Vijayapatha – ವಿಜಯಪಥ
Friday, November 1, 2024
CrimeNEWSನಮ್ಮಜಿಲ್ಲೆ

ಶಿಕ್ಷಕನಾಗುವ ಕನಸು ಕಂಡ ಯುವಕ: ಆಡಳಿತ ವ್ಯವಸ್ಥೆ ವಿರುದ್ಧ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ರಾಯಚೂರು: ಶಿಕ್ಷಕನಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು ಎಂಬ ಕನಸು ಹೊತ್ತ ಯುವಕನೊಬ್ಬ ಕೈಯಿಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಬೇಸರಗೊಂಡು ಆಡಳಿತ ವ್ಯವಸ್ಥೆ ವಿರುದ್ಧ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಚಿಕ್ಕ ಬೂದೂರಿನ ಯುವಕ ಚನ್ನಬಸವ (25) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದವರು. ಜಿಲ್ಲೆಯ ದೇವದುರ್ಗ ಪಟ್ಟಣದ ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಕೊನೆಯುಸಿರೆಳೆದಿದ್ದಾನೆ.

ಬಹುಹಿಂದಿನಿಂದಲೇ ಶಿಕ್ಷಕನಾಗುವ ಕನಸು ಹೊತ್ತಿದ್ದ ಚನ್ನಬಸವ ಅದಕ್ಕಾಗಿ ತೀವ್ರ ಪ್ರಯತ್ನ ನಡೆಸುತ್ತಿದ್ದ. ಕಳೆದ ಬಾರಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂಥ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಈ ಬಾರಿ ಆತನೇ ಫೇಲ್‌ ಆಗಿದ್ದ. ಹೀಗಾಗಿ ಅವನಿಗೆ ಭಾರಿ ಬೇಸರವಾಗಿತ್ತು ಎನ್ನಲಾಗಿದೆ.

2022ರ ಪಟ್ಟಿಯಲ್ಲಿದ್ದ ಹೆಸರು ಕೊನೆಗೆ ಮಿಸ್‌ ಆಗಿತ್ತು: ನಿಜವೆಂದರೆ, 6-8ನೇ ತರಗತಿ ಶಿಕ್ಷಕರ ಹುದ್ದೆಗೆ ಚನ್ನಬಸವ ಆಯ್ಕೆಯಾಗಿದ್ದ. 2022ರ ನೇಮಕಾತಿ ಲಿಸ್ಟ್‌ನಲ್ಲಿ ಅವನ ಹೆಸರು ಇತ್ತು. ಆದರೆ, ಕೊನೆ ಕ್ಷಣದಲ್ಲಿ ಲಿಸ್ಟ್ ನಿಂದ‌ ಹೆಸರು ಕೈ ತಪ್ಪಿತ್ತು.

ಬಳಿಕ ಮತ್ತೊಂದು ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದ ಚನ್ನಬಸವ ಈ ಬಾರಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಫೇಲ್ ಆಗಿದ್ದ. ಬಳಿಕ ಪ್ರತ್ಯೇಕ ರೂಮ್ ಮಾಡಿ ಪರೀಕ್ಷೆಗೆ ತಯಾರಿ‌ ನಡೆಸಿದ್ದ ಚನ್ನಬಸವ. ದೇವದುರ್ಗ ಪಟ್ಟಣದಲ್ಲೇ ರೂಮ್‌ ಮಾಡಿಕೊಂಡು ಸಿದ್ಧತೆ ನಡೆಸುತ್ತಿದ್ದ ಆತನಿಗೆ ಏನಾಯಿತೋ ಗೊತ್ತಿಲ್ಲ. ಒಮ್ಮಿಂದೊಮ್ಮೆಗೇ ತಾನು ಪ್ರೀತಿಸುತ್ತಿದ್ದ ಶಾಲೆಯ ಆವರಣದ ಮರದ ಬಳಿ ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

ಇದಕ್ಕೂ ಮುನ್ನ ಆಡಳಿತ ವ್ಯವಸ್ಥೆ ವಿರುದ್ಧ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದು, ಯಾರೋ ಮಾಡಿದ ತಪ್ಪಿಗೆ ವ್ಯವಸ್ಥೆ ನನಗೆ ಶಿಕ್ಷೆ ನೀಡಿದೆ. ಆಡಳಿತ ವ್ಯವಸ್ಥೆಗೆ ನನ್ನ ಧಿಕ್ಕಾರವಿರಲಿ ಎಂದು ಡೆತ್ ನೋಟ್‌ನಲ್ಲಿ ತನ್ನ ನೋವನ್ನು ಹೊರಹಾಕಿದ್ದಾನೆ.

ಇನ್ನು ಯಾರೂ ಕೂಡಾ ಯಾರ ವಿರುದ್ಧವೂ ದೂರು ನೀಡಬಾರದು ಎಂದೂ ಮನವಿ ಮಾಡಿದ್ದಾನೆ. ನನ್ನ ಕುಟುಂಬ ಅನಕ್ಷರಸ್ಥ. ಹೀಗಾಗಿ ಅವರನ್ನು ಬಳಸಿಕೊಂಡು ಯಾರಾದರೂ ದೂರು ನೀಡಲೂಬಹುದು. ಅದನ್ನೂ ಪರಿಗಣಿಸಬಾರದು ಎಂದು ಕೂಡಾ ಡೆತ್‌ ನೋಟ್‌ನಲ್ಲಿ ಮನವಿ ಮಾಡಿದ್ದಾನೆ.

ಕಳೆದ ಬಾರಿ ಆಯ್ಕೆ ಪಟ್ಟಿಯಲ್ಲಿ ಬಂದ ಹೆಸರನ್ನು ಬದಲಿಸಲಾಗಿದೆ ಎನ್ನುವ ನೋವು ಆತನನ್ನು ಗಾಢವಾಗಿ ಕಾಡುತ್ತಿತ್ತೇನೋ. ಅಲ್ಲದೆ ಈ ವ್ಯವಸ್ಥೆ ತನಗೆ ಬಗೆದ ದ್ರೋಹವೆಂದು ನೋವು ಅನುಭವಿಸುತ್ತಿದ್ದನೇನೋ ಗೊತ್ತಿಲ್ಲ. ಆದರೆ, ಮಕ್ಕಳ ಭವಿಷ್ಯ ರೂಪಿಸಬೇಕಾದ ಯುವಕ ತನ್ನ ಭವಿಷ್ಯವನ್ನೇ ಕೊನೆಗಾಣಿಸಿಕೊಂಡಿರುವುದು ದರಂತವೇ ಸರಿ. ಘಟನೆ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