NEWSನಮ್ಮರಾಜ್ಯ

ಹೊಸ EPS ಪಿಂಚಣಿ ಯೋಜನೆ ಜಾರಿ: ಕನಿಷ್ಠ ಪಿಂಚಣಿ 7500ರೂ. ನಿರೀಕ್ಷೆಯಲ್ಲಿದ್ದ ನೌಕರರಿಗೆ ನಿರಾಸೆ- ಸಿಕ್ಕಿದ್ದು ಅದೇ ಒಂದು!

ಹೊಸ ಪಿಂಚಣಿ ಯೋಜನೆಯಲ್ಲಿ ಹಣದ ಮೊತ್ತ ಹೆಚ್ಚಾಗದಿದ್ದರೂ, ಆಡಳಿತಾತ್ಮಕವಾಗಿ ದೊಡ್ಡ ಸುಧಾರಣೆ ತರಲಾಗಿದೆ. ಈ ಹಿಂದೆ ನಿವೃತ್ತಿಯ ನಂತರ ಪಿಂಚಣಿ ಹಣ ಕೈ ಸೇರಲು ನೌಕರರು ತಿಂಗಳುಗಟ್ಟಲೆ ಕಾಯಬೇಕಿತ್ತು. ಆದರೆ ಇಪಿಎಸ್ 2026ರ ಅಡಿಯಲ್ಲಿ, ಕ್ಲೈಮ್ ಮಾಡಿದ ಕೇವಲ 20 ದಿನಗಳಲ್ಲಿ ಪಿಂಚಣಿ ಮಂಜೂರು ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ನೊಂದವರಿಗೆ ಹೆಗಲು

ನ್ಯೂಡೆಲ್ಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ EPS ಪೆನ್ಷನ್ ಯೋಜನೆ 2026 ದೀರ್ಘಕಾಲದಿಂದ ಮಾಸಿಕ ಕನಿಷ್ಠ ಪಿಂಚಣಿ 7,500 ರೂ.ಗೆ ಏರಿಸಬೇಕು ಎಂದು ಕಾಯುತ್ತಿದ್ದ ನೌಕರರಿಗೆ ತೀವ್ರ ನಿರಾಸೆ ಮೂಡಿಸಿದೆ.

ಹೊಸ ನಿಯಮಗಳಲ್ಲೂ ಕನಿಷ್ಠ ಪಿಂಚಣಿಯನ್ನು 1,000 ರೂ.ಗಳಷ್ಟೇ ಮುಂದುವರಿಸಲಾಗಿದ್ದು, ಲೆಕ್ಕಾಚಾರದ ಸೂತ್ರದಲ್ಲೂ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ, ಪೆನ್ಷನ್ ಕ್ಲೈಮ್‌ಗಳನ್ನು ಕೇವಲ 20 ದಿನಗಳಲ್ಲಿ ಇತ್ಯರ್ಥಪಡಿಸುವ ಕಡ್ಡಾಯ ನಿಯಮ ತರಲಾಗಿದ್ದು, ಈ ಬಗ್ಗೆ ಪೂರ್ಣ ವರದಿ ಇಲ್ಲಿದೆ.

ಕೇಂದ್ರ ಸರ್ಕಾರವು ನೌಕರರ ಭವಿಷ್ಯ ನಿಧಿ ಸಂಸ್ಥೆಗೆ (EPFO) ಸಂಬಂಧಿಸಿದಂತೆ ಮೂರು ಹೊಸ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರಲ್ಲಿ ಅತ್ಯಂತ ಪ್ರಮುಖವಾದ ‘ಉದ್ಯೋಗಿಗಳ ಪಿಂಚಣಿ ಯೋಜನೆ (EPS) 2026’ ಸಹ ಒಳಗೊಂಡಿದೆ. ದಶಕಗಳಷ್ಟು ಹಳೆಯದಾದ ಇಪಿಎಸ್ 1995 ಮತ್ತು ಇಪಿಎಸ್ 1971 ರ ಸ್ಥಾನದಲ್ಲಿ ಈ ಹೊಸ ನಿಯಮಾವಳಿಗಳನ್ನು ತರಲಾಗಿದೆ.

