿಜೆಪಿ)

ತಿರುವಳ್ಳೂರ್: ಸಸಿಕಾಂತ್ ಸೆಂಥಿಲ್ (ಕಾಂಗ್ರೆಸ್)
ಕೆ ನಲ್ಲ ತಂಬಿ (ಆಒಆಏ)
ಪೊನ್ ವಿ ಬಾಲಗಣಪತಿ (ಬಿಜೆಪಿ)

ಪಿಲಿಭಿತ್: (ಉತ್ತರ ಪ್ರದೇಶ ) ಜಿತಿನ್ ಪ್ರಸಾದ (ಬಿಜೆಪಿ)
ಭಗವತ್ ಶರಣ್ ಗಂಗ್ವಾರ್ (ಎಸ್‌ಪಿ)
ಅನಿಸ್ ಅಹ್ಮದ್ ಖಾನ್ (ಬಿಎಸ್ಪಿ)

ಗಯಾ: (ಬಿಹಾರ್) ಜಿತನ್ ರಾಮ್ ಮಾಂಝಿ (HAM-S) (ಹಿಂದುಸ್ಥಾನಿ ಅವಾಮ್ ಮೋರ್ಚಾ )
ಕುಮಾರ್ ಸರ್ವಜೀತ್ (ಆರ್‌ಜೆಡಿ)
ವಿಜಯ್ ಮಾಂಝಿ (ಜೆಡಿಯು)

ಜೋರ್ಹತ್: (ಅಸ್ಸಾಂ): ತೊಪೋನ್ ಕುಮಾರ್ ಗೊಗೊಯ್ (ಬಿಜೆಪಿ)
ಗೌರವ್ ಗೊಗೊಯ್ (ಕಾಂಗ್ರೆಸ್)

ಹರಿದ್ವಾರ ( ಉತ್ತರಾಖಂಡ ): ವೀರೇಂದ್ರ ರಾವತ್ (ಕಾಂಗ್ರೆಸ್)
ತ್ರಿವೇಂದ್ರ ಸಿಂಗ್ ರಾವತ್ (ಬಿಜೆಪಿ)

Leave a Reply

error: Content is protected !!
LATEST
ಹೆಂಡತಿ, ಮಾವನ ಕಾಟ: ರೈಲಿಗೆ ತಲೆಕೊಟ್ಟು ಹೆಡ್‌ಕಾನ್‌ಸ್ಟೇಬಲ್ ಆತ್ಮಹತ್ಯೆ 9 ಸಾವಿರ ರೂ. ಲಂಚ ಪ್ರಕರಣ: ಪಿಡಿಒಗೆ 3 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ.ದಂಡ KSRTC ತುಮಕೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಚಾಲಕನಿಗೆ ಧೈರ್ಯ ತುಂಬಿದ ಡಿಸಿ, ಅಧಿಕಾರಿಗಳು KSRTC: ಡಿ.31ರ ಮುಷ್ಕರ ಬೆಂಬಲಿಸುವಂತೆ ಕೂಟಕ್ಕೆ ಜಂಟಿ ಕ್ರಿಯಾ ಸಮಿತಿ ಮನವಿ ಸರ್ಕಾರದ ನಡೆಯೇ  BMTC ಆರ್ಥಿಕವಾಗಿ ಕುಸಿಯಲು ಕಾರಣ: ವರದಿ ಕೊಟ್ಟ CAG KSRTC ಕುಣಿಗಲ್‌: ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದಿರುವುದಕ್ಕೆ ಮನನೊಂದ ಚಾಲಕ ಆತ್ಮಹತ್ಯೆಗೆ ಯತ್ನ KSRTC: ಈ ಅಧಿವೇಶನದಲ್ಲಾದರೂ ಸಿಎಂ ಸರಿ ಸಮಾನ ವೇತನ ಬಗ್ಗೆ ದಿಟ್ಟ ಹೆಜ್ಜೆ ಇಡಲಿ BMTC: ಆಧಾರ್‌ ಕಾರ್ಡ್‌ ಯಾವ ಭಾಷೆಯಲ್ಲೇ ಇರಲಿ ಕರ್ನಾಟಕದ ವಿಳಾಸವಿದ್ದರೆ ಉಚಿತ ಪ್ರಯಾಣ ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್‌ KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್‌ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್‌ ಬಂಧನ