NEWSನಮ್ಮಜಿಲ್ಲೆನಮ್ಮರಾಜ್ಯ

“ವಿಜಯಪಥ ವರದಿ ಪರಣಾಮ”: ಡ್ಯೂಟಿ ರೋಟಾದಲ್ಲಿ ನಿರ್ವಾಹಕಿಯರಿಗೆ ಮೊದಲ ಆದ್ಯತೆ ನೀಡಿದ ಎಚ್ಚೆತ್ತ BMTC ಅಧಿಕಾರಿಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ” BMTC: ಮಹಿಳಾ ಕಂಡಕ್ಟರ್‌ಗಳಿಗೆ 20ನೇ ಘಟಕದಲ್ಲಿ ಡ್ಯೂಟಿ ರೋಟಾ ಸಮಸ್ಯೆ – ಇಷ್ಟವಿಲ್ಲದ ಮಾರ್ಗ ಆಯ್ಕೆ ಮಾಡಿಕೊಳ್ಳಬೇಕು ಎಂಬ ಷರತ್ತು” ಈ ಶೀರ್ಷಿಕೆಯಡಿ ವಿಜಯಪಥದಲ್ಲಿ ವರದಿ ಪ್ರಸಾರಗೊಂಡ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ನಿಗಮದ ಎಲ್ಲ ಘಟಕದಲ್ಲೂ ಇರುವ ನಿಯಮದಂತೆ ಡ್ಯೂಟಿ ರೋಟಾ ಆಯ್ಕೆ ಮಾಡಿಕೊಳ್ಳುವುದಕ್ಕೆ ಮಹಿಳಾ ಕಂಡಕ್ಟರ್‌ಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಫೆ.1ರಂದು ವಿಜಯಪಥ.ಇನ್‌ ಈ ಬಗ್ಗೆ ವಿವರವಾಗಿ ವರದಿ ಮಾಡಿತ್ತು. ಈ ವೇಳೆ ಎಲ್ಲ ಘಟಕಗಳಲ್ಲೂ ಒಂದೇ ನಿಯಮ. ಆದರೆ 20ನೇ ಘಟಕದಲ್ಲಿ ಮಾತ್ರ ಉಲ್ಟಾ ನಿಯಮ. ಯಾರದೋ ಮಾತು ಕೇಳಿ ನಿಯಮ ಮೀರಿ ನಡೆದುಕೊಳ್ಳುತ್ತಿದ್ದಾರ ಘಟಕ ಮಟ್ಟದ ಅಧಿಕಾರಿಗಳು ಎಂದು ಬ್ಲರ್ಬ್‌ಗಳನ್ನು ಹಾಕಿ ಘಟಕದಲ್ಲಿ ಆಗುತ್ತಿದ್ದ ಬೆಳವಣಿಗೆಯ ಬಗ್ಗೆ ಉನ್ನತ ಅಧಿಕಾರಿಗಳ ಗಮನ ಸೆಳೆಯಲು ಯತ್ನಿಸಿತ್ತು. ಅದು ಸಫಲ ಕೂಡ ಆಗಿದೆ.

ವರದಿಯಲ್ಲಿ ಏನಿತ್ತು? ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬನಶಂಕರಿಯಲ್ಲಿರುವ 20ನೇ ಘಟಕದಲ್ಲಿ ನಿರ್ವಾಹಕಿಯರಿಗೆ ಅನುಕೂಲ ಮಾಡಿಕೊಡುವ ಬದಲಿಗೆ ಅನಾನುಕೂಲ ಮಾಡುವ ಉದ್ದೇಶದಿಂದ ಕೌನ್ಸಿಲಿಂಗ್‌ನಲ್ಲಿ ಮಾರ್ಗಗಳ ಆಯ್ಕೆಯನ್ನು ಬ್ಲಾಕ್‌ ಮಾಡುವ ಮೂಲಕ ಇಷ್ಟಬಂದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅಧಿಕಾರಿಗಳು ತಡೆ ನೀಡಿದ್ದಾರೆ.

ಬಿಎಂಟಿಸಿ ನಿರ್ವಾಹಕಿಯರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಮಾರ್ಗಗಳ ಆಯ್ಕೆ ಮಾಡಿಕೊಳ್ಳುವ ಅದರಲ್ಲೂ ಸೇವಾ ಹಿರಿತನದ ಮೇರೆಗೆ ಸಂಸ್ಥೆ ಕೌನ್ಸಿಲಿಂಗ್‌ ಜಾರಿ ಮಾಡಿದೆ. ಹೀಗಾಗಿ ನಿಗಮದ ಎಲ್ಲ ಘಟಕಗಳಲ್ಲೂ ನಿರ್ವಾಹಕಿಯರಿಗೆ ಮೊದಲ ಆದ್ಯತೆ ನೀಡಿದೆ.

ಅದರಂತೆ ಸೇವಾ ಹಿರಿತನದ ಆಧಾರದ ಮೇರೆಗೆ ನಿರ್ವಾಹಕಿಯರು ತಮಗೆ ಇಷ್ಟವಾದ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ 20ನೇ ಘಟಕದಲ್ಲಿ ನಿರ್ವಾಹಕಿಯರಿಗೆ ಈ ರೀತಿ ಸೇವಾ ಹಿರಿತನದ ಮೇಲೆ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಮೊಟಕುಗೊಳಿಸಿ ಇಂತಿಷ್ಟೇ ಮಾರ್ಗಗಳಲ್ಲೇ ಆಯ್ಕೆ ಮಾಡಿಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಿ ಉಳಿದ ಮಾರ್ಗಗಳನ್ನು ನಿರ್ವಾಹಕರಿಗೆ ಅವರಿಗಿಷ್ಟ ಬಂದ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಿತ್ತು.

ಆದರೆ, ಈ ರೀತಿಯ ನಿಯಮ ಯಾವುದೇ ಘಟಕಗಳಲ್ಲೂ ಇಲ್ಲ. ಮೊದಲು ಮಹಿಳಾ ಕಂಡಕ್ಟರ್‌ಗಳು ಆಯ್ಕೆ ಮಾಡಿಕೊಂಡ ಬಳಿಕ ಪುರುಷ ಕಂಡಕ್ಟರ್‌ಗಳು ಉಳಿದ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ನಿಯಮವಿದ್ದು ಅದರಂತೆ ಎಲ್ಲ ಘಟಕಗಳಲ್ಲೂ ಕೌನ್ಸಿಲಿಂಗ್‌ನಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಅದು ಏಕೋ ಗೊತ್ತಿಲ್ಲ 20ನೇ ಘಟಕದಲ್ಲಿ ಮಾತ್ರ ಈ ನಿಯಮಕ್ಕೆ ವಿರುದ್ಧವಾದ ಷರತ್ತನ್ನು ಮಾಡಿಕೊಂಡು ಮಹಿಳಾ ಕಂಡಕ್ಟರ್‌ಗಳನ್ನು ಕಡೆಗಣಿಸುವ ನಿಟ್ಟಿನಲ್ಲಿ ಅದರಲ್ಲೂ 3+2 ಸೀಟುಗಳಿರುವ ವಾಹನಗಳು ಹೆಚ್ಚಾಗಿ ಓಡಾಡುವ ಮಾರ್ಗಗಳನ್ನೇ ನಿರ್ವಾಹಕಿಯರು ಆಯ್ಕೆ ಮಾಡಿಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಿ ನಾಳೆ ಫೆ.2ರಂದು ಕೌನ್ಸಿಲಿಂಗ್‌ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದರಿಂದ ಕರ್ತವ್ಯ ನಿರತ ಗರ್ಭಿಣಿಯರು ಮತ್ತು ಮಾಸಿಕ ಋತು ಸಮಯದಲ್ಲಿ ಪ್ರಕೃತಿದತ್ತವಾದ ಹೊಟ್ಟೆನೋವಿನಿಂದ ಬಳಲುವ ನಿರ್ವಾಹಕಿಯರಿಗೆ ತುಂಬ ಸಮಸ್ಯೆ ಆಗುತ್ತದೆ. ಇದಾವುದನ್ನು ಯೋಚಿಸದೆ ಈ ರೀತಿ ನಿರ್ವಾಹಕಿಯರಿಗೆ ಅನಾನುಕೂಲ ಆಗುವಂತ ಮಾರ್ಗಗಳನ್ನು ಮೀಸಲಿಟ್ಟಿರುವುದು ಸರಿಯಲ್ಲ ಎಂದು ಘಟಕದ ನಿರ್ವಾಹಕಿಯರು ಘಟಕ ವ್ಯವಸ್ಥಾಪಕರ ಬಳಿ ಅಳಲು ತೋಡಿಕೊಂಡಿದ್ದರ ಬಗ್ಗೆ ಸಮಗ್ರ ವರದಿಯನ್ನು ಬಿತ್ತರಿಸಲಾಗಿತ್ತು.

