ಪ್ರಯಾಣಿಕರಿಗೆ ವಿತರಿಸದ ಟಿಕೆಟ್ ಮೌಲ್ಯ ಶೂನ್ಯ: ಆದರೂ ನಿರ್ವಾಹಕರು ದಂಡಕಟ್ಟಬೇಕೆಂಬ ಅಸಂಬದ್ಧ ಸುತ್ತೋಲೆ!!

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಯ ನಾಲ್ಕೂ ನಿಗಮಗಳ ನಿರ್ವಾಹಕರ ಪಾಲಿಗೆ ಮುಳ್ಳಾಗುವ ಒಂದು ನಿರ್ಧಾರವನ್ನು 2024ರ ಮೇ 3ರಂದು ಅಂದಿನ ಮುಖ್ಯ ಸಂಚಾರಿ ವ್ಯವಸ್ಥಾಪಕರು ತೆಗೆದುಕೊಂಡಿದ್ದರು. ಈಗ ಆ ರೀತಿಯ ಟಿಕೆಟ್ ಇಲ್ಲ ಬಿಡಿ. ಆದರೆ ಅಧಿಕಾರಿಗಳು ತೆಗೆದುಕೊಳ್ಳುವ ಸಣ್ಣತನದ ನಿರ್ಧಾರದಿಂದ ನೌಕರರು ಎಷ್ಟೆಲ್ಲ ಸಮಸ್ಯೆ ಅನುಭವಸಬೇಕಾಗುತ್ತದೆ ಅನ್ನೋದು ಗೊತ್ತಾಗಬೇಕಲ್ಲ, ಅದಕ್ಕಾಗಿ.
ಅಂದಿನ ಮುಖ್ಯ ಸಂಚಾರಿ ವ್ಯವಸ್ಥಾಪಕರು ಶಾಂತಿ ನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ಕುಳಿತು ಒಂದು ಸಹಿ ಮಾಡಿ ಆದೇಶ ಮಾಡಿಬಿಟ್ಟರು. ಆದರೆ ಅವರಿಗೇನುಗೊತ್ತು ಕಳೆದುಕೊಂಡ ಟಿಕೆಟ್‌ಗೆ ಮೌಲ್ಯವೇ ಇಲ್ಲದಾಗ ನಿರ್ವಾಹಕರಿಂದ ಪ್ರತಿ ಶೂನ್ಯ ಟಿಕೆಟ್ 10 ರೂಪಾಯಿ ವಸೂಲಿ ಮಾಡಿ ಎಂಬ ಆದೇಶದಿಂದ ನೌಕರರಿಗೆ ಲಾಸ್ ಆಗುತ್ತದೆ ಎಂದು.
ಈ ರೀತಿ ಆದೇಶ ಹೊರಡಿಸುವ ಮುನ್ನ ಮುಖ್ಯ ಸಂಚಾರಿ ವ್ಯವಸ್ಥಾಪಕರು ಸ್ವಲ್ಪ ತಾಳ್ಮೆಯಿಂದ ಯೋಚಿಸಬೇಕಾಗುತ್ತದೆ. ಟಿಕೆಟ್‌ಅನ್ನು ನಿರ್ವಾಹಕರು ಕಳೆದುಕೊಂಡಿದ್ದಾರೆ ಎಂದ ಮೇಲೆ ಆ ಟಿಕೆಟ್‌ನಿಂದ ಸಂಸ್ಥೆಗೆ ಯಾವುದೇ ನಷ್ಟವಾಗುವುದಿಲ್ಲ. ಅಂದ ಮೇಲೆ ನಿರ್ವಾಹಕರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬೇಕು ಅವರಿಂದ ಟಿಕೆಟ್ ಹೇಗೆ ಕಳೆದುಕೊಂಡಿರಿ ಎಂಬ ಬಗ್ಗೆ ವಿವರಣೆ ಬರದುಕೊಡಿ ಎಂದು ಹೇಳಿ ಬರೆಸಿಕೊಂಡು ಆ ಬಳಿಕ ನಿಜವಾಗಲು ಟಿಕೆಟ್ ಕೆಳೆದುಹೋಗಿವೆ ಎಂದು ಖಚಿತವಾದ ಮೇಲೆ ಆ ಪ್ರಕರಣವನ್ನು ಕೈ ಬಿಟ್ಟರಾಯಿತಲ್ಲವೇ?
