Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KKRTC: ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಗಳ ಆಸ್ಪತ್ರೆಗೆ ಕರೆದೊಯ್ಯಲು ರಜೆ ಕೇಳಿದಕ್ಕೆ ಚಾಲಕನ ಅಮಾನತು !

ಚಾಲಕ- ಟಿಐ ಮಧ್ಯೆ ನಡೆದ ಮಾತಿನ ಚಮಕಿಯ ವಿಡಿಯೋ ವೈರಲ್

ವಿಜಯಪಥ ಸಮಗ್ರ ಸುದ್ದಿ

ಇಂಡಿ: ಹೆರಿಗೆ ನೋವು ಬಂದ ಮಗಳನ್ನು ಆಸ್ಪತ್ರೆಗೆ ಸೇರಿಸಲು ರಜೆ ಕೇಳಿದ್ದಕ್ಕೆ ಚಾಲಕ ಕಂ ನಿರ್ವಾಹಕ ಮತ್ತು ಟಿಐ ಮಧ್ಯೆ ನಡೆದ ಮಾತಿನ ಚಮಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಂಬಂಧ ಚಾಲಕ ಕಂ ನಿರ್ವಾಹಕನನ್ನು ಅಮಾನತು ಮಾಡಿದ್ದು, ಟಿಐ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಅಧಿಕಾರಿಗಳು ಮೌನ ವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಇಂಡಿ ಘಟಕದ ಚಾಲಕ ಕಂ ನಿರ್ವಾಹಕ ಸುನೀಲ ಭತಗುಣಕಿ ಅಮಾನತಾದ ನೌಕರ. ಆದರೆ, ಟಿಐ ಯಲಗೂರಪ್ಪ ತಳ್ಳಿವಾಡ ಅವರು ಯಾವೊಬ್ಬ ಚಾಲನಾ ಸಿಬ್ಬಂದಿಯನ್ನು ಗೌರವದಿಂದ ನಡೆಸಿಕೊಳ್ಳುವುದಿಲ್ಲ ಎಂಬ ಆರೋಪವಿದೆ. ಹೀಗಿದ್ದರೂ ತಳ್ಳಿವಾಡ ಅವರ ವಿರುದ್ಧ ಏಕೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ ಎಂಬುವುದು ಈಗ ಯಕ್ಷ ಪ್ರಶ್ನೆಯಾಗಿದೆ.

ಇನ್ನು ಮೇಲ್ನೋಟಕ್ಕೆ ಇದು ರಜೆ ವಿಷಯವಾಗಿಯೇ ಟಿಐ ಹಾಗೂ ಚಾಲಕ ಕಂ ನಿರ್ವಾಹಕನ ಮಧ್ಯೆ ಮಾತನ ಚಮಕಿ ನಡೆದಿದೆ ಎನ್ನಬಹುದು. ಆದರೆ, ಘಟಕದಲ್ಲಿ ಚಾಲನಾ ಸಿಬ್ಬಂದಿ ವಿರುದ್ಧ ಟಿಐ ದರ್ಪ ಮೆರೆಯುತ್ತಿರುವುದು ಮೇಲಿನ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಹೀಗಾಗಿ ಚಾಲಕನನ್ನ ಅಷ್ಟೇ ಅಮಾನತು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಡೆದಿರುವುದು ಏನು?: ನಮ್ಮ ಮನೆಯಲ್ಲಿ ನನ್ನ ಮಗಳ ಸೀಮಂತ ಕಾರ್ಯಕ್ರಮ ಇದ್ದ ಕಾರಣ ಈ ವಿಚಾರವಾಗಿ ಘಟಕದಲ್ಲಿರುವ ATI ಟಿ.ಕೆ. ರಾಥೋಡ ಅವರಿಗೆ ಮೌಖಿಕವಾಗಿ ರಜೆ ಕೇಳಿದ್ದು, ಅದರಂತೆ ಸೆ.14,15,16ರಂದು ರಜೆ ತೆಗೆದುಕೊಂಡಿದ್ದೆ. ಆದರೆ, ಸೆ.16ರ ರಾತ್ರಿ ಮಗಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ, ಹೀಗಾಗಿ ಅಂದು ವಿಜಯಪುರ ಆಸ್ಪತ್ರೆಗೆ ದಾಖಲಿಸಿ ನಂತರ ಸೆ.17ರ ಸಂಜೆ ಸೀಜರಿಯನ್‌ ಮಾಡಿದ್ದಾರೆ.

