NEWSನಮ್ಮರಾಜ್ಯಲೇಖನಗಳು

KSRTC: ಪ್ರಯಾಣಿಕ ಟಿಕೆಟ್‌ ಕಳೆದು ಕೊಂಡರೆ ನಿರ್ವಾಹಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ-ಎಂಡಿ ಆದೇಶ

ವಿಜಯಪಥ ಸಮಗ್ರ ಸುದ್ದಿ
  • 2020 ಫೆಬ್ರವರಿ 20ರಂದು ಅಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಿವಯೋಗಿ ಸಿ. ಕಳಸದ ಸುತ್ತೋಲೆ ಹೊರಡಿಸಿದ್ದಾರೆ

ಬೆಂಗಳೂರು: ಪ್ರಯಾಣಿಕರು ಟಿಕೆಟ್ ಕಳೆದುಕೊಂಡ ಪಕ್ಷದಲ್ಲಿ ತನಿಖಾದಿಕಾರಿಗಳು ವಾಹನವೂ ತಪಾಸಣಾ ಗೋಳಪಡಿಸಿದಾಗ ಆ ಪ್ರಯಾಣಿಕರಿಗೆ ತನಿಖಾ ಸಿಬ್ಬಂದಿ ಹತ್ತಿದ ಹಂತದಿಂದ ಮುಂದಿನ ಹಂತದವರೆಗೆ ಪ್ರಕರಣ ದಾಖಲಿಸಿ ಆ ಹಂತದಿಂದಲೇ ಪ್ರಯಾಣಿಕ ಇಳಿಯುವ ಹಂತಕ್ಕೆ ಟಿಕೆಟ್ ಕೊಡಬೇಕು. ಈ ನಡುವೆ ನಿರ್ವಾಹಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವಂತ್ತಿಲ್ಲ.

ಈ ಸುತ್ತೋಲೆಯನ್ನು 2020 ಫೆಬ್ರವರಿ20ರಂದು ಅಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಿವಯೋಗಿ ಸಿ. ಕಳಸದ ಅವರು ಹೊರಡಿಸಿದ್ದಾರೆ. ಹೌದು! ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕ ಟಿಕೆಟ್‌ ಕಳೆದುಕೊಂಡರೆ ಅದಕ್ಕೆ ನಿರ್ವಾಹಕರನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ಸ್ಪಷ್ಟವಾಗಿ ಎಂಡಿ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಮಾರ್ಗ ತನಿಖಾ ಪದ್ಧತಿಯಲ್ಲಿನ ಮಾರ್ಗದರ್ಶನಗಳು: ಕರಾರಸಾ ನಿಗಮ ರಾಜ್ಯದೊಳಗೆ ಹಾಗೂ ನೆರೆ ರಾಜ್ಯದ ವಿವಿಧ ಸ್ಥಳಗಳಿಗೆ ಕಾರ್ಯಾಚರಣೆ ಮಾಡುತ್ತಿರುವ ವಾಹನಗಳನ್ನು ಪರಿಣಾಮಕಾರಿಯಾಗಿ ತನಿಖೆಗೆ ಒಳಪಡಿಸಿದಾಗ ಮಾರ್ಗ ತನಿಖಾ ಸಿಬ್ಬಂದಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಆದರೆ ಪ್ರಯಾಣಿಕರು ವಾಹನದಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಪ್ರಯಾಣದ ಟಿಕೆಟ್ ಕಳೆದುಕೊಂಡ (Loss of ticket) ಸಂದರ್ಭಗಳಲ್ಲಿ ಮಾರ್ಗ ತನಿಖಾ ಸಿಬ್ಬಂದಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ನಿರ್ದೇಶನಗಳು ಇರುವುದಿಲ್ಲ. ಈ ಸಂದರ್ಭಗಳಲ್ಲಿ ಮಾರ್ಗ ತನಿಖಾ ಸಿಬ್ಬಂದಿಗಳು ಈ ಕೆಳಕಂಡಂತೆ ಮಾರ್ಗಸೂಚಿಗಳನ್ನು ಪಾಲಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಪ್ರಯಾಣಿಕರು ವಾಹನದಲ್ಲಿ ಪ್ರಯಾಣಿಸುವಾಗ ಟಿಕೆಟ್ ಪಡೆದುಕೊಂಡು, ಆಕಸ್ಮಿಕವಾಗಿ ಪ್ರಯಾಣದ ಟಿಕೆಟ್ ಕಳೆದುಕೊಂಡ (Loss of ticket) ಸಂದರ್ಭಗಳಲ್ಲಿ ಮಾರ್ಗ ತನಿಖಾ ಸಿಬ್ಬಂದಿಯು ಇಟಿಎಂ/ ಮುಂಗಡ ಕಾಯ್ದಿರಿಸಿದ ಟ್ರಿಪ್‌ ಶೀಟ್‌ಗಳಿಂದ ಈ ಪ್ರಯಾಣಿಕರು ಟಿಕೆಟ್ ಪಡೆದಿದ್ದು, ತದನಂತರ ಟಿಕೆಟ್ ಕಳೆದುಕೊಂಡಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು.

ಮಂದುವರಿದು ತನಿಖಾ ಸ್ಥಳದಿಂದ ಮುಂದೆ ಪ್ರಯಾಣಿಕರು ಪ್ರಯಾಣಿಸುವ ಸ್ಥಳಕ್ಕೆ ನಿರ್ವಾಹಕರ ಇಟಿಎಂ ಯಂತ್ರದಿಂದ ಮರುಟಿಕೆಟ್ ವಿತರಿಸುವುದು ಹಾಗೂ ಮರುವಿತರಣೆ ಟಿಕೆಟ್‌ನ ಮೊತ್ತವನ್ನು ಸಂಬಂಧಿಸಿದ ಪ್ರಯಾಣಿಕರಿಂದ ಪಡೆಯುವುದು ಹಾಗೂ ಈ ಬಗ್ಗೆ ಮಾರ್ಗ ಪತ್ರದಲ್ಲಿ ಷರಾ
ದಾಖಲಿಸುವುದು. ಈ ರೀತಿಯ ಸಂದರ್ಭದಲ್ಲಿ ನಿರ್ವಾಹಕರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಬಾರದು.

ಈ ಸುತ್ತೋಲೆಯಲ್ಲಿನ ಅಂಶಗಳ ಬಗ್ಗೆ ಚಾಲನಾ ಸಿಬ್ಬಂದಿಗಳಿಗೆ ಹಾಗೂ ಮಾರ್ಗ ತನಿಖಾ ಸಿಬ್ಬಂದಿಗೆ ಅಗತ್ಯ ತಿಳಿವಳಿಕೆಯನ್ನು ನೀಡುವುದು. ಈ ಸುತ್ತೋಲೆ ಈ ಕೂಡಲೇ ಜಾರಿಗೆ ಬರುತ್ತದೆ. ಸುತ್ತೋಲೆ ಸ್ವೀಕರಿಸಿದ್ದಕ್ಕೆ ಸ್ವೀಕೃತಿ ಮತ್ತು ಅನುಸರಣಾ ವರದಿ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅಂದಿನ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಿವಯೋಗಿ ಸಿ. ಕಳಸದ ಸೂಚಿಸಿದ್ದರು. ಈ ಪಿಡಿಎಫ್‌ ನೋಡಬಹುದು  loss of ticket 1531

 

Megha
the authorMegha

Leave a Reply

error: Content is protected !!
Latest news
KSRTC: ಪಲ್ಲಕ್ಕಿಯಲ್ಲಿ ಆಕಸ್ಮಿಕ ಬೆಂಕಿ- ಧಗಧಗಿಸಿದ ಬಸ್‌- ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ KSRTC ಕಡೂರು: ಘಟಕದಲ್ಲೊಬ್ಬಳು ಟಾರ್ಚರ್‌ ಟಿಸಿ- ನೌಕರರಿಗೆ ಮಾನಸಿಕ ಕಿರುಕುಳ- ರಜೆ ಬದಲು ಗೈರು ತೋರಿಸುವ ನಟ ಭಯಂಕರಿ! EPS ಪಿಂಚಣಿದಾರರ 100ನೇ ಮಾಸಿಕ, ಶತದಿನೋತ್ಸವದಲ್ಲಿ ಮುಸ್ಸಂಜೆಯ ತರುಣರ ಸಂಭ್ರಮ KSRTC: ಫ್ರೀಡಂ ಪಾರ್ಕ್‌ನಲ್ಲಿ ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿಗೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ- ಸರ್ಕಾರ... ಗೆದ್ದ3ವರ್ಷದ ಬಳಿಕ ಶಾಸಕರಾದ ಜೀವರಾಜ್: ಅಧಿಕಾರಿಗಳ ಎಡವಟ್ಟಿಗೆ ಸೋತರು 3ವರ್ಷ ಶಾಸಕರಾಗಿದ್ದ ರಾಜೇಗೌಡ KSRTC: ಇಂದು ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿ ಕೊಡಲು ಆಗ್ರಹಿಸಿ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ KSRTC: ನಾಳೆ ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿ ಕೊಡದ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ KKRTC: ನೋಡಿ ಎಂಡಿ ಅವರೇ ನಿಮ್ಮ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗಳು ಮೇ 1ರಂದು ರಜೆ ತೆಗೆದುಕೊಂಡರೆ ಆಬ್ಸೆಂಟ್‌ ಹಾಕುವ ... ಪ್ರಾಮಾಣಿಕತೆ ಮೆರೆದ KSRTC ಸಿಬ್ಬಂದಿ - ಆಭರಣ ಅಡವಿಟ್ಟು ತಂದಿದ್ದ ಹಣ ಕಳೆದು ಕೊಂಡ ಪ್ರಯಾಣಿಕನಿಗೆ ಮರಳಿ ಕೊಟ್ಟ ನೌಕರರ... KSRTC: ಚಾಲನಾ ಸಿಬ್ಬಂದಿ ವಿರುದ್ಧ ಮೆಮೊ ನೀಡುವುದಕಷ್ಟೇ ತಮ್ಮ ಕಾರ್ಯ ವ್ಯಾಪ್ತಿಯ ಸೀಮಿತಗೊಳಿಸಿಕೊಂಡ ತನಿಖಾಧಿಕಾರಿಗಳು?...