ಅದನ್ನು ಬಿಟ್ಟು ನಿರ್ವಾಹಕರೆ ಏನೋ ಆ ಟಿಕೆಟ್‌ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ರೀತಿಯಲ್ಲಿ ಅವರಿಂದ ಪ್ರತಿ ಟಿಕೆಟ್‌ಗೆ 10 ರೂಪಾಯಿ ವಸೂಲಿ ಮಾಡಿ ಎಂಬ ಸುತ್ತೋಲೆ ಹೊರಡಿಸಿರುವುದು ಒಂದು ರೀತಿ ಹಾಸ್ಯಸ್ಪದವಾಗಿ ಕಾಣುತ್ತಿದೆ. ಅಲ್ಲದೆ ಆ ಅಧಿಕಾರಿಯ ಮನಸ್ಥಿತಿ ಏನಾಗಿದೆ ಎಂಬುದರ ಬಗ್ಗೆಯೂ ಯೋಚಿಸಬೇಕಿದೆ ಎಂಬ ಅನುಮಾನ ಮೂಡುವಂತಿದೆ.
ಆ ಮುಖ್ಯ ಸಂಚಾರಿ ವ್ಯವಸ್ಥಾಪಕರು ಹೊರಟಿಸಿರುವ ಸುತ್ತೋಲೆ? ಸುತ್ತೋಲೆ ಸಂಖ್ಯೆ: 1796/2024 (ಸಂಚಾರ ಇಲಾಖೆಯಿಂದ ಹೊರಡಿಸಲಾಗಿದೆ) ವಿಷಯ: “ಶಕ್ತಿ ಯೋಜನೆ’ಯಲ್ಲಿ ನಿರ್ವಾಹಕರು ಮಹಿಳಾ ಪ್ರಯಾಣಿಕರುಗಳಿಗೆ ವಿತರಿಸಲು ನೀಡಿರುವ ಪಿಂಕ್ ಟಿಕೆಟ್‌ಗಳನ್ನು ಕಳೆದುಕೊಂಡಾಗ ಕೈಗೊಳ್ಳಬೇಕಾದ ಕ್ರಮದ ಕುರಿತು.
ಉಲ್ಲೇಖ:ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ: 818/2023, ದಿನಾಂಕ: 07-06.2023.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ 818/2023 ರನ್ವಯ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಸಂಬಂಧ ಇ.ಟಿ.ಎಂ. ಕಾರ್ಯ ನಿರ್ವಹಿಸದ ಸ್ಪಂದರ್ಭದಲ್ಲಿ ಪಿಂಕ್ ಟಿಕೆಟ್ ವಿತರಿಸಲು (ಲಗ್ಗೇಜ್ ಟಿಕೆಟ್ ರೀತಿಯಲ್ಲಿ) ತಿಳಿಸಲಾಗಿರುತ್ತದೆ. ಅದೇ ರೀತಿ ಎಲ್ಲ
ನಿರ್ವಾಹಕರಿಗೂ ಪಿಂಕ್ ಟಿಕೆಟ್‌ನ್ನು ವಿತರಿಸಲಾಗಿರುತ್ತದೆ. ಈ ರೀತಿ ನಿರ್ವಾಹಕರಿಗೆ ವಿತರಿಸಿರುವ ಪಿಂಕ್ ಟಿಕೆಟ್ ಕಳೆದುಹೋದ ಪಕ್ಷದಲ್ಲಿ ನಿರ್ವಾಹಕರ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಯಾವುದೇ ಮಾರ್ಗದರ್ಶನ ನೀಡಿರುವುದಿಲ್ಲವೆಂದು ತಿಳಿಸಿ, ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾರ್ಗದರ್ಶನವನ್ನು ಕೋರಿ ವಿಭಾಗಗಳಿಂದ ಪತ್ರಗಳನ್ನು ಸ್ವೀಕರಿಸಲಾಗುತ್ತಿರುತ್ತದೆ.