ಬಳಿಕ ಅಂದರೆ ಸೆ.21ರ ವರೆಗೂ ಆಸ್ಪತ್ರೆಯಲ್ಲೇ ಇರಬೇಕಾಯಿತು. ಸೆ.21ರಂದು ಸಾಯಂಕಾಲ ಮನೆಗೆ ಕರೆದುಕೊಂಡು ಬರಲಾಗಿದೆ. ಸದ್ಯ ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಈ ನಡುವೆ ನನ್ನ ಸಹೋದರ ಕೂಡ ಇಂಡಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ನಮ್ಮ ಘಟಕದ ಅಧಿಕಾರಿ ಯಲಗೂರಪ್ಪ ಅವರು ದೂರವಾಣಿ ಮುಖಾಂತರ ಕರೆ ಮಾಡಿ 3 ದಿನ ರಜೆ ಇಟ್ಟಿರುತ್ತೇನೆ, ಅವನು ಕರ್ತವ್ಯಕ್ಕೆ ಬರದ ಪಕ್ಷದಲ್ಲಿ ಗೈರು ಹಾಜರಿ ಹಾಕುತ್ತೇನೆಂದು ಹೇಳಿದ್ದಾರೆ.

ಈ ವಿಷಯ ನನ್ನ ಸಹೋದರ ನನಗೆ ತಿಳಿಸಿದಾಗ ನಾನು ಘಟಕಕ್ಕೆ ಹೋಗಿ ಮನೆಯಲ್ಲಿ ನಡೆದ ಸಮಸ್ಯೆಗಳನ್ನು ಸವಿಸ್ತಾರವಾಗಿ ತಿಳಿಸಿದರೂ ಕೂಡ ಏಕವಚನದಲ್ಲಿ ನಿನ್ನ ಎಲ್ಲ ರಜೆಗಳನ್ನು ಗೈರುಹಾಜರು ಮಾಡುತ್ತೇನೆ ಎಂದರಲ್ಲದೆ ಇನ್ನೂ ಕೆಟ್ಟ ಶಬ್ದಗಳನ್ನು ಕೂಡಾ ಬಳಸಿ ನನ್ನನ್ನು ನಿಂದಿಸಿದ್ದಾರೆ. ಈ ವೇಳೆ ನಡೆದ ಘಟನೆಯ ವಿಡಿಯೋ ನನ್ನ ಬಳಿಯು ಇದೆ ಎಂದು ತಿಳಿಸಿದ್ದಾರೆ.

ಚಾಲಕ ತಮ್ಮ ಮಗಳ ಕಾರ್ಯಕ್ರಮಕ್ಕೆಂದು ರಜೆ ತೆಗೆದುಕೊಂಡಿದ್ದರು. ಸೀಮಂತ ಕಾರ್ಯಕ್ರಮದ ನಂತರ ಹೆರಿಗೆ ನೋವು ಕಾಣಿಸಿಕೊ೦ಡಿದ್ದರಿ೦ದ ವಿಜಯಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಹೆಚ್ಚುವರಿ ರಜೆಗಾಗಿ ಸಾರಿಗೆ ಘಟಕಕ್ಕೆ ಮಾಹಿತಿ ನೀಡಿದ್ದರೂ ಅಧಿಕಾರಿಗಳು ಹೆಚ್ಚುವರಿ ರಜೆ ನೀಡದೆ ಗೈರುಹಾಜರಿ ನಮೂದಿಸಿದ್ದಾರೆ. ಅದನ್ನು ಕೇಳಲು ಹೋದ ವೇಳೆ ಟಿಐ ಈರೀತಿ ನಡೆದುಕೊಂಡಿದ್ದಾರೆ ಆದರೆ, ಅಮಾನತಿನ ಶಿಕ್ಷೆ ಕೊಟ್ಟಿರುವುದು ಮಾತ್ರ ಚಾಲಕನಿಗೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳುವಂತಾಗಿದೆ.

ಇನ್ನು ಚಾಲಕ ಸುನೀಲ ಮದ್ಯ ಸೇವಿಸಿ ಘಟಕಕ್ಕೆ ಒಂದು ಟಿಐ ಯಲಗೂರಪ್ಪ ಅವರ ಜತೆ ವಾಗ್ವಾದ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಮದ್ಯ ಸೇವಿಸಿರುವ ಬಗ್ಗೆ ಯಾವುದೆ ತಪಾಸಣೆ ನಡೆಸಿಲ್ಲ. ಬರಿ ಆರೋಪ ಮಾತ್ರ ಮಾಡಲಾಗಿದೆ. ಇನ್ನು ಚಾಲಕನನ್ನು ಈ ಬಗ್ಗೆ ಕೇಳಿದರೆ ನಾನು ಅಂದು ಮದ್ಯ ಸೇವನೆ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.

