ಶಿವಮೊಗ್ಗ: ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಸಾಹಿತ್ಯ ಹುಣ್ಣಿಮೆ ಇನ್ನೂರ ಇಪ್ಪತೈದನೆಯ ಕಾರ್ಯಕ್ರಮ ಒಟ್ಟಾಗಿ ಏರ್ಪಡಿಸಲು ತೀರ್ಮಾನ ಮಾಡಲಾಗಿದೆ. ಮೇ ತಿಂಗಳ ಕೊನೆಯ ವಾರದಲ್ಲಿ ಸಮ್ಮೇಳನ ನಡೆಯಲಿದೆ ಎಂದು ಡಿ.ಮಂಜುನಾಥ ತಿಳಿಸಿದ್ದಾರೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರೊಂದಿಗೆ ನಡೆದ ಸಮಾಲೋಚನೆ ನಂತರ ಪೂಜ್ಯರ ಮಾರ್ಗದರ್ಶನ ದಲ್ಲಿ 19 ನೇ ವರ್ಷದ ರಾಜ್ಯ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು 225ನೆಯ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ನಡೆಸಲು ಯೋಜನೆ ಮಾಡಲಾಯಿತು ಎಂದು ವಿವರಿಸಿದರು.
ತಾಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮ್ಮೇಳನ ನಡೆದಿದೆ. ಅಲ್ಲಿ ಆಯ್ಕೆ ಯಾದವರು ಸೇರಿದಂತೆ ನಾಡಿನಾದ್ಯಂತ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಪಿಯು ವರೆಗೆ ಓದುತ್ತಿರುವ ಮಕ್ಕಳು ಭಾಗವಹಿಸಲು ಅವಕಾಶವಿದೆ.
ಮಕ್ಕಳು ತಾವು ಸ್ವಂತ ಬರೆದ ಕವನ, ಕಥೆ, ಪ್ರಬಂಧಗಳ ಜತೆಗೆ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಶಾಲೆ, ತಂದೆ, ತಾಯಿ ಒಪ್ಪಿಗೆ ಪಡೆದು ಕಳುಹಿಸಲು ಕೋರುತ್ತೇವೆ. ಸಮ್ಮೇಳನದಲ್ಲಿ ಭಾಗವಹಿಸುವ ಮಕ್ಕಳು, ಪೋಷಕರಿಗೆ ಸಾದಾರಣ ವಸತಿ, ಊಟ, ತಿಂಡಿ ವ್ಯವಸ್ಥೆ ಮಾಡಲಾಗುವುದು. ನೋಂದಾಯಿಸಿದವರಿಗೆ ಮಾತ್ರ ಅವಕಾಶ.
ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತಿಯಿರುವ ಮಕ್ಕಳು ಮೇ 10 ರೊಳಗೆ ಡಿ. ಮಂಜುನಾಥ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಆರ್‌ಟಿಒ ಕಚೇರಿ ರಸ್ತೆ, ಶಿವಮೊಗ್ಗ 577204 ದೂರವಾಣಿ : 9449552795 ಇವರಿಗೆ ತಲುಪುವಂತೆ ಕಳುಹಿಸಬೇಕು.