ತಿ.ನರಸೀಪುರ: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಕೂಡ ಕಾವೇರಿ ಪ್ರಾಧಿಕಾರದ ಆದೇಶವನ್ನೇ ಎತ್ತಿಹಿಡಿದ ಪರಿಣಾಮ ಈ ಕಾವೇರಿ ಕಿಚ್ಚು ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲೂ ಹೆಚ್ಚಾಗಿದೆ.
ನಮಗೆ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿಗೆ ಹೇಗೆ ನೀರು ಹರಿಸುತ್ತೀರಿ ಎಂದು ಸರ್ಕಾರದ ವಿರುದ್ಧವು ಆಕ್ರೋಶ ವ್ಯಕ್ತವಾಗುತ್ತಿದ್ದು, ತಮಿಳುನಾಡಿಗೆ ನೀರು ಬಿಡಬೇಡಿ ಎಂದು ಆಗ್ರಹಿಸಿ ನಾಳೆ ಬೆಂಗಳೂರು ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ.
ಈ ಹಿನ್ನೆಲೆಯಲ್ಲಿ ಕಾವೇರಿ ಕಬಿನಿ ಹಿತರಕ್ಷಣಾ ಸಮಿತಿ ಕೂಡಾ ನಾಳೆ ಸೆ.26ರಂದು ತಿ.ನರಸೀಪುರ ಬಂದ್‌ಗೆ ನಿರ್ಧರಿಸಿದೆ. ಬಂದ್ ಹಿನ್ನೆಲೆ ನರಸೀಪುರ ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಪೂರ್ವಭಾವಿ ಸಭೆ ನಡೆಸಿದ್ದದು, ಆ ಸಭೆಯಲ್ಲಿ ರಕ್ತ ಕೊಟ್ಟೇವು ನೀರು ಬಿಡೆವು ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ನಾಳೆ ನಡೆಯಲಿರುವ ಬಂದ್‌ನಲ್ಲಿ ಕಾವೇರಿ ಕಬಿನಿ ಹಿತರಕ್ಷಣ ಸಮಿತಿ, ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘ, ಕನ್ನಡಪರ ಸಂಘಟನೆ ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಲಿವೆ.