NEWSಕೃಷಿನಮ್ಮರಾಜ್ಯ

ಸಿಎಂ ಸ್ವಕ್ಷೇತ್ರ ರಂಗಸಮುದ್ರ ಸ್ಮಶಾನ ಭೂಮಿ ಮೇಲು ಬಿದ್ದ ವಕ್ಫ್‌ ಕಣ್ಣು- ಪಹಣಿಯಲ್ಲಿ 2021-22ರಿಂದ ವಕ್ಫ್‌ ಬೋರ್ಡ್ ಹೆಸರು

ವಿಜಯಪಥ ಸಮಗ್ರ ಸುದ್ದಿ

ತಿ.ನರಸೀಪುರ: ಕರ್ನಾಟಕದಲ್ಲಿ ವಕ್ಫ್‌ ಬೋರ್ಡ್​ (Karnataka Waqf Board) ಆಸ್ತಿ ವಿಚಾರವಾಗಿ ಚರ್ಚೆ ಜೋರಾಗಿದೆ. ಈ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ವಕ್ಷೇತ್ರದಲ್ಲೇ 19 ಗುಂಟೆ ಸ್ಮಶಾನ- ಕಪನಯ್ಯನ ತೋಪು ಜಮೀನಿನ ಪಹಣಿಯಲ್ಲಿ ವಕ್ಫ್‌ ಬೋರ್ಡ್​ ಹೆಸರು ಸೇರ್ಪಡೆಯಾಗಿದೆ.

19 ಗುಂಟೆ ಜಮೀನು ಈಗ ವಕ್ಫ್‌​ ಆಸ್ತಿಯಾಗಿದೆ. ಇದು 2021-22ನೇ ಸಾಲಿನಿಂದ ವಕ್ಫ್‌ ಬೋರ್ಡ್​ ಹೆಸರು ಆರ್‌ಟಿಸಿಯಲ್ಲಿ ಬಂದಿದೆ. ಇದಕ್ಕೂ ಹಿಂದೆ ಕಪನಯ್ಯನ ತೋಪು ಎಂದೇ ಇದೆ. ನೋಡಿ ಸಿಎಂ ಸ್ವಕ್ಷೇತ್ರದಲ್ಲೇ ಹಾಗೂ ಸಮಾಜ ಕಲ್ಯಾಣ ಸಚಿವರ ತಾಲೂಕಿನಲ್ಲೇ ಈ ರೀತಿ ಅಕ್ರಮ ನಡೆಯುತ್ತಿದೆ.

ಸದ್ಯ ಈ ಸ್ಮಶಾನ ಭೂಮಿಯಲ್ಲಿ ಪ್ರಸ್ತುತ ಬಡ ರೈತರೊಬ್ಬರು ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಕಾರಣ ರಂಗಸಮುದ್ರ ಗ್ರಾಮಸ್ಥರು ಗ್ರಾಮಕ್ಕೆ ಸಮೀಪದಲ್ಲೇ ಸ್ಮಶಾನ ಮಾಡಿಕೊಂಡಿರುವುದರಿಂದ ಈಗ ಅಲ್ಲಿ ಯಾವುದೇ ಅಂತ್ಯಕ್ರಿಯೆ ಮಾಡುತ್ತಿಲ್ಲ. ಹೀಗಾಗಿ ಗ್ರಾಮಸ್ಥರೆ ಆ ಬಡ ರೈತನಿಗೆ ಸ್ಮಶಾನವನ್ನು ಬಿಟ್ಟುಕೊಟ್ಟಿದ್ದಾರೆ.

ಇನ್ನು ದಶಕಗಳ ಹಿಂದಕ್ಕೆ ಹೋದರೆ ಕಪನಯ್ಯ ಎಂಬುವರು ಸ್ಮಶಾನಕ್ಕೆ ಈ ಭೂಮಿಯನ್ನು ದಾನವಾಗಿ ನಿಡ್ಡಿದ್ದರು ಎಂದು ಗ್ರಾಮದ ಸುರೇಶ್‌ ಎಂಬುವರು ವಿಜಯಪಥಕ್ಕೆ ಮಾಹಿತಿ ನೀಡಿದರು. ಆದರೆ, ಇದು ಈಗ ಕಪನಯ್ಯನ ತೋಪು ವಕ್ಫ್‌ ಬೋರ್ಡ್​ ಆಗಿರುವುದು ಭಾರಿ ಅಚ್ಚರಿಯಾಗುತ್ತಿದೆ ಎಂದು ಹೇಳಿದ್ದಾರೆ.

2021-22ರ ನಂತರ ಏಕಾಏಕಿ ವಕ್ಫ ಬೋರ್ಡ್ ಹೆಸರಿಗೆ ಬದಲಾಗಿದೆ. ಯಾವುದೇ ನೋಟೀಸ್ ನೀಡದೆ ಜಮೀನನ್ನು ಮೋಸದಿಂದ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಹೀಗಾಗಿ ನ್ಯಾಯಬೇಕು ಅಂತ ಗ್ರಾಮಸ್ಥರು ಹೋರಾಟ ನಡೆಸಲು ಮುಂದಾಗಿದ್ದಾರೆ.

ಜಿಲ್ಲೆಯ ಸಾಕಷ್ಟ ಜಮೀನು ವಕ್ಫ ಬೋರ್ಡ್ ಹೆಸರಿಗೆ ಆಗಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಈ ರೀತಿ ಆಗುತ್ತಿದೆ. ಹೀಗಾಗಿ ಕೂಡಲೆ ಸರ್ಕಾರ ರೈತರಿಗೆ ನ್ಯಾಯ ಕೊಡುವ ಕೆಲಸ ಮಾಡಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಮೈಸೂರು ಜಿಲ್ಲೆಯಲ್ಲಿ ವಕ್ಫ ಬೋರ್ಡ್​ನ ರಾದಂತ ಬಯಲಾಗುತ್ತಿದೆ. ರೈತರು ತಮ್ಮ ಜಮೀನು ದಶಮಾನಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಈಗ ವಕ್ಫ ಬೋರ್ಡ್ ಪಹಣಿಯಲ್ಲಿ ತನ್ನ ಹೆಸರು ಸೇರುತ್ತಿರುವುದರಿಂದ ರೈತರಿಗೆ ಆತಂಕ ಎದುರಾಗಿದೆ. ಹೀಗಾಗಿ ಕೂಡಲೆ ಸರ್ಕಾರ ಆಗಿರುವ ಗೊಂದಲಗಳನ್ನು ತಿಳಿಗೊಳಿಸುವ ಕೆಲಸ ಮಾಡಬೇಕು ಎಂದು ದೇವರಾಜು ಒತ್ತಾಯಿಸಿದ್ದಾರೆ.

 

Leave a Reply

error: Content is protected !!
LATEST
KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ! ಚೆಂಡು ಹೂವಿನ ಬೆಲೆ ತೀವ್ರ ಕುಸಿತ- ರಸ್ತೆ ಬದಿ ಹೂ ಸುರಿದು ಬೆಳೆಗಾರ ರೈತರ ಅಕ್ರೋಶ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಿ: ತುಷಾರ್ ಗಿರಿನಾಥ್ ನಲ್‌ಜಲ್ ಮಿತ್ರ ತರಬೇತಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅನುರಾಧ ಚಾಲನೆ