ಬೆಂಗಳೂರು: ಕರ್ನಾಟಕ ಗೃಹ ಜ್ಯೋತಿ ಯೋಜನೆಯು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಭರವಸೆಗಳಲ್ಲಿ ಒಂದಾಗಿದ್ದು, ಈಗ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿದೆ. ಹೀಗಾಗಿ ಅದನ್ನು ಈಡೇರಿಸಲು ಸರ್ಕಾರ ಕೂಡ ಮುಂದಡಿ ಇಟ್ಟಿದೆ.
ಕರ್ನಾಟಕದಲ್ಲಿ ಸರ್ಕಾರ ಗೃಹ ಜ್ಯೋತಿ ಯೋಜನೆಯನ್ನು ಜಾರಿಗೆ ತರಲು ಬದ್ಧವಾಗಿದೆ. ಅದಕ್ಕಾಗೆ ಎರೆಡನೇ ಕ್ಯಾಬಿನೆಟ್ ಮೀಟಿಂಗ್ ನಡೆಯುವ ಮೊದಲೇ ಈ ಯೋಜನೆಯನ್ನು ಈ ಕೆಳಕಂಡ ನಿಯಮಗಳ ಮೂಲಕ ಜಾರಿಗೊಳಿಸಲಾಗುತ್ತಿದೆ. ಆದರೆ ಎಂದಿನಿಂದ ಈ ಸೇವೆ ಜಾರಿಗೆ ಬರಲಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಈ ಯೋಜನೆಯು ಯಾರಿಗೆ ಲಭ್ಯವಿದೆ ಹೇಗೆ ಈ ಯೋಜನೆಯನ್ನು ಪಡೆಯಬೇಕು ಈ ಯೋಜನೆ ಎಷ್ಟು ವರ್ಷಗಳ ವರೆಗೆ ಜಾರಿಯಲ್ಲಿರುತ್ತದೆ ಸರ್ಕಾರದ ಅವಧಿ ಮುಗಿದ ಮೇಲೆ ಏನು ಮಾಡಬೇಕು ಎಂಬ ಎಲ್ಲ ಮಾಹಿತಿ ಇಲ್ಲಿ ನಿಗಮಗೆ ಲಭ್ಯವಾಗಲಿದೆ.
ಮೊದಲಿಗೆ ಯೋಜನೆಯ ಪ್ರಯೋಜ ಯಾರಿಗೆಲ್ಲ ಲಭ್ಯವಿದೆ ಎಂಬುದರ ಬಗ್ಗೆ ನೋಡುವುದಾದರೆ, ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ತಿಂಗಳಿಗೆ 200 ಯೂನಿಟ್ಕ್ಕಿಂತ ಕಡಿಮೆ ಬಳಸುವ ಮನೆಯಿಂದ ಯಾವುದೇ ಮೊತ್ತ ವಿಧಿಸಲಾಗುವುದಿಲ್ಲ. ಹಾಗೆಯೆ 200 ಯುನಿಟ್ಗಿಂತ ಜಾಸ್ತಿ ಉಪಯೋಗಿಸಿದರೆ ಅದರ ಮೊತ್ತವನ್ನು ಗ್ರಾಹಕರು ಬರಿಸಲೇಬೇಕು.
ಇದಕ್ಕೆ ಯಾರೆಲ್ಲ ಅರ್ಹರು ಎಂಬುದನ್ನು ನೋಡಿದರೆ.. ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು. ಮನೆಯ ವಿದ್ಯುತ್ ಸಂಪರ್ಕ ಹೊಂದಿರಬೇಕು. ಆ ಮನೆಯವರು ತಿಂಗಳಿಗೆ 200 ಯೂನಿಟ್ಗಳಿಗಿಂತ ಕಡಿಮೆ ವಿದ್ಯುತ್ ಬಳಸಿರುವ ಬಗ್ಗೆ ಈ ಹಿಂದಿನ ಬಿಲ್ಗಳಿಂದಲೇ ತಿಳಿದು ಕೊಳ್ಳಬಹುದಾಗಿದೆ.
ಇನ್ನು ಉಚಿತ ವಿದ್ಯುತ್ ಪಡೆಬೇಕು ಎಂದರೆ, ಬೇಕಾದ ಅವಶ್ಯಕ ದಾಖಲೆಗಳು.. ಕರ್ನಾಟಕದ ನಿವಾಸ ಪುರಾವೆ
ಆಧಾರ್ ಕಾರ್ಡ್.
ವಿದ್ಯುತ್ ಸಂಪರ್ಕ.
ಮೊಬೈಲ್ ನಂಬರ್.
ಅರ್ಜಿ ಸಲ್ಲಿಸಬೇಕೆ ಬೇಡವೇ? ಕರ್ನಾಟಕ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು ಎಲ್ಲಿಯೂ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಕರ್ನಾಟಕದಲ್ಲಿ ವಿದ್ಯುತ್ ಇಲಾಖೆಯ ನೆರವಿನೊಂದಿಗೆ ಕರ್ನಾಟಕ ಗೃಹ ಜ್ಯೋತಿ ಯೋಜನೆ ಜಾರಿಗೊಳ್ಳಲಿದ್ದು, ಕರ್ನಾಟಕ ಸರ್ಕಾರವು ತಿಂಗಳಿಗೆ 200 ಯೂನಿಟ್ ವಿದ್ಯುತ್ ಬಳಕೆಗೆ ಉಚಿತ ವಿದ್ಯುತ್ ನೀಡಲಿದೆ.
ಯಾವುದೇ ಮನೆಯಾಗಿರಲಿ 200 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಸಿದರೆ ವಿದ್ಯುತ್ ಬಿಲ್ಗಳು ಸ್ವಯಂಚಾಲಿತವಾಗಿ ಶೂನ್ಯಕ್ಕೆ ಹೊಂದಿಸಲ್ಪಡುತ್ತವೆ. ಪ್ರತಿ ಸಂಪರ್ಕಕ್ಕೆ ಮಾಸಿಕ ವಿದ್ಯುತ್ ಬಳಕೆ 200 ಯೂನಿಟ್ಗಿಂತ ಕಡಿಮೆಯಿದ್ದರೆ ಫಲಾನುಭವಿಗಳು ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ.
ಒಂದು ಮನೆಯ ಮಾಸಿಕ ವಿದ್ಯುತ್ ಬಳಕೆಯು ತಿಂಗಳಿಗೆ 200 ಯೂನಿಟ್ಗಳಿಗಿಂತ ಹೆಚ್ಚಿದ್ದರೆ ಆ ಕುಟುಂಬವು ಕರ್ನಾಟಕ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಅರ್ಹರಾಗಿರುವುದಿಲ್ಲ.
ಈ ಸರ್ಕಾರದ ಅವಧಿ ಮುಗಿದ ಮೇಲೆ ಏನು ಮಾಡಬೇಕು: ಕರ್ನಾಟಕ ಗೃಹ ಜ್ಯೋತಿ ಯೋಜನೆಯು ಅದರ ಅನುಷ್ಠಾನದ ನಂತರ ಕರ್ನಾಟಕ ರಾಜ್ಯದ ಪ್ರಮುಖ ಕಲ್ಯಾಣ ಯೋಜನೆಯಾಗಲಿದೆ. ಈ ಹಣದುಬ್ಬರದ ಯುಗದಲ್ಲಿ ಕರ್ನಾಟಕದ ಮನೆಗಳಿಗೆ ಬೆಂಬಲ ನೀಡುವುದು ಕರ್ನಾಟಕ ಗೃಹ ಜ್ಯೋತಿ ಯೋಜನೆಯನ್ನು ಪ್ರಾರಂಭಿಸುವ ಹಿಂದಿನ ಮುಖ್ಯ ಉದ್ದೇಶವಾಗಿದೆ.
ಕರ್ನಾಟಕ ಗೃಹ ಜ್ಯೋತಿ ಯೋಜನೆಯನ್ನು ಸಹ ಕರೆಯಲಾಗುತ್ತದೆ : ಕರ್ನಾಟಕ ಉಚಿತ ವಿದ್ಯುತ್ ಯೋಜನೆ” ಇದರಲ್ಲಿ ಕರ್ನಾಟಕದ ಪ್ರತಿ ಮನೆಗೂ ಉಚಿತ ವಿದ್ಯುತ್ ಒದಗಿಸಲಾಗುವುದು. ಹಾಗೆ ಈ ಯೋಜನೆಯು ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವವರೆಗೂ ಜಾರಿಯಲ್ಲಿರುತ್ತದೆ ಅಂದರೆ 5 ವರ್ಷಗಳ ವರೆಗೆ ಜಾರಿ ಇರುತ್ತದೆ, ಆನಂತರ ಮತ್ತೆ ಯಾವ ಪಕ್ಷ ಆಡಳಿತಕ್ಕೆ ಬರುತ್ತದೆ ಎಂಬ ಆದಾರದ ಮೇಲೆ ಅವರ ಆಡಳಿತದ ದಕ್ಷತೆಯ ಮೇಲೆ ಈ ಯೋಜನೆಯನ್ನು ಮುಂದುವರಿಸಬಹುದು ಇಲ್ಲವಾದರೆ ಅಲ್ಲಿಗೆ ನಿಲ್ಲಿಸಬಹುದು.