NEWSನಮ್ಮಜಿಲ್ಲೆನಮ್ಮರಾಜ್ಯ

BMTC: 87 ನಿರ್ವಾಹಕರಿಗೆ TC ಹುದ್ದೆಗೆ ಮುಂಬಡ್ತಿ- ಸ್ಥಳ ನಿಯೋಜನೆಯೊಂದಿಗೆ ವರ್ಗಾವಣೆ ಮಾಡಿ ಸಿಪಿಎಂ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 87 ನಿರ್ವಾಹಕರನ್ನು ಸಂಚಾರಿ ನಿಯಂತ್ರಕ (TC) ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳ ನಿಯೋಜನೆಯೊಂದಿಗೆ ವರ್ಗಾವಣೆ ಮಾಡಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಗುರುವಾರ (ಜೂ.19) ಆದೇಶ ಹೊರಡಿಸಿದ್ದಾರೆ.

ಇನ್ನು ಈ ಸಂಬಂಧ ಇಲಾಖಾ ಮುಂಬಡ್ತಿ ಸಮಿತಿ ಸಭೆ ಇದೇ ಜೂನ್‌ 17ರಂದು ನಡೆದಿದ್ದು, ಬಳಿಕ ವ್ಯವಸ್ಥಾಪಕ ನಿರ್ದೇಶಕರು ಈ 87 ಮಂದಿಗೂ ಮುಂಬಡ್ತಿ ನೀಡಲು ಜೂನ್‌ 17ರಂದೇ ಆದೇಶ ಹೊರಡಿಸಿದ್ದರು.

ಸೂಕ್ತಾಧಿಕಾರಿಗಳ ಆದೇಶದನ್ವಯ ನಿರ್ವಾಹಕ (ದರ್ಜೆ-3) ರಿಂದ ಸಂಚಾರಿ ನಿಯಂತ್ರಕ (TC) (ದರ್ಜೆ-3) ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳ ನಿಯೋಜನೆಯೊಂದಿಗೆ ವರ್ಗಾವಣೆ ಮಾಡಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಜೂ.19 ಆದೇಶ ಹೊರಡಿಸಿದ್ದಾರೆ.

ಈ ಪದೋನ್ನತಿಯು ಮುಕ್ಕುಳಿದ ವೃಂದದ ನಿರ್ವಾಹಕರ ಹುದ್ದೆಯ ವರಿಷ್ಠತಾ ಪಟ್ಟಿಯ ಪರಿಷ್ಕರಣೆಯಿಂದ ಹಾಗೂ ಜೇಷ್ಠತೆಯಲ್ಲಿ ಹಿರಿಯರಿರುವ ಯಾರಾದರೂ ಪೂರ್ವಾನ್ವಯ ಬಡ್ತಿಗೆ ಅರ್ಹತೆ ಪಡೆದುಕೊಂಡಲ್ಲಿ, ಜೇಷ್ಠತಾ ಪಟ್ಟಿಯಲ್ಲಿ ಕಿರಿಯರಿರುವ ಅಧಿಕಾರಿಗಳನ್ನು ಹಿಂಬಡ್ತಿಗೊಳಿಸುವ ಷರತ್ತಿಗೊಳಪಟ್ಟಿದೆ.

ಈ ನೌಕರರು ಈ ಕೂಡಲೇ ಬಡ್ತಿ ಹುದ್ದೆಯ ನಿಯೋಜನಾ ಸ್ಥಳದಲ್ಲಿ ಹಾಜರಾಗತಕ್ಕದ್ದು. ಒಂದು ವೇಳೆ ಬಡ್ತಿಯನ್ನು ಒಪ್ಪಿಕೊಳ್ಳದೇ ಇದ್ದಲ್ಲಿ ಬಡ್ತಿ ನಿರಾಕರಣೆಯ ಮನವಿಯನ್ನು ಏಳು(7) ದಿನಗಳೊಳಗಾಗಿ ಕೇಂದ್ರ ಕಚೇರಿಗೆ ಸಲ್ಲಿಸತಕ್ಕದ್ದು. ಇಂತಹ ಪ್ರಕರಣಗಳನ್ನು ಸುತ್ತೋಲೆ ಸಂಖ್ಯೆ: 1344, 17-05-2006ರ ಅನ್ವಯ ಕ್ರಮ ಕೈಗೊಳ್ಳಲಾಗುವುದು.

