NEWSVideosನಮ್ಮರಾಜ್ಯ

ಸಾರಿಗೆ ನೌಕರರಿಗಾಗಿ ಒಗ್ಗಟ್ಟಾಗಬೇಕು- ಅದನ್ನು ಬಿಟ್ಟು ನೌಕರರ ದಾರಿ ತಪ್ಪಿಸಬೇಡಿ- ಕಂಡಕ್ಟರ್‌ ಜಯಂತ್‌ ಮರ್ಗಿ ಮನವಿ

ನೊಂದವರಿಗೆ ಹೆಗಲು

ಬೆಂಗಳೂರು: ಸರ್ಕಾರಿ ನೌಕರರು ವೇತನ ಹೆಚ್ಚಳ ಸಂಬಂಧ ಹೋರಾಟ ಮಾಡಿ ವರ್ಗಾವಣೆ, ಅಮಾನತು ಮತ್ತು ವಜಾ ಹಾಗೂ ಪೊಲೀಸ್‌ ಕೇಸ್‌ ಹಾಕಿಸಿಕೊಂಡಿರುವುದು ಇತಿಹಾಸದಲ್ಲೇ ಇಲ್ಲ. ಆದರೆ ಹೋರಾಟದ ಹೆಸರಿನಲ್ಲಿ ಸಾರಿಗೆ ನೌಕರರು ಈ ಎಲ್ಲ ಸಮಸ್ಯೆ ಅನುಭವಿಸಿದ್ದಾರೆ. ಇದಕ್ಕೆ ಕಾರಣರಾರು ಅನಂತ ಸುಬ್ಬರಾಯರೇ?

ಈ ರೀತಿ ಪ್ರಶ್ನೆ ಕೇಳುತ್ತಿರುವುದು ಬೇರೆ ಯಾರು ಅಲ್ಲ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 1.15 ಲಕ್ಷ ನೌಕರರು. ಈ ಎಲ್ಲರ ಪರವಾಗಿ ಇಂದು ಕಂಡಕ್ಟರ್‌ ಜಯಂತ್‌ ಮರ್ಗಿ ಎಂಬುವರು ಒಂದು ವಿಡಿಯೋ ಮಾಡಿದ್ದು, ಆ ಮೂಲಕ ಜಂಟಿ ಸಂಘಟನೆಯ ಮುಖಂಡರಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.

ಅದರಲ್ಲೂ ಮುಖ್ಯವಾಗಿ  ಜಂಟಿ ಕ್ರಿಯಾ ಸಮಿತಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಅನಂತ ಸುಬ್ಬರಾವ್‌ ಅವರಿಗೆ ನೇರವಾಗಿ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.

ನೌಕರರು ಈವರೆಗೂ ಅನುಭವಿಸಿದ ಕಷ್ಟಸಾಕು ಇನ್ನು ಮುಂದಾದರು ಅವರಿಗೆ ಒಳ್ಳೆ ಜೀವನ ಮಾಡುವುದಕ್ಕೆ ಬೇಕಾದ ಸೌಲಭ್ಯಗಳನ್ನು ಕೊಡಿಸಿಕೊಡುವ ಮನಸ್ಸಿದ್ದರೆ ಮೊದಲು ಒಗ್ಗಟ್ಟಾಗಿ ಎಂದು ಮನವಿ ಮಾಡಿದ್ದಾರೆ.

ಅಲ್ಲದೆ ಹೋರಾಟದ ಹೆಸರಿನಲ್ಲಿ ಮುಗ್ದ ನೌಕರರ ಕೆಲಸವನ್ನು ಕಿತ್ತುಕೊಳ್ಳುವ ನಡೆಗೆ ಮುಂದಾಗದಿರಿ. ಈವರೆಗೂ ಹಲವಾರು ನೌಕರರು ಹೋರಾಟದ ಹೆಸರಿನಲ್ಲಿ ಬೀಗಿಗೆ ಬಿದ್ದಿದ್ದು ಮತ್ತೆ ಸಂಸ್ಥೆಗೆ ಬರಲ ಸಾಧ್ಯವೇ ಆಗದೆ ಅವರ ಕುಟುಂಬ ಜೀವನ ಸಾಗಿಸುವುದಕ್ಕೆ ಭಾರಿ ಕಷ್ಟಪಡುತ್ತಿದೆ.