ಈ ಸಂಬಂಧ ನಿರ್ವಾಹಕರಿಗೆ ಪಿಂಕ್ ಟಿಕೆಟ್‌ನ್ನು ಲಗ್ಗೇಜು ಟಿಕೆಟ್ ಮಾದರಿಯಲ್ಲಿ ವಿತರಿಸುತ್ತಿದ್ದು, ಸದರಿ ಟಿಕೆಟ್‌ಗಳಿಗೆ ಮುಖ ಬೆಲೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸದರಿ ಕಳೆದುಹೋದ ಪ್ರತಿ ಟಿಕೆಟ್‌ಗೆ ರೂ. 10/- (ರೂ.ಹತ್ತು)ರಂತೆ ನಿಗದಿ ಮಾಡಿ, ಸದರಿ ಮೊತ್ತವನ್ನು ಸಂಬಂಧಿಸಿದ ನಿರ್ವಾಹಕರಿಂದ ಭರಿಸಿಕೊಳ್ಳುವಂತೆ ಹಾಗೂ ಸದರಿ ಟಿಕೆಟ್ ಕಳೆದ ಕಾರಣ ಅವರ ನಿರ್ಲಕ್ಷತೆಗೆ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.
ಇನ್ನು ಈ ಸುತ್ತೋಲೆಯನ್ನು ಸ್ವೀಕರಿಸಿದ ಬಗ್ಗೆ ಸ್ವೀಕೃತಿಯನ್ನು ಹಾಗೂ ಕೈಗೊಂಡ ಕ್ರಮದ ಬಗ್ಗೆ ಅನುಸರಣಾ – ವರದಿಯನ್ನು ನೀಡುವುದು ಎಂದು ಮುಖ್ಯ ಸಂಚಾರಿ ವ್ಯವಸ್ಥಾಪಕರು ಸುತ್ತೋಲೆ ಹೊರಡಿಸಿದ್ದಾರೆ. ಇದರಿಂದ ನಿರ್ವಾಹಕರಿಗೆ ಎಷ್ಟು ಕಿರಿಕಿರಿಯಾಗುತ್ತೆ ಎಂಬ ತಿಳಿವಳಿಕೆಯೂ ಇಲ್ಲದೆ ಈ ರೀತಿ ಸುತ್ತೋಲೆ ಹೊರಡಿಸುವುದು ಎಷ್ಟೆ ಮಟ್ಟಿಗೆ ಸರಿ ಇರುತ್ತದೆ. ಈ ಬಗ್ಗೆ ಏಕೆ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸುವುದಿಲ್ಲ ಎಂಬುವುದೇ ಯಕ್ಷಪ್ರಶ್ನೆಯಾಗಿದೆ.
Related

You Might Also Like
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಅಂಗವಾಗಿ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹ ಆರಂಭ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಬರಬೇಕಾಗದ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ 2024ರ ಜನವರಿ 1ರಿಂದ...
EPS Pensioners Protest: ಅಧಿವೇಶನ ಮುಗಿಯುವುದರೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ: ನಂಜುಂಡೇಗೌಡ ಎಚ್ಚರಿಕೆ
ಬೆಂಗಳೂರು: ಇದೇ ಜುಲೈ 21ರಿಂದ ಪಾರ್ಲಿಮೆಂಟ್ ಅಧಿವೇಶನ ಪ್ರಾರಂಭವಾಗಿದ್ದು, ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೊದಲ್ಲಿ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಎಂಟಿಸಿ...
ಸಮಾನ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಧರಣಿ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರ ಮುಖಂಡರ ಬಂಧನ
ಸಾರಿಗೆ ನೌಕರರ ಹೋರಾಟ ಹತ್ತಿಕ್ಕಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸುವ ಬದಲಿಗೆ ದೌರ್ಜನ್ಯ ಎಸಗಿದ ಕಾಂಗ್ರೆಸ್ ಸರ್ಕಾರ ಬೆಂಗಳೂರು: ಸಮಾನ ವೇತನ,...
ರೈತರು ಮರ ಕಟಾವು ಮಾಡುವ ನಿಯಮ ಸರಳಗೊಳಿಸಿ: ಅತ್ತಹಳ್ಳಿ ದೇವರಾಜ್ ಒತ್ತಾಯ
ಮೈಸೂರು: ರೈತರು ತಮ್ಮ ಜಮೀನಿನಲ್ಲಿ ಇರುವ ಮರ ಕಟಾವು ಮಾಡಿ ಸಾಗಾಣಿಕೆ ಮಾಡಿಕೊಳ್ಳುವ ನಿಯಮ ಸರಳೀಕರಣ ಗೊಳಿಸಿಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕ್ರಮ ಕೈಗೊಳ್ಳಬೇಕು...
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಗ್ರಾಮದಲ್ಲೇ ಬೀಡುಬಿಟ್ಟ ವೈದ್ಯರ ತಂಡ
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬ್ಯಾಲಿಹಾಳದಲ್ಲಿ ನಡೆದಿದೆ. ಗ್ರಾಮಕ್ಕೆ ಗ್ರಾಮ ಪಚಾಯಿತಿಯಿಂದ ಸರಬರಾಜು ಮಾಡಿರುವ ನೀರು...
KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ-ಧರಣಿ ಸತ್ಯಾಗ್ರಹ ಆರಂಭ
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಇಂದಿನಿಂದ (ಜು.29)...
ಅಂಗವಿಕಲರ ಬಸ್ಪಾಸ್ ಸೇರಿ ಎಲ್ಲ ಸರ್ಕಾರಿ ಸೌಲಭ್ಯಗಳಿಂದ ವಂಚಿತ ಅಂಗವಿಕಲ ಭೀಮಪ್ಪನಿಗೆ ಬೇಕಿದೆ ಸರ್ಕಾರದ ಆಸರೆ !
ತುಮಕೂರು: ಜಿಲ್ಲೆ ಹೊಸಹಳ್ಳಿ ಗ್ರಾಮ, ರೆಡ್ಡಿಹಳ್ಳಿ ಗ್ರಾಮಪಂಚಾಯಿತಿ ಮಿಡಿಗೆಸಿ, ಮಧುಗಿರಿ ತಾಲೂಕಿನ ಅಂಗವಿಕಲ ಭೀಮಪ್ಪನಿಗೆ ಸರ್ಕಾರಿ ಸೌಲಭ್ಯ ಸಿಗಬೇಕಿದೆ. ಪೋಲಿಯೋಗೆ ಒಳಗಾಗಿರುವ ಭೀಮಪ್ಪನಿಗೆ ಬೆರಳಿನ ಗುರುತು ಸಹ...
ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆ ತಲಕಾಡು ನಿಸರ್ಗ ಧಾಮಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ
ಮೈಸೂರು: ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ, ಜಿಲ್ಲೆಯ ತಿ.ನರಸೀಪುರ ತಾಲೂಕಿನ ತಲಕಾಡು ನಿಸರ್ಗ ಧಾಮಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ತಾಲೂಕು ಆಡಳಿತ ಆದೇಶ ಹೊರಡಿಸಿದೆ. ಕೆಅರ್ಎಸ್,...
KSRTC: ನಾಳೆಯಿಂದ ಸಾರಿಗೆ ನೌಕರರ ಉಪವಾಸ-ಧರಣಿ ಸತ್ಯಾಗ್ರಹ: ಚಂದ್ರಶೇಖರ್
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ನಾಳೆಯಿಂದ (ಜು.29)...