NEWSಕೃಷಿನಮ್ಮರಾಜ್ಯ

ನಿಮ್ಮ ಹೊಲಕ್ಕೆ ಹೋಗುವುದು ನಿಮ್ಮ ಹಕ್ಕು: ಅಕ್ಕ-ಪಕ್ಕ ಜಮೀನವರು ದಾರಿ ಕೊಡ್ತಿಲ್ವಾ? ಭಯಬೇಡ ಹೀಗೆ ಮಾಡಿ!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಟ್ರ್ಯಾಕ್ಟರ್, ಎತ್ತು, ಗೊಬ್ಬರ, ಕೃಷಿ ಉಪಕರಣಗಳನ್ನ ಹೊಲಕ್ಕೆ ತಗೊಂಡು ಹೋಗಬೇಕು. ಆದರೆ ಅಕ್ಕಪಕ್ಕದ ಜಮೀನಿನ ಮಾಲೀಕರು, “ನಮ್ಮ ಜಮೀನಿನಲ್ಲಿ ಓಡಾಡಂಗಿಲ್ಲ, ದಾರಿ ಬಿಡಲ್ಲ,” ಅಂತ ಕಾಲು ಕೆರೆದು ಜಗಳಕ್ಕೆ ಬರ್ತಾರೆ. ಹೀಗಾಗದರೆ ಏನು ಮಾಡೋದು ಎಂದು ಎಷ್ಟೋ ಜನ ರೈತರು ಕಾನೂನುನ ಅರಿವಿಲ್ಲದೆ ವ್ಯವಸಾಯ ಮಾಡುವುದನ್ನೇ ನಿಲ್ಲಿಸಿದ್ದಾರೆ.

ಆದರೆ, ನಮ್ಮ ರೈತ ಬಾಂಧವರೇ (Farmers), ಬೆಳ್ಳಂಬೆಳಗ್ಗೆ ಎದ್ದು ಹೊಲದ ಕಡೆ ಮುಖ ಮಾಡೋದೆ ನಿಮ್ಮ ಜೀವನ. ಹೊಲವೇ ದೇವರು, ಅದೇ ಅನ್ನ ನೀಡೋ ತಾಯಿ. ಹಗಲು ರಾತ್ರಿ ಬೆವರಿಳಿಸಿ ದುಡಿಯೋ ಅನ್ನದಾತನಿಗೆ ಕೆಲವೊಮ್ಮೆ ತನ್ನ ಜಮೀನಿಗೆ (Property) ಹೋಗೋಕೆ ಒಂದು ದಾರಿನೇ ಇರಲ್ಲ. ಇದು ಎಂಥಾ ವಿಪರ್ಯಾಸ ಅಲ್ವಾ? ಹಲವು ಹಳ್ಳಿಗಳಲ್ಲಿ ಇವತ್ತಿಗೂ ಈ ಸಮಸ್ಯೆ ಜೀವಂತವಾಗಿದೆ. ಸ್ವಂತ ಜಮೀನು ಇರುತ್ತೆ, ಇಲ್ಲ ಬಾಡಿಗೆಗೆ ಪಡೆದು ವ್ಯವಸಾಯ ಮಾಡ್ತಿರ್ತಾರೆ.

ಟ್ರ್ಯಾಕ್ಟರ್, ಎತ್ತು, ಗೊಬ್ಬರ, ಕೃಷಿ ಉಪಕರಣಗಳನ್ನು ಆ ಹೊಲಕ್ಕೆ ತಗೊಂಡು ಹೋಗಬೇಕು. ಆದರೆ ಅಕ್ಕಪಕ್ಕದ ಜಮೀನಿನ ಮಾಲೀಕರು, “ನಮ್ಮ ಜಮೀನಿನಲ್ಲಿ ಓಡಾಡಂಗಿಲ್ಲ, ದಾರಿ ಬಿಡಲ್ಲ,” ಅಂತ ಕಾಲು ಕೆರೆದು ಜಗಳಕ್ಕೆ ಬರ್ತಾರೆ. ಇದರಿಂದಾಗಿ ಎಷ್ಟೋ ರೈತರು ಕಂಗಾಲಾಗಿ, ವ್ಯವಸಾಯವನ್ನೇ ಬಿಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಹೀಗಾದರೆ ನಾವು ಏನ್ ಮಾಡೋದು? ದಾರಿ ಕೊಡಲ್ಲ ಅಂದ್ರೆ ಸುಮ್ಮನೆ ಕೂರಬೇಕಾ ಎಂದು ಯೋಚನೆ ಮಾಡಬೇಡಿ. ನೀವು ಖಂಡಿತ ಸುಮ್ಮನೆ ಕೂರಬೇಕಾಗಿಲ್ಲ. ನಿಮಗೂ ಒಂದು ಹಕ್ಕಿದೆ, ನಿಮ್ಮ ಪರವಾಗಿ ನಿಲ್ಲೋಕೆ ಕಾನೂನಿದೆ. ಈ ಬಗ್ಗೆ ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇಬೇಕು.

ಏನಿದು ದಾರಿಯ ಹಕ್ಕಿನ ಕಾನೂನು?: ಭಾರತೀಯ ಕಾನೂನಿನಲ್ಲಿ “ಸರಾಗಗೊಳಿಸುವ ಕಾಯ್ದೆ, 1882” (Indian Easements Act, 1882) ಇದೆ. ಇದರಲ್ಲಿ ಜಮೀನಿನ ದಾರಿಯ ಹಕ್ಕಿನ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಇದರ ಪ್ರಕಾರ, ನಿಮ್ಮ ಜಮೀನಿಗೆ ಹೋಗಲು ಬೇರೆ ಯಾವುದೇ ದಾರಿ ಇಲ್ಲದಿದ್ದರೆ, ಪಕ್ಕದ ಜಮೀನಿನವರು ನಿಮಗೆ ದಾರಿ ಮಾಡಿಕೊಡಲೇಬೇಕು. ಇದಕ್ಕೆ ಅವಶ್ಯಕತೆಯ ಸುಲಭಾನುಭೋಗ (Easement of Necessity) ಎನ್ನುತ್ತಾರೆ.

ಸರಳವಾಗಿ ಹೇಳಬೇಕೆಂದರೆ, ಒಂದು ಜಮೀನಿನ ಹಿಂದೆ ಇನ್ನೊಂದು ಜಮೀನು ಇದ್ದರೆ, ಮುಂದಿರುವ ಜಮೀನಿನ ಮಾಲೀಕ ಹಿಂದಿನ ಜಮೀನಿಗೆ ದಾರಿ ಬಿಟ್ಟುಕೊಡಲೇಬೇಕು. ಇದು ಅವರು ನಿಮಗೆ ಕೊಡುವ ಔದಾರ್ಯವಲ್ಲ, ಅದು ನಿಮ್ಮ ಕಾನೂನಾತ್ಮಕ ಹಕ್ಕು. ಒಂದು ವೇಳೆ ಅವರು ನಿರಾಕರಿಸಿದರೆ, ನೀವು ಅವರ ವಿರುದ್ಧ ನೇರವಾಗಿ ಪ್ರಕರಣ ದಾಖಲಿಸಬಹುದು.

ಹಿಂದೆ ದಾರಿ ಇದ್ದು ಈಗ ಮುಚ್ಚಿದ್ರೆ?: ಇನ್ನೊಂದು ಪ್ರಮುಖ ವಿಚಾರವೆಂದರೆ, ಈ ಹಿಂದೆ ನಿಮ್ಮ ಜಮೀನಿಗೆ ಹೋಗಲು ಒಂದು ದಾರಿ ಇತ್ತು, ಆದರೆ ಈಗ ಪಕ್ಕದವರು ಅದನ್ನು ಮುಚ್ಚಿಹಾಕಿದ್ದಾರೆ ಅಥವಾ ಬೇಲಿ ಹಾಕಿದ್ದಾರೆ ಎಂದಾದರೆ, ನೀವು ಖಂಡಿತವಾಗಿಯೂ ನ್ಯಾಯಾಲಯದ ಮೊರೆ ಹೋಗಬಹುದು. ಹಿಂದಿನಿಂದಲೂ ಇದೇ ದಾರಿಯನ್ನು ಬಳಸುತ್ತಿದ್ದೆವು, ಈಗ ತೊಂದರೆಯಾಗಿದೆ ಎಂದು ನೀವು ಸಾಬೀತುಪಡಿಸಿದರೆ, ನ್ಯಾಯಾಲಯವು ದಾರಿಯನ್ನು ಪುನಃ ತೆರವುಗೊಳಿಸಲು ಆದೇಶ ನೀಡುತ್ತದೆ.

ಹೊಸ ದಾರಿ ನಿರ್ಮಿಸಿಕೊಳ್ಳುವ ಹಕ್ಕು!: ಅಷ್ಟೇ ಅಲ್ಲ, ನಿಮ್ಮ ಜಮೀನಿಗೆ ದಾರಿಯೇ ಇಲ್ಲದಿದ್ದಾಗ, ಹೊಸ ದಾರಿಯನ್ನು ನಿರ್ಮಿಸಿಕೊಳ್ಳಲು ಕೂಡ ಕಾನೂನಿನಲ್ಲಿ ಅವಕಾಶವಿದೆ. ಟೆನೆನ್ಸಿ ಆಕ್ಟ್‌ನ ಸೆಕ್ಷನ್ 251ರ ಅಡಿಯಲ್ಲಿ, ನೀವು ನಿಮ್ಮ ಕೃಷಿ ಚಟುವಟಿಕೆಗಳಿಗಾಗಿ ಹೊಸ ರಸ್ತೆಯನ್ನು ನಿರ್ಮಿಸಿಕೊಳ್ಳಲು ಅನುಮತಿ ಕೋರಬಹುದು. ಹೀಗೆ ರೈತರಿಗೆ ಕಿರಿಕಿರಿ ಮಾಡುವ ಕೆಲವರಿಂದ ರಕ್ಷಣೆ ನೀಡುವುದಕ್ಕೆ 1882 ಕಾಯ್ದೆ ಇರುವುದು. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ.

ಇನ್ನು ತಾಜಾ ನಿದರ್ಶನವಾಗಿ ತಿಳಿಸಬೇಕು ಎಂದರೆ, ಇತ್ತೀಚೆಗೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಮಹಿಳೆಯೊಬ್ಬರಿಗೆ ಅವರ ಜಮೀನಿಗೆ ಹೋಗಲು ಅಕ್ಕಪಕ್ಕದವರು ದಾರಿ ಬಿಡದಿದ್ದಕ್ಕೆ ಆಕೆ 3 ವರ್ಷಗಳಿಂದ ವ್ಯವಸಾಯ ಮಾಡಲಾಗಲ್ಲಿ. ಆದರೆ ಕೆಲ ಸಂಘಟನೆಗಳ ನಾಯಕರ ಜತೆಗೂಡಿ ಆಕೆ ತಹಸೀಲ್ದಾರ್‌ ಹಾಗೂ ಎಸಿ ಅವರಿಗೆ ದೂರು ನೀಡಿ ಪ್ರಸ್ತುತ ಖುದ್ದು ತಹಸೀಲ್ದಾರ್‌ ಹಾಗೂ ಎಸಿ ಅವರೆ ಸ್ಥಳಕ್ಕೆ ಬಂದು ದಾರಿ ಬಿಡಿಸಿಕೊಟ್ಟಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC ಕನಕಪುರ ಘಟಕದಲ್ಲಿ ಚಾಲಕನ ಮೇಲೆ ಹಲ್ಲೆ ಮಾಡಿದ ನಾಲ್ವರ ಅಮಾನತು ಸಿಎಂ ತವರಲ್ಲೇ KSRTC ಚಾಲನಕನ ಮೇಲೆ ಹಲ್ಲೆ, ಗೂಂಡಾ ವರ್ತನೆ: ಡಿಎಂ ಎದುರೇ ಘಟಕದಲ್ಲಿ ರೌಡಿಸಂ ನೌಕರನ ವಿರುದ್ಧ ಸಾಬೀತಾಗಿರುವ ದುರ್ನಡತೆಗೆ ಹೋಲಿಸಿದರೆ ಆತನ ವಜಾ ಮಾಡಿರುವುದು ಕಾನೂನುಬಾಹಿರ,ಅತ್ಯಂತ ಕಠಿಣ ಶಿಕ್ಷೆ: ಸು... ತಜ್ಞರ ಸಲಹೆ ಪಡೆದು ಪಾಲಿಕೆ ಆಯವ್ಯಯ ಅನುದಾನ ಬಳಕೆ : GBA ದಕ್ಷಿಣ ಆಯುಕ್ತ BMTC: ಜೂನ್‌ 18ರೊಳಗೆ ನಿವೃತ್ತ ನೌಕರರು ಏ-2018 ರಿಂದ ಜು-2018ರವರೆಗಿನ ತುಟ್ಟಿಭತ್ಯೆ ಪಡೆಯಲು ಬ್ಯಾಂಕ್‌ ಖಾತೆ ವಿವರ ... ಕುಡಿಯುವ ನೀರು ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ: ಸಚಿವ ಖಂಡ್ರೆ ಎಚ್ಚರಿಕೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೊಂದೇ ಆಯುಧ: ನ್ಯಾ. ಶ್ರೀಶೈಲ್ ಭೀಮಸೇನ ಬಾಗಡಿ ನ್ಯಾಯಾಲಯದ ಆದೇಶ ಪಾಲಿಸದ KKRTC: ಮೃತರ ಕುಟುಂಬಕ್ಕೆ 36 ಲಕ್ಷ ರೂ. ಪರಿಹಾರ ನೀಡದಕ್ಕೆ ಔರಾದ್ ಘಟಕದ 2ಬಸ್‌ಗಳ ಜಪ್ತಿ ಸರ್ಕಾರದಿಂದ ಹೊರಬಿತ್ತು ಮಹತ್ವದ ಆದೇಶ: ಇನ್ನುಮುಂದೆ ಸರ್ಕಾರಿ ಪುರುಷ ನೌಕರರು ಪಡೆಯಬಹುದು 6ತಿಂಗಳ ಶಿಶುಪಾಲನಾ ರಜೆ KSRTC: ಇಂದಿನಿಂದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಣೆಗೆ ಸರ್ಕಾರದ ಆದೇಶ