CrimeNEWSಬೆಂಗಳೂರು

BMTC ನಿರ್ವಾಹಕಿ ಮೇಲೆ ಹಲ್ಲೆ ಮಾಡಿ, ಕೆನ್ನೆ ಪರಚಿ ರಕ್ತಗಾಯ ಮಾಡಿದ ಮಹಿಳೆ ಜೈಲಿಗೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಉಚಿತ ಟಿಕೆಟ್ ಪಡೆಯಲು ಗುರುತಿನ ಚೀಟಿ ತೋರಿಸುವ ವಿಚಾರವಾಗಿ ಜಗಳ ನಡೆದು ನಿಗಮದ ಕಂಡಕ್ಟರ್ ಮೇಲೆ ಹಲ್ಲೆ ಮಾಡಿ ಉಗುರುಗಳಿಂದ ಮುಖ ಪರಚಿ ಗಾಯಗೊಳಿಸಿದ್ದ ಖಾಸಗಿ ಕಂಪನಿ ಉದ್ಯೋಗಿಯನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಿರ್ವಾಹಕಿ ಮೇಲೆ ಹಲ್ಲೆ ಮಾಡಿದ ಚಿಕ್ಕಬಾಣವರ ನಿವಾಸಿ ಮೋನಿಶಾ (30) ಜೈಲು ಸೇರಿದ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿ.

ಮೋನಿಶಾ ಭಾನುವಾರ ಬೆಳಗ್ಗೆ ಬಿಎಂಟಿಸಿ ಘಟಕ – 46ರ ಬಸ್ ನಿರ್ವಾಹಕಿ ಸುಕನ್ಯಾ (49) ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದು ಅಲ್ಲದೇ ಅವರ ಮೇಲೆ ಹಲ್ಲೆ ಮಾಡಿ, ಮುಖಕ್ಕೆ ಪರಚುವ ಮೂಲ ರಕ್ತಗಾಯ ಮಾಡಿದ್ದರು.

ಈ ಸಂಬಂಧ ನಿರ್ವಾಹಕಿ ಸುಕನ್ಯಾ ಅವರು ಪೊಲೀಸ್‌ ಠಾಯಲ್ಲಿ ದೂರು ನೀಡಿದ್ದು, ಬಾಗಲಗುಂಟೆ ಠಾಣೆ ಪೊಲೀಸರು ಆರೋಪಿ ಮೋನಿಶಾಳನ್ನು ಬಂಧಿಸಿ ಬಳಿಕ ಸಂಕ್ರಾಂತಿ ಹಬ್ಬದ ರಜೆ ಹಿನ್ನೆಲೆಯಲ್ಲಿ 31ನೇ ಎಸಿಎಂಎಂ ನ್ಯಾಯಾಧೀಶರ ಮನೆಗೆ ಹಾಜರುಪಡಿದ್ದರು. ನ್ಯಾಯಾಧೀಶರು ಆರೋಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಚಾಲಕ ಮತ್ತು ನಿರ್ವಾಹಕರನ್ನು ಕೆಲ ಸಾರ್ವಜನಿಕರು ಕೀಳಾಗಿ ಕಾಣುವ ಮೂಲಕ ಅವರೊಬ್ಬರ ಸರ್ಕಾರಿ ನೌಕರರು ಎಂಬುದನ್ನೆ ಮೆರೆತು ಈ ರೀತಿ ವರ್ತಿಸುತ್ತಿರುವುದು ಇತ್ತೀಚೆಗಂತು ತೀರ ಸಾಮಾನ್ಯ ಎಂಬಂತಾಗಿದೆ.

ಹೀಗಾಗಿ ಈ ನಡುವೆ ಈ ರೀತಿ ಚಾಲಕರು ಮತ್ತು ನಿರ್ವಾಹಕರ ಮೇಲೆ ಹಲ್ಲೆ ಮಾಡುವ ಕೆಲ ಕಿಡಿಗೇಡಿಗೆಗಳಿಗೆ ಸಂಸ್ಥೆಯ ಅಧಿಕಾರಿಗಳು ತಕ್ಕ ಪಾಠ ಕಲಿಸಲು ಮುಂದಾಗಿದ್ದು, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇ ಬೇಕು ಎಂದು ಕಾನೂನಿ ಮೊರೆ ಹೋಗುವುದಕ್ಕೆ ಚಾಲನಾ ಸಿಬ್ಬಂದಿಗೆ ಸಲಹೆ ನೀಡಿ ಮತ್ತು ಬೆನ್ನೆಲುಬಾಗಿ ನಿಲ್ಲುತ್ತಿರುವುದರಿಂದ ಕಾನೂನು ಮೀರಿ ವರ್ತಿಸುವ ಕೆಲವರಿಗೆ ಶಿಕ್ಷೆಯಾಗುತ್ತಿದೆ.

ಇನ್ನು ಈ ಬಗ್ಗೆ ಜನರು ಸಹ ಕಾನೂನಿನ ತಿಳಿವಳಿಗೆ ಮೂಡಿಸಿಕೊಳ್ಳುವ ಮೂಲಕ ಕರ್ತವ್ಯ ನಿರತ ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡಿದರೆ ಶಿಕ್ಷೆಗೊಳಗಾಗಬೇಕುತ್ತದೆ ಎಂಬುದನ್ನು ಅರಿತು ನಡೆದುಕೊಳ್ಳಬೇಕು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಸಲಹೆ ನೀಡಿದ್ದಾರೆ.

ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರತ ಚಾಲನಾ ಸಿಬ್ಬಂದಿಗಳಾದ ಚಾಲಕರು ಮತ್ತು ನಿರ್ವಾಹಕರು ಅವರ ಕೆಲಸ ಅವರು ಮಾಡಲು ಬಿಡಬೇಕು ಅದನ್ನು ಬಿಟ್ಟು ರಸ್ತೆಯಲ್ಲಿ ಅಡ್ಡದಿಡ್ಡ ವಾಹನಗಳನ್ನು ಚಲಾಯಿಸಿ ಬಳಿಕ ಹಲ್ಲೆ ಮಾಡುವುದು ಮತ್ತೊಂದು ಕಡೆ ನಿರ್ವಾಹಕರು ಟಿಕೆಟ್‌ ತೆಗೆದುಕೊಳ್ಳಿ ಎಂದು ಹೇಳಿದರು ಕೇಳಿಸದ ರೀತಿ ವರ್ತಿಸುವುದು ಬಳಿಕ ಗಲಾಟೆ ಮಾಡಿದರೆ ಕಾನೂನಿನ ಪ್ರಕಾರ ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

ಅದಕ್ಕೆ ತಾಜಾ ನಿದರ್ಶನ ಎಂಬುಂತೆ ಮೋನಿಶಾ ಅವರು ನಿರ್ವಾಹಕರು ಕೇಳಿದ ಆಧಾರ್‌ ಕಾರ್ಡ್‌ ತೋರಿಸಿ ಟಿಕೆಟ್‌ ಪಡೆದುಕೊಂಡಿದ್ದರೆ ಇಂದು ಜೈಲಿನಲ್ಲಿ ಮುದ್ದೆ ಮುರಿಯುವ ಪರಿಸ್ಥಿತಿ ಬರುತ್ತಿರಲಿಲ್ಲ. ಕೇವಲ 1-2 ಹೆಚ್ಚು ಎಂದರೆ 6-7 ಗಂಟೆ ಪ್ರಯಾಣ ಮಾಡುವ ನಾವುಗಳು ನೌಕರರ ಜತೆ ಸೌಜನ್ಯದಿಂದ ನಡೆದುಕೊಂಡರೆ ನಾವು ಕೂಡ ಸುರಕ್ಷಿತವಾಗಿ ಪ್ರಯಾಣ ಮಾಡಬಹುದು.

ಅಲ್ಲದೆ ನಮ್ಮ ಸುರಕ್ಷತೆಗಾಗಿ ಅವರು ಕರ್ತವ್ಯ ನಿರ್ವವಹಿಸುವುದರಿಂದ ಅವರ ಕರ್ತವ್ಯಕ್ಕೆ ಅಡ್ಡಿ ಬಾರದ ರೀತಿ ನಡೆದುಕೊಂಡರೆ ಅವರಿಗೂ ಕೂಡ ಟಿಕೆಟ್‌ ಚೆಕಿಂಗ್‌ ಅಧಿಕಾರಿಗಳು ಒಂದರೂ ಯಾವುದೇ ಒತ್ತಡ ಇರದೆ ಕರ್ತವ್ಯ ನಿರ್ವಹಿಸಲು ಅನುವಾಗುತ್ತದೆ ಅಲ್ಲವೇ? ಹೀಗಾಗಿ ನಾವು ನೌಕರರ ಜತೆ ಒಳ್ಳೆ ಬಾಂಧವ್ಯ ಬೆಳೆಸಿಕೊಳ್ಳಲು ಇನ್ನಾದರೂ ಮುಂದಾಗಬೇಕಿದೆ  ಎಂದು ವಕೀಲ ಮಹದೇವ್‌ ಸಲಹೆ ನೀಡಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