ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿ ತನ್ನ ರೌದ್ರನರ್ತನ ಮುಂದುವರಿಸಿದ್ದು, ಇಂದು 267 ಮಂದಿಯನ್ನು ಸುತ್ತಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ 4063ಕ್ಕೆ ಏರಿಕೆ ಕಂಡಿದೆ. ಜತೆಗೆ ಇಂದು ದಾವಣಗೆರೆಯಲ್ಲಿ ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.
ಇಂದು ಕಲಬುರಗಿ ಮತ್ತೆ ಶತಕಬಾರಿದ್ದು 105 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಉಡುಪಿ 62, ರಾಯಚೂರು 35, ಬೆಂಗಳೂರು 20, ಮಂಡ್ಯ 13, ಯಾದಗಿರಿ 9, ವಿಜಯಪುರ 6, ದಾವಣಗೆರೆ 3, ದಕ್ಷಿಣ ಕನ್ನಡ, ಮೈಸೂರು, ಬಾಗಲಕೋಟೆ, ಶಿವಮೊಗ್ಗ ಮತ್ತು ಕೋಲಾರದಲ್ಲಿ ತಲಾ ಎರಡು, ಬಳ್ಳಾರಿ, ಧಾರವಾಡ, ಹಾಸನ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣ ಇಂದು ಪತ್ತೆಯಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಈವರೆಗೆ ರಾಜ್ಯದಲ್ಲಿ ಕೊರೊನಾದಿಂದ ಅಸುನೀಗಿದವರ ಸಂಖ್ಯೆ 55 ಕ್ಕೆ ಏರಿಕೆ ಆಗಿದೆ. (ಇದರಲ್ಲಿ ಎರಡು ಅನ್ಯಕಾರಣದಿಂದ ಬಲಿಯಾಗಿದ್ದಾರೆ). ಇನ್ನು 4063 ಮಂದಿಗೆ ಈವರೆಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಅದರಲ್ಲಿ 1514 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. 2494 ಕೊರೊನಾ ಸೋಂಕಿತರಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದೇಶದಲ್ಲಿ 208,800 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 208,800 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 5,834 ಮಂದಿ ಮೃತಪಟ್ಟಿದ್ದಾರೆ. 100,602 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 6,484,630 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 383,109 ಜನರು ಮೃತಪಟ್ಟಿದ್ದಾರೆ 3,089,845 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ. view by country
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail