ಬೆಂಗಳೂರು: ಪ್ರೆಸ್ ಕ್ಲಬ್ ಆಫ್ ಬೆಂಗಳೂರು 2022ನೇ ಸಾಲಿನ ಪ್ರೆಸ್ ಕ್ಲಬ್ ಬಿಸಿನೆಸ್ ಐಕಾನ್ ಪ್ರಶಸ್ತಿಯನ್ನು ಏಷ್ಯನ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸಂಸ್ಥಾಪಕರು ಹಾಗೂ ಪ್ರಿನ್ಸಿಪಾಲರಾದ ಡಾ. ಡಿಂಪಲ್ ಆರ್. ಗೌಡ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಗೈಯುತ್ತಿರುವ 19 ಸಾಧಕರಿಗೆ ನೀಡಿ ಪುರಸ್ಕರಿಸಲಾಯಿತು.
ಪ್ರೆಸ್‍ಕ್ಲಬ್ ಆವರಣದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಪ್ರೆಸ್‍ಕ್ಲಬ್ ಬಿಸಿನೆಸ್ ಐಕಾನ್ ಆವಾರ್ಡ್-2022 ರ ಕಾರ್ಯ ಕ್ರಮದಲ್ಲಿ ಕೈಗಾರಿಕಾ ಕ್ಷೇತ್ರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಲ್ಲಿ 19 ಮಂದಿಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮುರುಗೇಶ್ ನಿರಾಣಿ, ನಟಿ ರಮ್ಯಾ ಅವರು ಪ್ರಶಸ್ತಿಯನ್ನು ಈ ಸಾಧಕರಿಗೆ ಪ್ರದಾನ ಮಾಡಿ ಸನ್ಮಾನಿಸಿದರು.
1.ಡಾ. ಡಿಂಪಲ್ ಆರ್. ಗೌಡ, ಸಂಸ್ಥಾಪಕರು, ಪ್ರಿನ್ಸಿಪಾಲ್, ಏಷ್ಯನ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, 2.ಅದಿತಿ, ಹೆಲ್ಪಿಂಗ್ ಹಾಟ್ರ್ಸ್, ಎನ್.ಜಿಒ, 3.ಸುನಿಲ್ ಪೂಜಾರಿ ಸಂಸ್ಥಾಪಕರು, ವ್ಯವಸ್ಥಾಪಕ ನಿರ್ದೇಶಕರು, ಏರ್‍ವೇಸ್ ಕೋರಿಯರ್ ಪ್ರೈ.ಲಿ, 4.ಕೆ.ಎಂ.ಎಫ್, 5.ಜಯಂತಿ, ವ್ಯವಸ್ಥಾಪಕ ನಿರ್ದೇಶಕರು, ನೋನಿ ಸಿಪ್.
6.ಡಾ. ರವಿ ರಾಜ್, ಸಂಸ್ಥಾಪಕರು, ವ್ಯವಸ್ಥಾಪಕ ನಿರ್ದೇಶಕರು., ವೇದಂ ಆಯುರ್ವೇದ, 7.ಸಂತೋಷ್ ಗುರೂಜಿ (ಡಾ. ವಿಶ್ವ ಸಂತೋಶ್ ಶ್ರೀಪಾದಂಗಳವರ್ ಸ್ವಾಮೀಜಿ), ಆಯುರ್‍ಕೇಶ್ ಹೇರ್ ಆಯಿಲ್, 8.ಡಿ.ಕೆ. ಮೋಹನ್‍ಬಾಬು, ಅಧ್ಯಕ್ಷರು, ಕೇಂಬ್ರಿಜ್ ಎಂಜಿನಿಯರಿಂಗ್ ಕಾಲೇಜ್, 9.ಚೇತನ್, ವ್ಯವಸ್ಥಾಪಕ ನಿರ್ದೇಶಕರು, ಇಕ್ವಿನಾಕ್ಸ್ ಗ್ಲೋಬಲ್ ಶೆಲ್ಟರ್ಸ್.
10. ಡಾ. ರಘು, ವ್ಯವಸ್ಥಾಪಕ ನಿರ್ದೇಶಕರು, ನಮ್ಮ ವೈದ್ಯಶಾಲಾ ಹೋಮಿಯೋಪತಿ, 11. ವಿಜಯ ಸಾರಥಿ ಡಿ. ಆರ್, ಶ್ರೀ ವಾಸವಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್-ಪಿ.ಯು ಡಿಪ್ಲೊಮಾ ಕಾಲೇಜು, 12. ಪೂಜಿತ & ಲಕ್ಷ್ಮಿ ನಾರಾಯಣ್, ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಆರಾ ಡಿಸೈನ್ ಲೋಟಸ್- ಆರ್ಕಿಟೆಕ್ಚರ್.
13. ರೋಹಿತ್ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕರು, ವಿದ್ವತ್ ಇನೋವಿಟಿವ್ ಸೆಲ್ಯೂಷನ್, 14. ಡಾ. ನಂದಿನಿ, ವ್ಯವಸ್ಥಾಪಕ ನಿರ್ದೇಶಕರು, ಐಎಸ್‍ಆರ್‍ಐ ಗ್ರೂಪ್- ಅಗ್ರಿಕಲ್ಚರ್, 15. ರಾಜಶೇಖರ್, ವ್ಯವಸ್ಥಾಪಕ ನಿರ್ದೇಶಕರು, ಐಹೆಚ್‍ಎಫ್‍ಎಲ್ – ಇ.ವಿ.
16. ನಿಂಗರಾಜು, ವ್ಯವಸ್ಥಾಪಕ ನಿರ್ದೇಶಕರು, ಹಳ್ಳಿ ಜೊನ್ನೆ ಬಿರಿಯಾನಿ- ಫುಡ್ ಎಂಟರ್‍ಪ್ರಿನಿಯರ್, 17. ಸತೀಶ್, ಮ್ಯಾನೇಜಿಂಗ್ ಡೈರೆಕ್ಟರ್, ಅಭಯ ಗೋಲ್ಡ್, ಗೋಲ್ಡ್ ಬೈಯರ್, 18. ರಿಯಲ್ ಎಸ್ಟೇಟ್ ಎಂ & ಎಂ, 19. ದಿಲಿಪ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಜೀನಿ ಮಿಲೆಟ್ಸ್ ಈ ಸಾಧಕರನ್ನು ನ್ಮಾನಿಸಲಾಯಿತು.
ಸಮಾರಂಭವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರೆ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಂಸದೆ ಹಾಗೂ ಚಲನಚಿತ್ರ ನಟಿ ರಮ್ಯಾ, ಸಚಿವ ಗೋಪಾಲಯ್ಯ, ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಲ್ಲಪ್ಪ, ಕರ್ನಾಟಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಮತ್ತಿತರರು ಭಾಗವಹಿಸಿದ್ದರು.