NEWSನಮ್ಮಜಿಲ್ಲೆನಮ್ಮರಾಜ್ಯ

NWKRTC ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಪ್ರಿಯಾಂಗಾ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಎಂ. ಪ್ರಿಯಾಂಗಾ ಸೋಮವಾರ ಕಾರ್ಯಭಾರ ವಹಿಸಿಕೊಂಡಿದ್ದಾರೆ.

ನಿಕಟಪೂರ್ವ ಎಂಡಿ ಎಸ್‌.ಭರತ್‌ ಅವರು ನಿಗಮದ ಅಧಿಕಾರಿಗಳು/ ನೌಕರರಿಗೆ ಅನುಕೂರವಾಗುವಂತಹ ಹಲವಾರು ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಅವರಂತೆ ಪ್ರಿಯಾಂಗಾ ಅವರು ಕೂಡ ಮಾಡಿ ತೋರಿಸಲಿದ್ದಾರೆ ಎಂಬ ಆಶಾ ಭಾನವನೆಯನ್ನು ನಿಗಮದ ಪ್ರತಿಯೊಬ್ಬರು ಹೊಂದಿದ್ದಾರೆ. ಅದಕ್ಕೆ ಚ್ಯುತಿ ಬಾರಂತೆ ನೂತನ ಎಂಡಿ ಅವರು ನಡೆದುಕೊಳ್ಳಬೇಕು ಎಂಬುವುದು ನಮ್ಮ ಆಶಯ ಕೂಡ.

ನಿಗಮಕ್ಕೆ 799 ಹೊಸ ಬಸ್‌ಗಳ ಸೇರ್ಪಡೆ: ಸಂಸ್ಥೆ ವ್ಯಾಪ್ತಿಯಲ್ಲಿ 2023-24 ನೇ ಸಾಲಿನಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಹೊಸ ಬಸ್‌ಗಳ ಖರೀದಿ ಪ್ರಕ್ರಿಯೆಯು ಜಾರಿಯಲ್ಲಿದ್ದು, 20 ಪಲ್ಲಕ್ಕಿ ನಾನ್ ಏಸಿ ಸ್ಲೀಪರ್, 04 ಮಲ್ಟಿ ಆಕ್ಸಲ್ ಏಸಿ ಸ್ಲೀಪರ್ (ಅಂಬಾರಿ ಉತ್ಸವ), 675 BS-6 ಮಾದರಿಯ ಗ್ರಾಮಾಂತರ ಬಸ್‌ಗಳು ಹಾಗೂ 100 ನಗರ ಸಾರಿಗೆ ಬಸ್‌ಗಳು ಹೀಗೆ ಒಟ್ಟು 799 ಹೊಸ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ.

ಈ ಪೈಕಿ ಈಗಾಗಲೇ 10 ಪಲ್ಲಕ್ಕಿ ನಾನ್ ಏಸಿ ಸ್ಲೀಪರ್, 236 BS-6 ಮಾದರಿಯ ಗ್ರಾಮಾಂತರ ನೂತನ ಬಸ್ಸುಗಳು ರಸ್ತೆಗಿಳಿದಿದ್ದು ಸಾರ್ವಜನಿಕ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿವೆ. ಉಳಿದಂತೆ 10 ಪಲ್ಲಕ್ಕಿ ನಾನ್ ಏಸಿ ಸ್ಲೀಪರ್, 04 ಮಲ್ಟಿ ಆಕ್ಸಲ್ ಏಸಿ ಸ್ಲೀಪರ್ (ಅಂಬಾರಿ ಉತ್ಸವ), 439 BS-6 ಮಾದರಿಯ ಗ್ರಾಮಾಂತರ ಬಸ್‌ಗಳು ಹಾಗೂ 100 ನಗರ ಸಾರಿಗೆ ಬಸ್‌ಗಳ ಖರೀದಿಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿವೆ.

ಇದಲ್ಲದೇ 150 ನಗರ ಹಾಗೂ 200 ಗ್ರಾಮಾಂತರ ಹೀಗೆ ಒಟ್ಟು 350 ಎಲೆಕ್ಟ್ರಿಕಲ್ ವಾಹನಗಳ ಖರೀದಿಗೆ ಟೆಂಡರ್ ಕರೆಯಲಾಗುವುದು. ಪಲ್ಲಕ್ಕಿ’ ಸ್ಲೀಪರ್‌ ಬಸ್‌ಗಳು ‘ಸಂತೋಷವು ಪ್ರಯಾಣಿಸುತ್ತಿದೆ’ ಎಂಬ ಟ್ಯಾಗ್‌ಲೈನ್‌ ಒಳಗೊಂಡಿವೆ. 11.3 ಮೀಟರ್‌ ಉದ್ದದ ಈ ಬಸ್‌ಗಳು 197 ಎಚ್‌ಪಿ ಇಂಜಿನ್‌ ಒಳಗೊಂಡಿವೆ. ಮಲಗಲು ಇರುವಷ್ಟೇ ಆರಾಮದಾಯಕ ವ್ಯವಸ್ಥೆ, ಕುಳಿತುಕೊಳ್ಳಲೂ ಇದೆ. ಪ್ರತಿ ಆಸನಕ್ಕೂ ಮೊಬೈಲ್‌, ಲ್ಯಾಪ್‌ಟಾಪ್‌ ಚಾರ್ಜಿಂಗ್‌, ಆಡಿಯೋ ಸ್ಪೀಕರ್‌, ಪಾದರಕ್ಷೆಗಳನ್ನು ಇಡುವ ಸೌಲಭ್ಯ ಕಲ್ಪಿಸಲಾಗಿದೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು