ಹಾಸನ: ಜಿಲ್ಲೆಯಲ್ಲಿ ಹೊಸದಾಗಿ 14 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 98ಕ್ಕೆ ಏರಿಕೆಯಾಗಿದೆ .
ಈ ವರಗೆ ಮಹಾರಾಷ್ಟ್ರ ದಿಂದ ಬಂದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ಸೋಂಕು ಇಂದು ಜಿಲ್ಲೆಯ ನಿವಾಸಿಗಳಲ್ಲೂ ಪತ್ತೆ ಯಾಗಿದೆ .ಹಾಸನ ನಗರದಲ್ಲಿ ಎರೆಡು ಪ್ರಕರಣ ದಾಖಲಾಗಿದ್ದು ಎರಡು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇಂದು ವರದಿಯಾದ ಪ್ರಕರಣಗಳಲ್ಲಿ 11ಪ್ರಕರಣಗಳಿಗೆ ಮಹಾರಾಷ್ಟ್ರ ದಿಂದ ಪ್ರಯಾಣಿಸಿದ ಹಿನ್ನೆಲೆ ಇದೆ .ಇನ್ನು ಉಳಿದ ಮೂವರಲ್ಲಿ ಒಬ್ಬ ಹಾಸನ ನಗರದ ನಿವಾಸಿ. ಕೆ.ಎಸ್ ಆರ್ ಪಿ ಕಾನ್ಸ್ ಟೆಬಲ್ ಬೆಂಗಳೂರಿಗೆ ಸರ್ಕಾರಿ ವಾಹನದಲ್ಲೇ ಕರ್ತವ್ಯ ನಿಮಿತ್ತ ಪ್ರಯಾಣ ಮಾಡಿ ಬಂದ ಹಿನ್ನೆಲೆ ಹೊಂದಿದ್ದು ನಗರದ ಮತ್ತೊಬ್ಬ ಸೋಂಕಿತ ಮಹಿಳೆ ಕೂಡ ಬೆಂಗಳೂರು ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
ಇನ್ನೊಬ್ಬರು ಮಂಗಳೂರು ಮೂಲದ ಬೆಂಗಳೂರಿನ ಕಾರ್ಮಿಕ ಲಾಕ್ ಡೌನ್ ವೇಳೆ ಹಾಸನಕ್ಕೆ ಅಗಮಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟಿದ್ದು ಮೊದಲ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಕಾರಣ ಕ್ವಾರಂಟೈನ್ ಕೇಂದ್ರಕ್ಕೆ ಕಳಿಲಾಗಿತ್ತು 12 ನೇ ದಿನದ ಎರಡನೇ ತಪಾಸಣೆ ಯಲ್ಲಿ ಆತನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಆರ್ .ಗಿರೀಶ್ ತಿಳಿಸಿದ್ದಾರೆ
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಎರಡು ಕಂಟೈನ್ಮೆಂಟ್ ಜೋನ್
ಇಂದು ಸ್ಥಳೀಯವಾದ ಎರಡು ಕೊವಿದ್ 19 ಪ್ರಕರಣ ಪತ್ತೆಯಾಗಿದ್ದು ಅವರು ವಾಸಿಸುತಿದ್ದ ಪ್ರದೇಶಗಳನ್ನು ಕಂಟೈನ್ಮೆಂಟ್ ಪ್ರದೇಶವೆಂದು ಘೋಷಿಸಲಾಗಿದೆ. ಇಂದಿರಾ ನಗರದ ಎರಡನೇ ಕ್ರಾಸ್ ಮತ್ತು ಉತ್ತರ ಬಡಾವಣೆಯ ಅರಳಿ ಮರ ವೃತ್ತದ ಆಸುಪಾಸಿನ ವಲಯವನ್ನು ಪೊಲೀಸ್ ಭದ್ರತೆ ಯೊಂದಿಗೆ ಕಂಟೈನ್ಮೆಂಟ್ ಮಾಡಲಾಗಿದೆ. ಈ ಪ್ರದೇಶದಲ್ಲಿ 28 ದಿನಗಳ ಕಾಲ ಯಾರಿಗೂ ಹೊರಗಿನಿಂದ ಒಳಕ್ಕೆ ಅಥವಾ ಒಳಗಿನಿಂದ ಹೊರಕ್ಕೆ ಒಡಾಡಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು . ನಾಗರಿಕರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ .ಈ ಪ್ರದೇಶಗಳಿ ಇನ್ಸಿಡೆಂಟ್ ಕಮಾಂಡರ್ ಎಂಬ ಅಧಿಕಾರಿಗಳನ್ನು ನೇಮಿಸಲಾಗಿದ್ದು ಅವರು ಈ ಪ್ರದೇಶಗಳ ಘಟನೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆ .
ಹಾಸನ ನಗರದಲ್ಲೇ ವಾಸವಿದ್ದವರಲ್ಲಿ ಸೋಂಕು ಕಂಡು ಬಂದಿರುವುದರಿಂದ ಪ್ರತಿಯೊಬ್ಬರು ಜಿಲ್ಲಾಡಳಿತದ ನಿರ್ಧಾರಕ್ಕೆ ಸಹಕಾರ ನೀಡಬೇಕು .ತಮ್ಮ ಸುರಕ್ಷತೆ ಗಮನಿಸುವ ಜೊತೆಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಮನವಿ ಮಾಡಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail