ಸಾರಿಗೆ ನೌಕರರ ವೇತನ ಹೆಚ್ಚಳದ ಬಗ್ಗೆ ಮಾತನಾಡಲು ಅನಂತ ಸುಬ್ಬರಾವ್ ಯಾರು, ಚಾಲಕರೇ, ನಿರ್ವಾಹಕರೇ, ತಾಂತ್ರಿಕ ಇಲ್ಲ ಭದ್ರತಾ ಸಿಬ್ಬಂದಿಯೇ : ಚಂದ್ರು ಪ್ರಶ್ನೆ
ಬೆಂಗಳೂರು: ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ಮಾತನಾಡುವುದಕ್ಕೆ ಜಂಟಿ ಕ್ರಿಯಾ ಸಮಿತಿಯ ಅನಂತ ಸುಬ್ಬಾರಾವ್ ಯಾರು ಎಂದು ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.
1996ರರಿಂದೀಚೆಗೆ ಸಾರಿಗೆ ಸಂಘಟನೆಗಳ ಚುನಾವಣೆ ನಡೆದಿಲ್ಲ. ಅಂದರೆ ಇವರಿಗೆ ಸಾರಿಗೆ ನೌಕರರ ಬಗ್ಗೆ ಮಾತನಾಡುವ ಯಾವುದೇ ಅಧಿಕಾರವಿಲ್ಲ. ಹೀಗಾಗಿ ಇವರು ನಮ್ಮ ನೌಕರರ ಬಗ್ಗೆ ಮಾತನಾಡುವುದಕ್ಕೆ ಇವರೇನು ಸಂಸ್ಥೆಯ ಚಾಲಕರ? ನಿರ್ವಾಹಕರ? ಇಲ್ಲ ತಾಂತ್ರಿಕ ಸಿಬ್ಬಂದಿಯೇ? ಇಲ್ಲ ಸಂಸ್ಥೆಯ ಭದ್ರತಾ ಸಿಬ್ಬಂದಿಯೇ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ.
ಅನಂತ ಸುಬ್ಬರಾವ್ ಅವರು ನೌಕರರ ಪರವಾಗಿ ನಿಂತಿಲ್ಲ. ಕಾನೂನು ಬಾಹಿರವಾಗಿ ಮುಷ್ಕರಕ್ಕೆ ಕರೆ ನೀಡಿ, ಮೂಲ ವೇತನಕ್ಕೆ ಬಿಡಿಎ ಮರ್ಜ್ ಮಾಡಿ ಶೇ.25ರಷ್ಟು ವೇತನ ಹೆಚ್ಚಿಸ ಬೇಕು ಇಲ್ಲ ಮಾ.21ರಿಂದ ಮುಷ್ಕರ ಮಾಡುತ್ತೇವೆ ಎಂದು ಹೇಳಿಕೆ ನೀಡಿದರು.
ಇವರ ಬೇಡಿಕೆಯಂತೆ ಸರ್ಕಾರ ಶೇ.25ರಷ್ಟು ವೇತನ ಹೆಚ್ಚಳ ಮಾಡಿಲ್ಲ. ಆದರೂ ಕೂಡ ಇವರು ಏಕಾಏಕಿ ಮುಷ್ಕರವನ್ನು ಏಕೆ ವಾಪಸ್‌ಪಡೆದರು. ಇದು ನೌಕರರ ದಿಕ್ಕು ತಪ್ಪಿಸುವ ಹುನ್ನಾರವಲ್ಲವೇ ಎಂದು ಕಿಡಿಕಾರಿದರು.
ಇದಿಷ್ಟೇ ಅಲ್ಲದೆ, ಇವರ ಬೇಡಿಕೆಗೆ ಸ್ಪಂದಿಸದ ಸಿಎಂ ಅವರನ್ನು ಭೇಟಿ ಮಾಡಿ ಹೂ ಗುಚ್ಛ ನೀಡುವ ಮೂಲಕ ನಮ್ಮ ಬೇಡಿಕೆಗೆ ಸ್ಪಂದಿಸಿದ್ದಕ್ಕೆ ನಿಮಗೆ ಅಭಿನಂದನೆ ತಿಳಿಸಲು ಬಂದಿದ್ದೇವೆ ಎನ್ನುತ್ತಾರೆ ಎಂದರೆ, ಇವರ ಯಾವ ಬೇಡಿಕೆ ಈಡೇರಿದೆ ಎಂದು ನೌಕರರು ತಿಳಿದು ಕೊಳ್ಳಬೇಕು ಎಂದು ಪ್ರಶ್ನಿಸಿದರು.
ಇದಿಷ್ಟೇ ಅಲ್ಲದೆ ಬಿಎಂಟಿಸಿ ಸಿಎಲ್‌ಒ ವೆಂಕಟೇಶ್ ಅವರು ನಮ್ಮನ್ನು ಕರೆದು ಬೇಡಿಕೆ ಈಡೇರುವ ಮಾತನಾಡುವ ಬದಲಿಗೆ ನೀವು ಮಾ.24ರಿಂದ ಮುಷ್ಕರ ಮಾಡಿದರೆ, ಏನು ಮಾಡುತ್ತೇವೆ ನೋಡಿ ಎಂದು ಬೆದರಿಕೆ ಹಾಕುತ್ತಾರೆ. ಅಲ್ಲದೆ, ನಿನ್ನನ್ನು ಹೇಗೆ ಮುಗಿಸಬೇಕು, ನಿಮ್ಮ ಸಂಘಟನೆಯನ್ನು ಹೇಗೆ ಮುಗಿಸಬೇಕು ಎಂಬುವುದು ನನಗೆ ಗೊತ್ತಿದೆ ಎಂದು ಹೆದರಿಸುತ್ತಾರೆ.
ಅಂದರೆ ಇವರು ನೌಕರರಿಗೆ ಒಳ್ಳೆಯದನ್ನು ಮಾಡಲು ಸಂಸ್ಥೆಗೆ ಬಂದಿರೋದ ಇಲ್ಲ ನೌಕರರ ಮುಗಿಸುವ ಹಠದಿಂದ ಬಂದಿರೋದ ಎಂಬುವುದು ಗೊತ್ತಾಗುತ್ತಿಲ್ಲ. ಅಲ್ಲದೆ ಇವರು ನೌಕರರ ಬಗ್ಗೆ ಕಟುಕರಂತೆ ನಡೆದುಕೊಳ್ಳುತ್ತಾರೆ ಎಂದು ಆರೋಪಿಸಿದರು.
ಈ ವೇಳೆ ವಕೀಲ ಅಮೃತೇಶ್ ಮಾತನಾಡಿ, ಈ ಸಿಎಲ್‌ಒ ವಿರುದ್ಧ ಈಗಾಗಲೇ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಸಂಬಂಧ ವಿಲ್ಸನ್‌ಗಾರ್ಡನ್ ಪೊಲೀಸ್‌ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ತಿಳಿಸಿದರು.
ಇವರ ಜತೆಗೆ ವಕೀಲ ನಟರಾಜ ಶರ್ಮಾ, ಕೂಟದ ಮಹಿಳಾಧ್ಯಕ್ಷೆ ಚಂಪಕಾವತಿ, ಸಾರಿಗೆ ನೌಕರರು ಇದ್ದರು.