ಈ ಹೊಸ ಪೆನ್ಷನ್ ಯೋಜನೆ ಜಾರಿಗೆ ಬರುತ್ತಿದ್ದಂತೆಯೇ, ದೀರ್ಘಕಾಲದಿಂದ ಮಾಸಿಕ ಕನಿಷ್ಠ ಪಿಂಚಣಿ 7,500 ರೂ.ಗಳಿಗೆ ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದ ಕೋಟ್ಯಂತರ ನೌಕರರಲ್ಲಿ ಭಾರಿ ನಿರೀಕ್ಷೆಗಳು ಮೂಡಿದ್ದವು. ಆದರೆ, ಕೇಂದ್ರ ಕಾರ್ಮಿಕ ಸಚಿವಾಲಯ ಹೊರಡಿಸಿರುವ ಇತ್ತೀಚಿನ ಅಧಿಕೃತ ಅಧಿಸೂಚನೆಯು ನೌಕರರ ಈ ಆಸೆಗೆ ತಣ್ಣೀರೆರಚಿದೆ.

ಇನ್ನು ಹೊಸ ಯೋಜನೆಯಡಿ ಬದಲಾಗಿರುವ ನಿಯಮಗಳು ಮತ್ತು ಬದಲಾಗದೆ ಉಳಿದಿರುವ ಅಂಶಗಳು ಏನು ಎಂಬುದರ ಬಗ್ಗೆ ನೋಡುವುದಾದರೆ. ಕಳೆದ 2014ರ ಸೆಪ್ಟೆಂಬರ್ 1ರಿಂದ ಜಾರಿಯಲ್ಲಿರುವಂತೆ ಇಪಿಎಸ್ ಅಡಿಯಲ್ಲಿ ಮಾಸಿಕ ಕನಿಷ್ಠ ಪಿಂಚಣಿಯನ್ನು ಕೇವಲ 1,000 ರೂ.ಗಳಾಗಿ ನಿಗದಿಪಡಿಸಲಾಗಿದೆ.

ಸದ್ಯದ ಹಣದುಬ್ಬರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ದಿನಗಳಲ್ಲಿ ಈ 1 ಸಾವಿರ ರೂ. ಪಿಂಚಣಿಯು ಕನಿಷ್ಠ ವೈದ್ಯಕೀಯ ವೆಚ್ಚಗಳಿಗೂ ಸಾಲುತ್ತಿಲ್ಲ ಎಂದು ನಿವೃತ್ತ ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಇದನ್ನು 7,500 ರೂ.ಗಳಿಗೆ ಹೆಚ್ಚಿಸಬೇಕೆಂಬ ಬಲವಾದ ಬೇಡಿಕೆ ಇತ್ತು. ಆದರೆ, ಕೇಂದ್ರ ಸರ್ಕಾರವು ಹೊಸ ‘ಇಪಿಎಸ್ 2026’ ನಿಯಮಗಳಲ್ಲೂ ಕನಿಷ್ಠ ಪಿಂಚಣಿ 1 ಸಾವಿರ ರೂ.ಗಳಷ್ಟೇ ಮುಂದುವರಿಸಿದೆ.

ಹೊಸ ಯೋಜನೆಯಲ್ಲೂ ಪಿಂಚಣಿ ಮೊತ್ತವನ್ನು ಲೆಕ್ಕ ಹಾಕುವ ಹಳೆಯ ಫಾರ್ಮುಲಾವನ್ನೇ ಯಥಾವತ್ತಾಗಿ ಮುಂದುವರಿಸಲಾಗಿದೆ. ಇಲ್ಲಿ ‘ಪಿಂಚಣಿಗೆ ಅರ್ಹವಾದ ಸರಾಸರಿ ಸಂಬಳ’ ಎಂದರೆ ನೌಕರನು ನಿವೃತ್ತಿ ಹೊಂದುವ ಮುನ್ನ ಕೊನೆಯ 60 ತಿಂಗಳುಗಳಲ್ಲಿ (5 ವರ್ಷಗಳು) ಪಡೆದ ಸರಾಸರಿ ಮೂಲ ವೇತನ ಮತ್ತು ತುಟ್ಟಿಭತ್ಯೆಯಾಗಿದೆ (Basic + DA).