ಹೀಗಾಗಿ ನಿಮ್ಮ ಹೋರಾಟದ ಹೆಸರಿನಲ್ಲಿ ಇಂದು ಸೇವೆಯಲ್ಲಿರುವ ನೌಕರರ ಹುರಿದುಂಬಿಸಿ ಆ ಉತ್ಸಾಹದಲ್ಲಿ ಹೋರಾಟಕ್ಕೆ ಇಳಿಯುವ ನೌಕರರು ವೃತ್ತಿ ಕಳೆದುಕೊಂಡು ಕಟುಂಬದವರಿಂದ ದೂರವಾಗಿರುವುದು ನಮ್ಮ ಎದುರಿಗಿದೆ ಮತ್ತೆ ಅಂಥ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಇನ್ನು ಹೋರಾಟ ಮಾಡುವುದು ಅನಿವಾರ್ಯವಾಗಿದ್ದು ಅದಕ್ಕೆ ಎಲ್ಲರೂ ಒಗ್ಗಟ್ಟಾಗಿ ಬನ್ನಿ ಇದರಿಂದ ಯಾವುದೇ ಒಬ್ಬ ನೌಕರನಿಗೂ ಸಮಸ್ಯೆ ಆಗಬಾರದು ಆ ರೀತಿ ಯೋಚಿಸಿ ಬನ್ನಿ ಎಂದು ಮನವಿ ಮಾಡಿದ್ದಾರೆ.

Megha
the authorMegha

Leave a Reply

error: Content is protected !!
Latest news
ಗೃಹ ಜ್ಯೋತಿಗೆ ಜಾತಿ ವಿವರ ನೀಡುವುದು ಕಡ್ಡಾಯವಲ್ಲ: ಸ್ಪಷ್ಟನೆ ನೀಡಿದ ಬೆಸ್ಕಾಂ 4ಸಾರಿಗೆ ನಿಗಮಗಳ ನೌಕರರಿಗೆ ಶೇ.12.5ರಷ್ಟು ಮೂಲ ವೇತನ ಹೆಚ್ಚಳ ಜುಲೈ ವೇತನದಲ್ಲಿ ಅನುಷ್ಠಾನ: KSRTC ಎಂಡಿ ಅಧಿಕೃತ ಆದೇಶ ಹೊಸ EPS ಪಿಂಚಣಿ ಯೋಜನೆ ಜಾರಿ: ಕನಿಷ್ಠ ಪಿಂಚಣಿ 7500ರೂ. ನಿರೀಕ್ಷೆಯಲ್ಲಿದ್ದ ನೌಕರರಿಗೆ ನಿರಾಸೆ- ಸಿಕ್ಕಿದ್ದು ಅದೇ ಒಂ... ಬಾಡಿಗೆದಾರರಿಗೆ ಗೃಹಜ್ಯೋತಿ' ತಂದ ಟೆನ್ಷನ್​: ಇನ್ನು ಮುಂದೆ ಸಿಗಲ್ವಾ ಫ್ರೀ ಕರೆಂಟ್‌? ಜುಲೈ: ಕರೆಂಟ್‌ ಮೀಟರ್ ರೀಡಿಂಗ್ ಇರಲ್ಲ -ಸರಾಸರಿ ಬಿಲ್‌ SMS ಮೂಲಕ ಬರುತ್ತದೆ! KSRTC: 'ಸಾರಿಗೆ ಮಿತ್ರ' ಆಪ್ ದುರುಪಯೋಗ- ಕರ್ತವ್ಯಕ್ಕೆ ಹಾಜರಾಗದೆ ಸಹೋದ್ಯೋಗಿಗೆ ಫೋನ್‌ ಕೊಟ್ಟು ಹಾಜರಿ ಪಡೆಯುತ್ತಿರುವ... ಸಾರಿಗೆ ನೌಕರರಿಗೆ ಸಮಾನ ವೇತನ ಸೇರಿದಂತೆ 3 ಬೇಡಿಕೆಗಳ ಈಡೇರಿಕೆಗೆ ಕೂಟ ಒತ್ತಾಯ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್‌ಗೆ ಮ... ಗುಟ್ಕಾ ಉಗಿಯಲು ಬಗ್ಗಿದ ವಿದ್ಯಾರ್ಥಿ ತಲೆಗೆ ಬಡಿದ ಟಿಪ್ಪರ್: ಕ್ಷಣಾರ್ಧದಲ್ಲೇ ರುಂಡ ಕಟ್‌, ಬಸ್ಸಿನಲ್ಲಿ ನೇತಾಡಿದ ಮುಂಡ... KSRTC: ನೌಕರರ ಹೆಚ್ಚಳದ ಶೇ.12.5ರಷ್ಟು ವೇತನ ಜುಲೈ ಅಂದರೆ ಈ ತಿಂಗಳ ವೇತನದಲ್ಲಿ ಅನುಷ್ಠಾನ- ಆಗಸ್ಟ್‌ನಲ್ಲಿ ಎಲ್ಲರ ಖಾತ... NWKRTC: ವಿದ್ಯಾರ್ಥಿಗಳ ಮನವಿ ಪರಿಗಣಿಸಿ ನೂತನ ಬಸ್ ಸೇವೆಗೆ ಚಾಲನೆ- ನಿಗಮದ ಉಪಾಧ್ಯಕ್ಷ ಸುನೀಲ್ ಜೆ. ಹಣಮನ್ನವರ