NEWSVideosನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರು ಸರ್ಕಾರಿ ನೌಕರರಾಗಿ ಮಾಡ್ತಾರೆ ಅಂತ ನಿಮ್ಮನ್ನು ಆಸೆಗಣ್ಣಿನಿಂದ ನೋಡ್ತಿದ್ದಾರೆ ಇದು ನಿಮ್ಮ ಕಾಲದಲ್ಲೇ ಆಗಬೇಕು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರು ಕಾಂಗ್ರೆಸ್‌ಗೆ ಮತಹಾಕಿ ನಮ್ಮನ್ನು ಸರ್ಕಾರಿ ನೌಕರರಾಗಿ ಮಾಡ್ತಾರೆ ಅಂತ ನಿಮ್ಮನ್ನು ಆಸೆಗಣ್ಣಿನಿಂದ ನೋಡುತ್ತಿದ್ದಾರೆ ಸ್ವಾಮಿ, ದಯವಿಟ್ಟು ಇದು ಬಹಳ ದೊಡ್ಡಬೇಡಿಕೆ ಇದು ನಿಮ್ಮ ಕಾಲದಲ್ಲೇ ಆಗಬೇಕು ಸ್ವಾಮಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಲ್ಲಿ ನೌಕರರ ಪರವಾಗಿ ಸಂಘಟನೆ ಮುಖಂಡರೊಬ್ಬರು ಮನವಿ ಮಾಡಿದ್ದಾರೆ.

ಇಂದು ಮೇ 27ರ ಮಂಗಳವಾರ ಸಾಯಂಕಾಲ ನಗರದ ಪುರಭವನದಲ್ಲಿ ಸಾರಿಗೆಯ ನಾಲ್ಕೂ ನಿಗಮಗಳ ಪರಿಶಿಷ್ಟ ಜಾತಿ-ಪಂಗಳ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಬೇಡ್ಕರ್‌ ಅವರ 134ನೇ ಜಯಂತಿಯಲ್ಲಿ ಮಾತನಾಡಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಆಗಬೇಕು, ಬೇರೆಯವರ ಕಾಲದಲ್ಲಿ ಅದು ಆಗಲಿಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ತಮ್ಮ ಮುಂದೆ ಈ ಬೇಡಿಕೆಯನ್ನುಡುತ್ತಿದ್ದೇವೆ ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಸಾರಿಗೆ ಸಚಿವರನ್ನು ಒತ್ತಾಯಿಸಿದರು.

ಇನ್ನು ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರನ್ನು ಸಂಪೂರ್ಣವಾಗಿ ಸರ್ಕಾರಿ ನೌಕರರಿಗೆ ಸಮಾನವಾಗಿ ಕಾಣಬೇಕು, ವೇತನ ಸೇರಿ ಎಲ್ಲ ಸೌಲಭ್ಯಗಳು ದೊರೆಯಬೇಕು ಎಂದು ಈ ಸಮಾರಂಭದಲ್ಲಿ ಮನವಿ ಮಾಡುತ್ತಿರುವುದಾಗಿ ಮುಖಂಡರು ತಿಳಿಸಿದರು.

ಬಹಳ ಪ್ರಮುಖವಾಗಿ ಶಕ್ತಿ ಯೋಜನೆ ಜಾರಿಯಿಂದ ಸಾರಿಗೆ ನಿಗಮಗಳಿಗೆ ಶಕ್ತಿ ಬಂದಿದೆ. ಅಲ್ಲದೆ ಈವರೆಗೂ 576 ರಾಷ್ಟ್ರ ಪ್ರಶಸ್ತಿಗಳನ್ನು ನಮ್ಮ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಪಡೆದುಕೊಂಡಿವೆ. ಇದು ಹೆಮ್ಮೆಯ ವಿಷಯ. ಜತೆಗೆ ನಿಮ್ಮ ಕಾಲದಲ್ಲಿ 4 ಸಾವಿರ ಹೊಸ ಬಸ್‌ಗಳು ಬಂದಿವೆ. ಅಲ್ಲದೆ 4500 ಇ-ಬಸ್‌ಗಳು ಬರಲಿವೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಇನ್ನು ನೀವು ಈ ಬಸ್‌ಗಳಿಗೆ ನಮ್ಮ ಸಂಸ್ಥೆಯ ಚಾಲಕರನ್ನೇ ನೇಮಕ ಮಾಡುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದೀರಿ. ಇದು ಸಂಸ್ಥೆಯ ಉಳಿವೆ ಒಳ್ಳೆ ಪ್ರಯತ್ನವಾಗಿದೆ. ನಿಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಒಪ್ಪಿದರೆ ಹೊರಗಿನವರ ಅಗತ್ಯವಿರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

Megha
the authorMegha

Leave a Reply

error: Content is protected !!