NEWSVideosನಮ್ಮರಾಜ್ಯ

ಸಾರಿಗೆ ನೌಕರರಿಗೆ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಂತೆಯೇ ಸರಿ ಸಮಾನ ವೇತನ ಮಾಡುತ್ತೇವೆ: ಸಚಿವ ರಾಮಲಿಂಗಾರೆಡ್ಡಿ

ವಿಜಯಪಥ ಸಮಗ್ರ ಸುದ್ದಿ
  • ಜತೆಗೆ2020ರ  38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ 
  • ನಮ್ಮ 2024ರ ಈವರೆಗಿನ ಹಿಂಬಾಕಿ ಕೊಡಬೇಕು ಎನ್ನುವುದು ಜ್ಞಾಪಕವಿದೆ

ಬೆಂಗಳೂರು: ಸಾರಿಗೆ ನೌಕರಿಗೆ ಸರಿಸಮಾನ ವೇತನ ಕೊಡುವುದಾಗಿ ನಮ್ಮ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೇ ಹೇಳಿದ್ದೇವೆ ಅದನ್ನು ಈಡೇರಿಸುವ ನಿಟ್ಟಿನಲ್ಲಿ ಇದ್ದೀವಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದ ಪುರಭವನದಲ್ಲಿ ಮಂಗಳವಾರ ನಾಲ್ಕೂ ನಿಗಮಗಳ ಪರಿಶಿಷ್ಟ ಜಾತಿ- ಪಂಗಡಗಳ ನೌಕರರ ಸಂಘ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್‌ ಅವರ 134ನೇ ಜಯಂತಿಯಲ್ಲಿ ಅವರು ಮಾತನಾಡಿದರು.

ಹಾಗೆಯೆ 2020ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳವಾಗಿರುವ ಅದರ 38 ತಿಂಗಳ ಹಿಂಬಾಕಿ ಜತೆಗೆ 2024ರ ಜನವರಿಯಿಂದ ಆಗಬೇಕಿರುವುದು ಸೇರಿ ಈಗ ಎಲ್ಲವನ್ನು ಕೊಡುತ್ತೇವೆ ಎಂದು ಹೇಳಿದರು.

ಈಗಾಗಲೇ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಮಾತನಾಡಿದ್ದು ಅವರು ಕೂಡ ಆದಷ್ಟು ಬೇಗನೆ ಬಗೆಹರಿಸುತ್ತೇವೆ ಎಂದು ತಿಳಿಸಿದ್ದಾರೆ. ಹೀಗಾಗಿ ಯಾರು ಆತಂಕಪಡುವುದು ಬೇಡ ಎಲ್ಲವೂ ಜ್ಞಾಪಕವಿದೆ. ಒಂದು ಮುಕ್ತಾಯ ಹಂತಕ್ಕೆ ಬರಬೇಕು ಬರುತ್ತವೆ ಎಂದು ಹೇಳಿದರು.

ಚಾಲಕ-ನಿರ್ವಾಹಕರ 35 ಸಾವಿರ ಕೇಸ್‌ಗಳು ವಜಾ: ಇನ್ನು ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರ ವಿರುದ್ಧ ಹಾಕಲಾಗಿದೆ 35 ಸಾವಿರ ಪ್ರಕರಣಗಳನ್ನು ನಮ್ಮ ಎಂಡಿ ಅನ್ಬುಕುಮಾರ್‌ ಅವರು ವಜಾ ಮಾಡಿದ್ದಾರೆ. ಅಲ್ಲದೆ ಮುಷ್ಕರದ ಸಮಯದಲ್ಲಿ ಆಗಿರುವ ಪ್ರಕರಣಗಳನ್ನು ವಾಪಸ್‌ ಪಡೆಯುವಂತೆ ಕೇಳುತ್ತಿದ್ದೀರಿ. ಒಂದು ಬಾರಿ ಎಫ್‌ಐಆರ್‌ ಆದಮೇಲೆ ಇದನ್ನು ನಾವು ವಾಪಸ್‌ ಪಡೆಯಲು ಬರುವುದಿಲ್ಲ.

ಕ್ಯಾಬಿನೆಟ್‌ ಸಬ್‌ ಕಮಿಟ್‌ ಮುಂದೆ ನಿಮ್ಮ ಕೇಸ್‌ ತನ್ನಿ: ಹೀಗಾಗಿ ಯಾರ ವಿರುದ್ಧ ಎಫ್‌ಐಆರ್‌ ಆಗಿದೆ ಅವರು ನಮ್ಮ ಗೃಹ ಸಚಿವರ ಬಳಿ ಬಂದು ಅವರ ಗಮನಕ್ಕೆ ತರಬೇಕು ಅಲ್ಲಿ ಕ್ಯಾಬಿನೆಟ್‌ ಸಬ್‌ ಕಮಿಟಿ ಇದೆ ಆ ಕಮಿಟಿಯಲ್ಲಿ ನಾವು ಮೆಂಬರ್‌ ಇದ್ದೇವೆ. ಆ ಸಬ್‌ ಕಮಿಟಿ ಮುಂದೆ ನಿಮ್ಮ ಕೇಸ್‌ಗಳು ಬಂದರೆ ನಾವು ವಿತ್‌ಡ್ರಾ ಮಾಡಿಸಬಹುದು. ಇಲ್ಲ ಎಂದರೆ ನಾವು ಕ್ಯಾಬಿನೆಟ್‌ ಮುಂದೆ ತೆಗೆದುಕೊಂಡು ಹೋಗಬೇಕು ಇದು ಬೇಡ ನೀವು ಗೃಹ ಸಚಿವರ ಬಳಿ ಕೇಸ್‌ ತೆಗೆದುಕೊಂಡು ಬನ್ನಿ ಎಂದು ಸಲಹೆ ನೀಡಿದರು.

ವಜಾಗೊಂಡಿದ್ದ ಬಹುತೇಕ ಎಲ್ಲ ನೌಕರರು ವಾಪಸ್‌ ಬಂದಿದ್ದಾರೆ, ಇನ್ನು ಕೆಲವರಿದ್ದಾರೆ ಅಷ್ಟೆ. ಆದರೆ ಎಲ್ಲರಿಗೂ ಸಿಗಬೇಕಾ ಸೌಲಭ್ಯಗಳ ಬಗ್ಗೆ ಅದನ್ನು ಸರಿ ಪಡಿಸಬೇಕು ಅದನ್ನು ನಾನು ಮಾಡಿಕೊಡುತ್ತೇನೆ ಬನ್ನಿ ಎಂದು ತಿಳಿಸಿದರು.

ಅಲ್ಲದೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಿಂದ ಈಗವರೆಗೂ 629 ಪ್ರಶಸ್ತಿಗಳು ಬಂದಿವೆ. ಪ್ರಪಂಚದಲ್ಲಿ ಯಾವುದೇ ಸಂಸ್ಥೆಗೂ ಇಷ್ಟೊಂದು ಪ್ರಶಸ್ತಿಗಳು ಬಂದಿಲ್ಲ. ಇದರ ಎಲ್ಲ ಕ್ರೆಡಿಟ್‌ಗಳು ನಮ್ಮ ನೌಕರರಿಗೆ ಹಾಗೂ ಅಧಿಕಾರಿಗಳಿಗೆ ಸಲ್ಲಬೇಕು ಎಂದರು.

ಶಕ್ತಿ ಕಾರ್ಯಮದಿಂದ ಜನರಿಗೂ ಶಕ್ತಿ ಬಂದಿದೆ ಈ ಹಿಂದೆ ಒಂದು ದಿನಕ್ಕೆ 80 ಸಾವಿರ ಪ್ರಯಾಣಿಸುತ್ತಿದ್ದರು ಈಗ 1 ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದಾರೆ. ಇದರಲಿಂದಲೂ ಸಂಸ್ಥೆಗಳಿಗೆ ಲಾಭವಾಗುತ್ತಿದೆ ಎಂದು ಹೇಳಿದರು.

Megha
the authorMegha

Leave a Reply

error: Content is protected !!