CrimeNEWSದೇಶ-ವಿದೇಶ

15 ವರ್ಷದ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ: 106 ವರ್ಷ ಜೈಲು ಶಿಕ್ಷೆ

ವಿಜಯಪಥ ಸಮಗ್ರ ಸುದ್ದಿ

ಕೇರಳ: 15 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭ ಧರಿಸುವಂತೆ ಮಾಡಿದ ವ್ಯಕ್ತಿಗೆ ಕೇರಳ ನ್ಯಾಯಾಲಯವು 106 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವ ಮೂಲಕ ಮಹತ್ವದ ತೀರ್ಪು ನೀಡಿದೆ.

ಸಂತ್ರಸ್ತೆಯ ತಾಯಿಯ ಸ್ನೇಹಿತನಿಂದ ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. 44 ವರ್ಷದ ವ್ಯಕ್ತಿಯೇ ಆಕೆ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.

ಈ ಪ್ರಕರಣ ದೇವಿಕುಲಂ ಫಾಸ್ಟ್​ ಟ್ರ್ಯಾಕ್​​ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಧೀಶ ಸಿರಾಜುದ್ದೀನ್​​ ಪಿ.ಎ. ಸಂತ್ರಸ್ತೆಗೆ ನ್ಯಾಯ ಕೊಡಿಸಿದ್ದಾರೆ. ಆರೋಪಿಗೆ ಪೋಕ್ಸೋ ಕಾಯ್ದೆಯಡಿ 106 ವರ್ಷಗಳ ಜೈಲು ಶಿಕ್ಷೆ ಜತೆಗೆ ವಿವಿಧ ಶಿಕ್ಷೆ ವಿಧಿಸಿದ್ದಾರೆ.

ಶಿಕ್ಷೆಯನ್ನು ಏಕಕಾಲದಲ್ಲಿ ನೀಡಲಾಗಿದೆ. ಹೀಗಾಗಿ 22 ವರ್ಷಗಳ  ಗರಿಷ್ಠ  ಶಿಕ್ಷೆ ವಿಧಿಸಿದ್ದು, ಜತೆಗೆ 60 ಸಾವಿರ ರೂಪಾಯಿ ದಂಡ ವಿಧಿಸಿದೆ. ಒಂದು ವೇಳೆ ದಂಡ ಪಾವತಿಸದೇ ಇದ್ದಲ್ಲಿ 22 ತಿಂಗಳ ಕಠಿಣ ಸಜೆ ಅನುಭವಿಸಬೇಕು ಎಂದು ಆದೇಶ ನೀಡಿದೆ.

ಆಒಂದು ವೇಳೆ ರೋಪಿ ದಂಡ ಪಾವತಿಸದರೆ ಇಡುಕ್ಕಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂತ್ರಸ್ತ ಪರಿಹಾರ ಯೋಜನೆಯಿಂದ ಬಾಲಕಿಗೆ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

ತಾಯಿಯ ಸ್ನೇಹಿತನಿಂದಲೇ ಕೃತ್ಯ: ಆರೋಪಿ ತ್ರಿಶೂಲ್​ ಮೂಲದವನಾಗಿದ್ದು, 2022ರಲ್ಲಿ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದನು. ಹುಡುಗಿಯ ತಾಯಿ ಕೂಡ ಅದೇ ಹೊಟೇಲ್​ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ನೇಹ ಬೆಳೆಸಿ ಆಕೆಯ ಮನೆಗೆ ಬರುತ್ತಿದ್ದನು.