ಹೊಸ ಪಿಂಚಣಿ ಯೋಜನೆಯ ಪ್ರಮುಖ ಮುಖ್ಯಾಂಶಗಳು ಯಾವುವು ಎಂದು ನೋಡುವುದಾದರೆ. ಮಾಸಿಕ ಕನಿಷ್ಠ ಪಿಂಚಣಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹಳೆಯ 1,000 ರೂ.ಗಳಷ್ಟೇ ಮುಂದುವರಿಕೆ ಮಾಡುವ ಮೂಲಕ ನೌಕರರಲ್ಲಿ ಭಾರಿ ನಿರಾಸೆ ಮೂಡಿಸಿದೆ ಕೇಂದ್ರ ಸರ್ಕಾರ.

ಅನ್ವಯಿಸುವಿಕೆ: ಇಪಿಎಫ್ 2026 ರ ಎಲ್ಲ ಹೊಸ ಸದಸ್ಯರು ಹಾಗೂ ಹಳೆಯ ಇಪಿಎಸ್ 1995/1971ರ ಸದಸ್ಯರಿಗೂ ಅನ್ವಯ.

ಪಿಂಚಣಿ ಕ್ಲೈಮ್ ಸೆಟಲ್ಮೆಂಟ್: ಹೊಸ ನಿಯಮದಂತೆ ಕೇವಲ 20 ದಿನಗಳ ಒಳಗೆ ಪೆನ್ಷನ್ ವಿಲೇವಾರಿ ಮಾಡಬೇಕು.

ವಿಳಂಬಕ್ಕೆ ದಂಡ : ಇಪಿಎಫ್‌ಒ ಅಧಿಕಾರಿಗಳು 20 ದಿನ ಮೀರಿದರೆ, ನೌಕರನಿಗೆ  ದಂಡದ ರೂಪದಲ್ಲಿ ಶೇ. 12 ರಷ್ಟು ಬಡ್ಡಿ ಸೇರಿಸಿ ಹಣ ನೀಡಬೇಕು.

ಹಳೆಯ ಪಿಂಚಣಿದಾರರು: ಈಗಾಗಲೇ ಪಿಂಚಣಿ ಪಡೆಯುತ್ತಿರುವವರಿಗೆ ಯಾವುದೇ ತೊಂದರೆ ಇಲ್ಲ, ಯಥಾಸ್ಥಿತಿ ಮುಂದುವರಿಯುತ್ತದೆ.

10 ವರ್ಷಕ್ಕಿಂತ ಕಡಿಮೆ ಸೇವೆ: 10 ವರ್ಷಕ್ಕಿಂತ ಕಡಿಮೆ ಕೆಲಸ ಮಾಡಿದವರು ಎಂದಿನಂತೆ ತಮ್ಮ ಇಪಿಎಸ್ ಹಣವನ್ನು ಹಿಂಪಡೆಯಬಹುದು (Withdrawal).

ನೌಕರರಿಗೆ ಸಿಕ್ಕಿರುವ ಏಕೈಕ ಸಮಾಧಾನಕರ ಬದಲಾವಣೆ: ಹೊಸ ಪಿಂಚಣಿ ಯೋಜನೆಯಲ್ಲಿ ಹಣದ ಮೊತ್ತ ಹೆಚ್ಚಾಗದಿದ್ದರೂ, ಆಡಳಿತಾತ್ಮಕವಾಗಿ ದೊಡ್ಡ ಸುಧಾರಣೆ ತರಲಾಗಿದೆ. ಈ ಹಿಂದೆ ನಿವೃತ್ತಿಯ ನಂತರ ಪಿಂಚಣಿ ಹಣ ಕೈ ಸೇರಲು ನೌಕರರು ತಿಂಗಳುಗಟ್ಟಲೆ ಕಾಯಬೇಕಿತ್ತು. ಆದರೆ ಇಪಿಎಸ್ 2026ರ ಅಡಿಯಲ್ಲಿ, ಕ್ಲೈಮ್ ಮಾಡಿದ ಕೇವಲ 20 ದಿನಗಳಲ್ಲಿ ಪಿಂಚಣಿ ಮಂಜೂರು ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಇನ್ನು ಒಂದು ವೇಳೆ ನಿಗದಿತ ಅವಧಿಯಲ್ಲಿ ಇಪಿಎಫ್‌ಒ (EPFO) ಕಚೇರಿ ಪ್ರಕ್ರಿಯೆ ಮುಗಿಸದಿದ್ದರೆ, ವಿಳಂಬ ಅವಧಿಗೆ ಶೇ.12 ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ನೌಕರನಿಗೆ ಪರಿಹಾರ ಪಾವತಿಸಬೇಕು ಸ್ಪಷ್ಟವಾಗಿ ತಿಳಿಸಿದೆ.

Deva
the authorDeva

Leave a Reply

error: Content is protected !!
Latest news
ಗೃಹ ಜ್ಯೋತಿಗೆ ಜಾತಿ ವಿವರ ನೀಡುವುದು ಕಡ್ಡಾಯವಲ್ಲ: ಸ್ಪಷ್ಟನೆ ನೀಡಿದ ಬೆಸ್ಕಾಂ 4ಸಾರಿಗೆ ನಿಗಮಗಳ ನೌಕರರಿಗೆ ಶೇ.12.5ರಷ್ಟು ಮೂಲ ವೇತನ ಹೆಚ್ಚಳ ಜುಲೈ ವೇತನದಲ್ಲಿ ಅನುಷ್ಠಾನ: KSRTC ಎಂಡಿ ಅಧಿಕೃತ ಆದೇಶ ಹೊಸ EPS ಪಿಂಚಣಿ ಯೋಜನೆ ಜಾರಿ: ಕನಿಷ್ಠ ಪಿಂಚಣಿ 7500ರೂ. ನಿರೀಕ್ಷೆಯಲ್ಲಿದ್ದ ನೌಕರರಿಗೆ ನಿರಾಸೆ- ಸಿಕ್ಕಿದ್ದು ಅದೇ ಒಂ... ಬಾಡಿಗೆದಾರರಿಗೆ ಗೃಹಜ್ಯೋತಿ' ತಂದ ಟೆನ್ಷನ್​: ಇನ್ನು ಮುಂದೆ ಸಿಗಲ್ವಾ ಫ್ರೀ ಕರೆಂಟ್‌? ಜುಲೈ: ಕರೆಂಟ್‌ ಮೀಟರ್ ರೀಡಿಂಗ್ ಇರಲ್ಲ -ಸರಾಸರಿ ಬಿಲ್‌ SMS ಮೂಲಕ ಬರುತ್ತದೆ! KSRTC: 'ಸಾರಿಗೆ ಮಿತ್ರ' ಆಪ್ ದುರುಪಯೋಗ- ಕರ್ತವ್ಯಕ್ಕೆ ಹಾಜರಾಗದೆ ಸಹೋದ್ಯೋಗಿಗೆ ಫೋನ್‌ ಕೊಟ್ಟು ಹಾಜರಿ ಪಡೆಯುತ್ತಿರುವ... ಸಾರಿಗೆ ನೌಕರರಿಗೆ ಸಮಾನ ವೇತನ ಸೇರಿದಂತೆ 3 ಬೇಡಿಕೆಗಳ ಈಡೇರಿಕೆಗೆ ಕೂಟ ಒತ್ತಾಯ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್‌ಗೆ ಮ... ಗುಟ್ಕಾ ಉಗಿಯಲು ಬಗ್ಗಿದ ವಿದ್ಯಾರ್ಥಿ ತಲೆಗೆ ಬಡಿದ ಟಿಪ್ಪರ್: ಕ್ಷಣಾರ್ಧದಲ್ಲೇ ರುಂಡ ಕಟ್‌, ಬಸ್ಸಿನಲ್ಲಿ ನೇತಾಡಿದ ಮುಂಡ... KSRTC: ನೌಕರರ ಹೆಚ್ಚಳದ ಶೇ.12.5ರಷ್ಟು ವೇತನ ಜುಲೈ ಅಂದರೆ ಈ ತಿಂಗಳ ವೇತನದಲ್ಲಿ ಅನುಷ್ಠಾನ- ಆಗಸ್ಟ್‌ನಲ್ಲಿ ಎಲ್ಲರ ಖಾತ... NWKRTC: ವಿದ್ಯಾರ್ಥಿಗಳ ಮನವಿ ಪರಿಗಣಿಸಿ ನೂತನ ಬಸ್ ಸೇವೆಗೆ ಚಾಲನೆ- ನಿಗಮದ ಉಪಾಧ್ಯಕ್ಷ ಸುನೀಲ್ ಜೆ. ಹಣಮನ್ನವರ