ಬೆಂಗಳೂರು: ಇವಳು ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನಗೊಂಡ ಪತಿ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿಯಲ್ಲಿ ನಡೆದಿದೆ.
ತಮ್ಮನಾಯಕನಹಳ್ಳಿಯ ನಿವಾಸಿ ಲಕ್ಷ್ಮಮ್ಮ (40) ಪತಿಯಿಂದಲೇ ಕೊಲೆಯಾದವರು. 45 ವರ್ಷದ ಮಹದೇವಯ್ಯ ಪತ್ನಿಯನ್ನು ಹತ್ಯೆಗೈದ ಪತಿ.
ದೊಣ್ಣೆಯಿಂದ ಲಕ್ಷ್ಮಮ್ಮನನ್ನು ಹೊಡೆದು ಕೊಂದಿದ್ದಾನೆ ಈ ಪಾಪಿ ಮಹದೇವಯ್ಯ. ಈ ದಂಪತಿಗೆ ಆರು ಮಂದಿ ಮಕ್ಕಳಿದ್ದು, ಮಹದೇವಯ್ಯ ಆನೇಕಲ್ನ ಸ್ಟ್ರೈಡ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಪತ್ನಿ ಲಕ್ಷ್ಮಮ್ಮ ಗಾರೆ ಕೆಲಸ ಮಾಡಿಕೊಂಡಿದ್ದಳು.
ಆದರೆ ಮಹದೇವಯ್ಯಗೆ ಗಾರೆ ಕೆಲಸ ಮಾಡುವ ವ್ಯಕ್ತಿಯ ಜೊತೆ ಲಕ್ಷ್ಮಮ್ಮ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ. ಈ ವಿಚಾರಕ್ಕೆ ಹಲವು ಬಾರಿ ಲಕ್ಷ್ಮಮ್ಮ ಹಾಗೂ ಮಹದೇವಯ್ಯ ನಡುವೆ ಗಲಾಟೆ ಕೂಡ ನಡೆದಿತ್ತು.
ಗಂಡ -ಹೆಂಡತಿ ಜಗಳ ಇಡೀ ತಮ್ಮನಾಯಕನಹಳ್ಳಿ ಗ್ರಾಮದ ಜನಕ್ಕೆ ತಿಳಿದಿತ್ತು. ಜನರು ಅಕ್ರಮ ಸಂಬಂಧದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ಮನನೊಂದಿದ್ದ ಮಹದೇವಯ್ಯ ಮನೆಯಲ್ಲಿ ಪತ್ನಿ ಮಲಗಿದ್ದಾಗಲೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)