ಸಾರಿಗೆ ನೌಕರರಿಗಾಗಿ ಒಗ್ಗಟ್ಟಾಗಬೇಕು- ಅದನ್ನು ಬಿಟ್ಟು ನೌಕರರ ದಾರಿ ತಪ್ಪಿಸಬೇಡಿ- ಕಂಡಕ್ಟರ್ ಜಯಂತ್ ಮರ್ಗಿ ಮನವಿ
ಬೆಂಗಳೂರು: ಸರ್ಕಾರಿ ನೌಕರರು ವೇತನ ಹೆಚ್ಚಳ ಸಂಬಂಧ ಹೋರಾಟ ಮಾಡಿ ವರ್ಗಾವಣೆ, ಅಮಾನತು ಮತ್ತು ವಜಾ ಹಾಗೂ ಪೊಲೀಸ್ ಕೇಸ್ ಹಾಕಿಸಿಕೊಂಡಿರುವುದು ಇತಿಹಾಸದಲ್ಲೇ ಇಲ್ಲ. ಆದರೆ ಹೋರಾಟದ ಹೆಸರಿನಲ್ಲಿ ಸಾರಿಗೆ ನೌಕರರು ಈ ಎಲ್ಲ ಸಮಸ್ಯೆ ಅನುಭವಿಸಿದ್ದಾರೆ. ಇದಕ್ಕೆ ಕಾರಣರಾರು ಅನಂತ ಸುಬ್ಬರಾಯರೇ?

ಈ ರೀತಿ ಪ್ರಶ್ನೆ ಕೇಳುತ್ತಿರುವುದು ಬೇರೆ ಯಾರು ಅಲ್ಲ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 1.15 ಲಕ್ಷ ನೌಕರರು. ಈ ಎಲ್ಲರ ಪರವಾಗಿ ಇಂದು ಕಂಡಕ್ಟರ್ ಜಯಂತ್ ಮರ್ಗಿ ಎಂಬುವರು ಒಂದು ವಿಡಿಯೋ ಮಾಡಿದ್ದು, ಆ ಮೂಲಕ ಜಂಟಿ ಸಂಘಟನೆಯ ಮುಖಂಡರಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.
ಅದರಲ್ಲೂ ಮುಖ್ಯವಾಗಿ ಜಂಟಿ ಕ್ರಿಯಾ ಸಮಿತಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಅನಂತ ಸುಬ್ಬರಾವ್ ಅವರಿಗೆ ನೇರವಾಗಿ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.
ನೌಕರರು ಈವರೆಗೂ ಅನುಭವಿಸಿದ ಕಷ್ಟಸಾಕು ಇನ್ನು ಮುಂದಾದರು ಅವರಿಗೆ ಒಳ್ಳೆ ಜೀವನ ಮಾಡುವುದಕ್ಕೆ ಬೇಕಾದ ಸೌಲಭ್ಯಗಳನ್ನು ಕೊಡಿಸಿಕೊಡುವ ಮನಸ್ಸಿದ್ದರೆ ಮೊದಲು ಒಗ್ಗಟ್ಟಾಗಿ ಎಂದು ಮನವಿ ಮಾಡಿದ್ದಾರೆ.
ಅಲ್ಲದೆ ಹೋರಾಟದ ಹೆಸರಿನಲ್ಲಿ ಮುಗ್ದ ನೌಕರರ ಕೆಲಸವನ್ನು ಕಿತ್ತುಕೊಳ್ಳುವ ನಡೆಗೆ ಮುಂದಾಗದಿರಿ. ಈವರೆಗೂ ಹಲವಾರು ನೌಕರರು ಹೋರಾಟದ ಹೆಸರಿನಲ್ಲಿ ಬೀಗಿಗೆ ಬಿದ್ದಿದ್ದು ಮತ್ತೆ ಸಂಸ್ಥೆಗೆ ಬರಲ ಸಾಧ್ಯವೇ ಆಗದೆ ಅವರ ಕುಟುಂಬ ಜೀವನ ಸಾಗಿಸುವುದಕ್ಕೆ ಭಾರಿ ಕಷ್ಟಪಡುತ್ತಿದೆ.
ಹೀಗಾಗಿ ನಿಮ್ಮ ಹೋರಾಟದ ಹೆಸರಿನಲ್ಲಿ ಇಂದು ಸೇವೆಯಲ್ಲಿರುವ ನೌಕರರ ಹುರಿದುಂಬಿಸಿ ಆ ಉತ್ಸಾಹದಲ್ಲಿ ಹೋರಾಟಕ್ಕೆ ಇಳಿಯುವ ನೌಕರರು ವೃತ್ತಿ ಕಳೆದುಕೊಂಡು ಕಟುಂಬದವರಿಂದ ದೂರವಾಗಿರುವುದು ನಮ್ಮ ಎದುರಿಗಿದೆ ಮತ್ತೆ ಅಂಥ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಇನ್ನು ಹೋರಾಟ ಮಾಡುವುದು ಅನಿವಾರ್ಯವಾಗಿದ್ದು ಅದಕ್ಕೆ ಎಲ್ಲರೂ ಒಗ್ಗಟ್ಟಾಗಿ ಬನ್ನಿ ಇದರಿಂದ ಯಾವುದೇ ಒಬ್ಬ ನೌಕರನಿಗೂ ಸಮಸ್ಯೆ ಆಗಬಾರದು ಆ ರೀತಿ ಯೋಚಿಸಿ ಬನ್ನಿ ಎಂದು ಮನವಿ ಮಾಡಿದ್ದಾರೆ.
Related