ಅಲ್ಲದೆ ಈ ಸಂಬಂಧ ನಾಳೆ (ಫೆ.2) ಡಿಎಂ ಅವರು ಈ ಹಿಂದೆ ಕೌನ್ಸಿಲಿಂಗ್‌ನಲ್ಲಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಇದ್ದ ನಿಯಮದಂತೆಯೇ ನಮಗಿಚ್ಛೆಗನುಗುಣವಾಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡದಿದ್ದರೆ ನಾವು ವಿಭಾಗೀಯ ನಿಯಂತ್ರಣಾಧಿಕಾರಿಗಳ ಬಳಿಗೇ ಹೋಗಿ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲಾಗುವುದು ಎಂದು ತಿಳಿಸಿದ್ದರು.

ಈ ಬಗ್ಗೆ ವಿಜಯಪಥ.ಇನ್‌ ಸಮಗ್ರವಾದ ವರದಿ ಮಾಡಿತ್ತು. ಈ ವರದಿಯಿಂದ ಎಚ್ಚೆತ್ತ ನಿಗಮದ ಮೇಲಧಿಕಾರಿಗಳು ಇತರ ಘಟಕಗಳಲ್ಲಿ ಯಾವರೀತಿ ಡ್ಯೂಟಿ ರೋಟಾಗೆ ಆಯ್ಕೆ ಮಾಡಲಾಗಿದೆಯೋ ಅದೇ ರೀತಿ ನೀವು ಮಾಡಬೇಕು ಎಂದು 20ನೇ ಘಟಕದ ಅಧಿಕಾರಿಗಳಿಗೆ ಆದೇಶ ಮಾಡಿದ್ದರಿಂದ ಮಹಿಳಾ ನೌಕರರಿಗೆ ಸೇವಾ ಹಿರಿತನದ ಆಧಾರ ಮೇರೆಗೆ ಡ್ಯೂಟಿ ರೋಟ ಆಯ್ಕೆ ಮಾಡಿಕೊಳ್ಳುವುದಕ್ಕೆ ಘಟಕದ ವುವಸ್ಥಾಪಕರು ಅವಕಾಶ ಮಾಡಿಕೊಟ್ಟರು.

ವಿಜಯಪಥ.ಇನ್‌ ನಲ್ಲಿ ವರದಿ ಬಂದಿದ್ದರಿಂದ ನಮಗೆ ಈ ಹಿಂದೆ ಇದ್ದ ನಿಯಮದಂತೆ ನಾವು ಡ್ಯೂಟಿ ರೋಟಾದಲ್ಲಿ ನಮಗಿಚ್ಛೆ ಬಂದ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಯಿತು. ಹೀಗಾಗಿ ವಿಜಯಪಥ.ಇನ್‌ಗೆ ನಾವು ಹೃತ್ಪೂರ್ವಕ ಅಭಿನಂದನೆಯನ್ನು ತಿಳಿಸುತ್ತಿದ್ದೇವೆ ಎಂದು ಖುಷಿ ಹಂಚಿಕೊಂಡಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