NEWSನಮ್ಮರಾಜ್ಯವಿಡಿಯೋ

ಸಾರಿಗೆ ಕಾರ್ಮಿಕರು ಬದುಕಬೇಕೋ ಹೀಗೆ ವಿಷ ತೆಗೆದುಕೊಂಡು ಸಾಯಬೇಕೋ : ಅಧಿಕಾರಿಗಳ ಕೇಳುತ್ತಿರುವ ವಜಾಗೊಂಡ ನೌಕರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ಕಾರ್ಮಿಕರು ಬದುಕಬೇಕೋ ಹೀಗೆ ವಿಷ ತೆಗೆದುಕೊಂಡು ಸಾಯಬೇಕೋ ಎಂದು  ಅಧಿಕಾರಿಗಳನ್ನು ವಜಾಗೊಂಡ ನೌಕರರು ಕೇಳುತ್ತಿದ್ದಾರೆ.

ಕಳೆದ 2021 ಏಪ್ರಿಲ್‌ 7ರಿಂದ 20ರವರೆಗೆ ನಡೆದ ಸಾರಿಗೆ ನೌಕರರ ಮುಷ್ಕರದ ವೇಳೆ ಸಾರಿಗೆ ನಿಗಮಗಳ ಡಿಪೋ ವ್ಯವಸ್ಥಾಪಕರು ಅನುಸರಿಸಿದ ಕಾನೂನು ಬಾಹಿರ ನೀತಿಗೆ ಸಾಥ್‌ ನೀಡಿದ ವಿಭಾಗೀಯ ನಿಯಂತ್ರಣಾಧಿಕಾರಿಗಳ ನಡೆಯಿಂದ ವಜಾಗೊಂಡಿರುವ ನೂರಾರು ನೌಕರರು ಸೆ.1ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಚಳವಳಿ ಹಮ್ಮಿಕೊಂಡಿದ್ದರು.

ಈ ವೇಳೆ ಚಳವಳಿ ಸ್ಥಳಕ್ಕೆ ಬಂದ ಅಧಿಕರಿಗಳ ಜತೆ ಮಾತನಾಡಿದ  ವಜಾಗೊಂಡ ನೌಕರರು , ನಮ್ಮನ್ನು ಬಲಿಪಶು ಮಾಡಿರುವುದು ಯಾವ ಕಾರಣಕ್ಕೆ? ಸರ್ಕಾರಕ್ಕೆ ಸತ್ಯ ತಿಳಿಸದೆ ಮರೆ ಮಾಚಿದ್ದೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆರೆದುಕೊಂಡರು.

ಅಂದು ಡಿಎಂಗಳು ನಡೆದುಕೊಂಡ ಕೀಳು ಮನೋಭಾವದಿಂದ ಇಂದು ನಾವು ಬೀದಿಗೆ ಬಿದ್ದಿದ್ದೇವೆ. ಮಕ್ಕಳ ಶಾಲಾ ಫೀ ಕಟ್ಟಲು ಸಾಧ್ಯವಾಗುತ್ತಿಲ್ಲ. ಇನ್ನು ಡಿಎಂಗಳ ತಾಳಕ್ಕೆ ತಕ್ಕಂತೆ ಕುಣಿದ ವಿಭಾಗ ಮಟ್ಟದ ಅಧಿಕಾರಿಗಳ ನಡೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ನಿಗಮಗಳಲ್ಲಿ ಕೆಎಸ್‌ಆರ್‌ಟಸಿಯಲ್ಲಿ ಇರುವ ಕಾನೂನು ಉಳಿದ ಮೂರು ನಿಗಮಗಳಿಗೂ ಅನ್ವಯವಾಗುತ್ತದೆ. ಆದರೆ ಇಲ್ಲಿ ಡಿಪೋ ಡಿಪೋಗಳಲ್ಲೂ ಒಂದೊಂದು ಕಾನೂನು ಇದೆ. ಇದರಿಂದ ನಾವು ಬದಕ ಬೇಕೋ ಇಲ್ಲ ಸಾಯಬೇಕೋ ನೀವೆ ಹೇಳಿ ಎಂದು ಪ್ರಶ್ನಿಸಿದರು.

ಚಳವಳಿಯಲ್ಲಿ ಕಾರ್ಮಿಕರ ಪರವಾಗಿ ಕೋಡಿಹಳ್ಳಿ ಚಂದ್ರಶೇಖರ್‌ ಸೇರಿ ರೈತ ಸಂಘಸ ಹಲವಾರು ಮುಖಂಡರು, ವಜಾಗೊಂಡ ನೌಕರರು ಭಾಗವಹಿಸಿದ್ದರು.

Leave a Reply

error: Content is protected !!
LATEST
ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