ಯಾರು ಇಲ್ಲದಾಗ ಅತ್ಯಾಚಾರ: ಒಂದು ದಿನ ಬಾಲಕಿಯ ತಾಯಿ ಮತ್ತು ಸಹೋದರರು ಮನೆಯಲ್ಲಿ ಇಲ್ಲದಿದ್ದಾಗ ಆರೋಪಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಯಾರಿಗಾದರು ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಆದರೆ ಕೊನೆಗೆ ಬಾಲಕಿಗೆ ದೈಹಿಕ ತೊಂದರೆ ಕಾಣಿಸಿದೆ. ಅಲ್ಲಿನ ತಾಲೂಕು ಆಸ್ಪತ್ರೆಗೆ ಕರೆತಂದಾಗ ನಿಜ ಸಂಗತಿ ಬಯಲಾಗಿದೆ. ಬಳಿಕ ಆಕೆಗೆ ಗರ್ಭಪಾತ ಮಾಡಲಾಗಿದೆ.

ಡಿಎನ್​​ಎ ಟೆಸ್ಟ್​ನಲ್ಲಿ ಹೊರಬಿತ್ತು ಸತ್ಯ: ಗರ್ಭಪಾತದ ಬಳಿಕ ಡಿಎನ್​ಎ ಪರೀಕ್ಷೆ ನಡೆಸಲಾಗಿದ್ದು, ತಾಯಿಯ ಸ್ನೇಹಿತನಿಂದ ಸಂತ್ರಸ್ತೆ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂಬುದು ಬೆಳಕಿಗೆ ಬಂದಿದೆ.

Leave a Reply

error: Content is protected !!
LATEST
ಬರ ಪರಿಹಾರ ಹಣ ಸಾಲಕ್ಕೆ ಜಮಾ: ಮಾದಾಪುರ ಕೆನರಾ ಬ್ಯಾಂಕ್‌ಗೆ ರೈತರ ಮುತ್ತಿಗೆ ರಾಯಚೂರು: ಕೊರವಿಹಾಳದಲ್ಲಿ ಬೀದಿ ನಾಯಿ ದಾಳಿಗೆ 4 ವರ್ಷ ಹೆಣ್ಣು ಮಗು ಬಲಿ ಮೈಸೂರು: ಕಲುಷಿತ ನೀರು ಸೇವಿಸಿ ಯುವಕ ಮೃತ, 35ಕ್ಕೂ ಹೆಚ್ಚು ಮಂದಿ ಅಸ್ವಸ್ಥ ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಹೋದ ದಂಪತಿ: ಸಂಪ್‌ಗೆ ಬಿದ್ದು ಮಗು ಸಾವು ಜೂನ್​ 4ರಿಂದ ಗೂಗಲ್ ಪೇ ಕಾರ್ಯ ನಿರ್ವಹಿಸುದಿಲ್ಲ : ಅಚ್ಚರಿ ಮೂಡಿಸಿದ ನ್ಯೂಸ್‌ KSRTC: ಬಸ್‌ ಕಂಪನಿಯೇ ಪ್ರಮಾಣಪತ್ರ ಕೊಟ್ಟಿಲ್ಲ- ಕೆಎಂಪಿಎಲ್ ಕಡಿಮೆ ಅಂತ ನೌಕರರಿಗೆ ಮೆಮೋ ಕೊಡುವ ಅಧಿಕಾರಿಗಳು !? ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಕೆಡವಿ ಮಾಲ್ ಕಟ್ಟುವ ಬಿಡಿಎ ನಿರ್ಧಾರಕ್ಕೆ ಎಎಪಿ ವಿರೋಧ ಜೈಲಲ್ಲೇ ದೇವರಾಜೇಗೌಡರ ಜೀವಕ್ಕೆ ಅಪಾಯವಿದೆ : ಸುರೇಶಗೌಡ ಆತಂಕ KSRTC ಬಸ್‌- ಕಾರು ನಡುವೆ ಭೀಕರ ಅಪಘಾತ: ಕಾರು ಚಾಲಕ ಸಾವು, ನಾಲ್ವರ ಸ್ಥಿತಿ ಗಂಭೀರ ಜಿಆರ್ ಫಾರ್ಮ್ ಹೌಸ್‌ನಲ್ಲಿ ರೇವ್​ ಪಾರ್ಟಿ: ನಟಿಯರು ಸೇರಿ 80ಕ್ಕೂ ಹೆಚ್ಚು ಬಂಧನ