ಮುಂದುವರಿದಂತೆ, ಬಡ್ತಿ ಆದೇಶ ಹೊರಡಿಸಿದ ದಿನಾಂಕದಂದು, ನೌಕರರ ವಿರುದ್ದ ಪ್ರಸ್ತುತ ಅಪರಾಧ ಪ್ರಕರಣಗಳು ಬಾಕಿ ಇದ್ದಲ್ಲಿ, ದಂಡನೆ ಚಾಲ್ತಿ ಇದ್ದಲ್ಲಿ ಅಥವಾ ಅಮಾನತಿನಲ್ಲಿದ್ದಲ್ಲಿ ಯಾವುದೇ ಕಾರಣಕ್ಕೂ ಬಡ್ತಿಯ ಆದೇಶವನ್ನು ಜಾರಿಗೊಳಿಸತಕ್ಕದ್ದಲ್ಲ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಕೇಂದ್ರ ಕಚೇರಿಗೆ ಮಾಹಿತಿಯನ್ನು ನೀಡಬೇಕು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶದಲ್ಲಿ ತಿಳಿಸಿದ್ದಾರೆ.

ಯಾವ ನಿರ್ವಾಹಕರು ಸಂಚಾರಿ ನಿಯಂತ್ರಕರಾಗಿ ಮುಂಬಡ್ತಿ ಪಡೆದರು ಹಾಗೂ ಅವರು ವರ್ಗಾವಣೆಗೊಂಡ ಸ್ಥಳದ ವಿವರಕ್ಕೆ ಈ ಪಿಡಿಎಫ್‌ ಕಾಪಿ ನೋಡಬಹುದು..Conductor to TC(Residual & Hyka) promotion order

Megha
the authorMegha

Leave a Reply

error: Content is protected !!
Latest news
KSRTC ಕನಕಪುರ ಘಟಕದಲ್ಲಿ ಚಾಲಕನ ಮೇಲೆ ಹಲ್ಲೆ ಮಾಡಿದ ನಾಲ್ವರ ಅಮಾನತು ಸಿಎಂ ತವರಲ್ಲೇ KSRTC ಚಾಲನಕನ ಮೇಲೆ ಹಲ್ಲೆ, ಗೂಂಡಾ ವರ್ತನೆ: ಡಿಎಂ ಎದುರೇ ಘಟಕದಲ್ಲಿ ರೌಡಿಸಂ ನೌಕರನ ವಿರುದ್ಧ ಸಾಬೀತಾಗಿರುವ ದುರ್ನಡತೆಗೆ ಹೋಲಿಸಿದರೆ ಆತನ ವಜಾ ಮಾಡಿರುವುದು ಕಾನೂನುಬಾಹಿರ,ಅತ್ಯಂತ ಕಠಿಣ ಶಿಕ್ಷೆ: ಸು... ತಜ್ಞರ ಸಲಹೆ ಪಡೆದು ಪಾಲಿಕೆ ಆಯವ್ಯಯ ಅನುದಾನ ಬಳಕೆ : GBA ದಕ್ಷಿಣ ಆಯುಕ್ತ BMTC: ಜೂನ್‌ 18ರೊಳಗೆ ನಿವೃತ್ತ ನೌಕರರು ಏ-2018 ರಿಂದ ಜು-2018ರವರೆಗಿನ ತುಟ್ಟಿಭತ್ಯೆ ಪಡೆಯಲು ಬ್ಯಾಂಕ್‌ ಖಾತೆ ವಿವರ ... ಕುಡಿಯುವ ನೀರು ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ: ಸಚಿವ ಖಂಡ್ರೆ ಎಚ್ಚರಿಕೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೊಂದೇ ಆಯುಧ: ನ್ಯಾ. ಶ್ರೀಶೈಲ್ ಭೀಮಸೇನ ಬಾಗಡಿ ನ್ಯಾಯಾಲಯದ ಆದೇಶ ಪಾಲಿಸದ KKRTC: ಮೃತರ ಕುಟುಂಬಕ್ಕೆ 36 ಲಕ್ಷ ರೂ. ಪರಿಹಾರ ನೀಡದಕ್ಕೆ ಔರಾದ್ ಘಟಕದ 2ಬಸ್‌ಗಳ ಜಪ್ತಿ ಸರ್ಕಾರದಿಂದ ಹೊರಬಿತ್ತು ಮಹತ್ವದ ಆದೇಶ: ಇನ್ನುಮುಂದೆ ಸರ್ಕಾರಿ ಪುರುಷ ನೌಕರರು ಪಡೆಯಬಹುದು 6ತಿಂಗಳ ಶಿಶುಪಾಲನಾ ರಜೆ KSRTC: ಇಂದಿನಿಂದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಣೆಗೆ ಸರ್ಕಾರದ ಆದೇಶ