ಯಲಗೂರಪ್ಪ ತಳ್ಳಿವಾಡ ವಿರುದ್ಧ ಆರೋಪ: ಇಂಡಿ ಘಟಕದ ಟಿಐ ಯಲಗೂರಪ್ಪ ತಳ್ಳಿವಾಡ ಚಾಲಕ ಹಾಗೂ ನಿರ್ವಾಹಕರಿಗೆ ಬೆಯ್ಯುವುದು, ನೌಕರರನ್ನು ಹಿರಿಯರು, ಕಿರಿಯರು ಎನ್ನದೇ ಏಕವಚನದಲ್ಲಿ ಕರೆಯುವುದು ಮಾಡುತ್ತಾರೆ. ಇವರು ಕರ್ತವ್ಯದಲ್ಲಿದ್ದಾರೆ ಎಂದರೆ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಬರಲು ಹಿಂಜರಿಯುತ್ತಾರೆ. ಇವರ ವರ್ತನೆಯಿಂದ ಚಾಲಕರು ಹಾಗೂ ನಿರ್ವಾಹಕರು ಬೇಸತ್ತು ಹೋಗಿದ್ದಾರೆ. ಕೂಡಲೇ ಇವರನ್ನು ಇಂಡಿ ಘಟಕದಿಂದ ವರ್ಗಾವಣೆ ಮಾಡಬೇಕು, ಈ ಘಟನೆ ಸಂಬಂಧ ಅಮಾನತು ಮಾಡಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗೆ ಸರಿ ಸಮಾನ ವೇತನ ಸಿಗಬೇಕು: NWKRTC ಸಂಸ್ಥೆ ಅಧ್ಯಕ್ಷ ಭರಮಗೌಡ ಕಾಗೆ NWKRTC- ನಿರ್ವಾಹಕ ಚೀರ್ಚಿನಕಲ್ ಆತ್ಮಹತ್ಯೆ ಯತ್ನ- ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಎಂಡಿಗೆ ಸಾರಿಗೆ ನೌಕರರ ಸೇನ... ಸಾರಿಗೆ ನೌಕರರಿಗೆ ಕೊಟ್ಟ ಚುನಾವಣೆ ಪ್ರಣಾಳಿಕೆಯ ಭರವಸೆ ಈಡೇರಿಸುವತ್ತಾ ಕಾಂಗ್ರೆಸ್‌ ಸರ್ಕಾರ...!? KSRTC 4 ನಿಗಮಗಳ ಬಸ್‌ ಚೀಟಿ ದರ ಪರಿಷ್ಕರಣೆಯಿಂದ ತಲೆದೋರಿದ ಚಿಲ್ಲರೆ ಸಮಸ್ಯೆ-ನಿರ್ವಾಹಕರು ಪ್ರಯಾಣಿಕರ ನಡುವೆ ಫೈಟ್‌ KSRTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ NWKRTC: ನಿರ್ವಾಹಕ ಆತ್ಮಹತ್ಯೆಗೆ ಯತ್ನ- ಅಮಾನತು ಮಾಡುವ ಉದ್ದೇಶದಿಂದಲೇ ಮೆಮೋ ಕೊಟ್ಟ ಆರೋಪ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನೈರ್ಮಲ್ಯದ ಕೊರತೆ: ಕಸ ಮುಕ್ತ ಅಭಿಯಾನ ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು: ಅಂದಾನೆಪ್ಪ ವಿಭೂತಿ ಸರ್ವೇ ನಂ-97 ಪುಸ್ತಕ ಮನುಷ್ಯನ ಬದುಕಿನ ಸಂಕಟಗಳಿಗೆ ಕನ್ನಡಿ ಇದ್ದಂತೆ: ರಘುನಾಥ ನ್ಯೂಡೆಲ್ಲಿ: ದಲೈವಾಲ ಪ್ರಾಣಕ್ಕೆ ಕುತ್ತು ಬಂದರೆ ದೇಶದ ರೈತರು ಕೇಂದ್ರ ಸರ್ಕಾರದ ಮರಣ ಶಾಸನ ಬರೆಯಬೇಕಾಗುತ್ತದೆ ಎಚ್ಚರ