ಬೆಂ.ಗ್ರಾಮಾಂತರ: ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮ- ವಾಹನ, ಸಾರ್ವಜನಿಕರ ಪ್ರವೇಶ ನಿಷೇಧ: ಡಿಸಿ ಬಸವರಾಜು

Megha19.06.2025

ಬೆಂಗಳೂರು ಗ್ರಾಮಾಂತರ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನಾಳೆ (ಜೂ.20) ಬೆಂಗಳೂರು ಉತ್ತರ ತಾಲೂಕಿನ ನಗರೂರು ಗ್ರಾಮದಲ್ಲಿನ ಬಿ.ಜಿ.ಎಸ್ ಆಸ್ಪತ್ರೆಯ ನೂತನ ಘಟಕದ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ.
ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 08:00 ಗಂಟೆಯಿಂದ ಮಧ್ಯಾಹ್ನ 02:00 ಗಂಟೆಯವರೆಗೆ ನೆಲಮಂಗಲದ ಅರಿಶಿನಕುಂಟೆ ಗ್ರಾಮದ ಅಂಡರ್ ಪಾಸ್‌ನಿಂದ ನಗರೂರು ರಸ್ತೆಯಲ್ಲಿನ ಮುಕ್ತನಾಥೇಶ್ವರ ದೇವಾಲಯದವರೆಗೆ ವಾಹನ, ಸಾರ್ವಜನಿಕರ ಪ್ರವೇಶ ನಿಷೇಧ ಮಾಡಲಾಗಿದೆ.
ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದ ಅಂಡರ್ ಪಾಸ್‌ನಿಂದ ನಗರೂರು ರಸ್ತೆಯಲ್ಲಿನ ಮುಕ್ತನಾಥೇಶ್ವರ ದೇವಾಲಯದವರೆಗೆ ವಾಹನಗಳ ನಿರ್ಬಂಧ, ಸಾರ್ವಜನಿಕ ಪ್ರವೇಶ ಹಾಗೂ ರಸ್ತೆ ಬದಿ ವ್ಯಾಪಾರ ವಹಿವಾಟನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಆದೇಶಿಸಿದ್ದಾರೆ.
Related

Megha